ಭಾರತ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಉಜ್ವಲ್ ಗ್ಯಾಸ್ ಯೋಜನೆ (PM Ujjwala Yojana) ಅಡಿಯಲ್ಲಿ ಕೋಟ್ಯಾಂತರ ಜನರ ಮನೆಗೆ ಗ್ಯಾಸ್ ಕನೆಕ್ಷನ್ ನೀಡುವಂತಹ ಕೆಲಸವನ್ನು ಈಗಾಗಲೇ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಮಾಡಿಕೊಂಡು ಬಂದಿದ್ದು ಗ್ಯಾಸ್ ಬೆಲೆ ಏರಿಕೆಯಾಗಿದ್ದರೂ ಕೂಡ ಆ ಯೋಜನೆ ಅಡಿಯಲ್ಲಿ ಸಿಗುವಂತಹ ಸಬ್ಸಿಡಿ (LPG Subsidy) ಕಾರಣದಿಂದಾಗಿ ಪ್ರತಿಯೊಬ್ಬರು ಕೈಗೆಟಕುವ ದರದಲ್ಲಿ ಎಲ್ಪಿಜಿ ಗ್ಯಾಸ್ ಅನ್ನು ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಇನ್ನು ಇವತ್ತಿನ ಈ ಲೇಖನದ ಮೂಲಕ ಯಾವ ರೀತಿಯಲ್ಲಿ ಈ ಸಬ್ಸಿಡಿಯ ಸ್ಟೇಟಸ್ ಚೆಕ್ ಮಾಡಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಲು ಹೊರಟಿದ್ದು ತಪ್ಪದೆ ಲೇಖನವನ್ನು ಕೊನೆಯವರೆಗೂ ಓದಿ.
ವರ್ಷಕ್ಕೆ 12 ಸಿಲಿಂಡರ್ ಗಳು ಈ ಯೋಜನೆ (PM Ujjwala Yojana) ಅಡಿಯಲ್ಲಿ ನಿಮಗೆ ದೊರಕಲಿದ್ದು ಇವುಗಳ ಮೇಲೆ ಪ್ರತಿ ಸಿಲಿಂಡರ್ ಗೆ 200 ರಿಂದ 300 ರೂಪಾಯಿಗಳ ಸಬ್ಸಿಡಿ ಹಣವನ್ನು ನೀವು ಪಡೆದುಕೊಳ್ಳಬಹುದಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ನೇರವಾಗಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಕ್ರೆಡಿಟ್ ಆಗಲಿದೆ. ಇನ್ನು ಪ್ರಮುಖವಾಗಿ ನೀವು ಈ ಸಬ್ಸಿಡಿ (LPG Subsidy) ಪಡೆದುಕೊಳ್ಳುವುದಕ್ಕಾಗಿ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಇಲ್ಲವಾದಲ್ಲಿ ನಿಮಗೆ ಸಬ್ಸಿಡಿ ದೊರಕುವುದಿಲ್ಲ.
ನೀವು ಗ್ಯಾಸ್ ಪಡೆದುಕೊಳ್ಳುತ್ತಿರುವಂತಹ ಏಜೆನ್ಸಿಯ ಬಳಿ ಹೋಗಿ ಸುಲಭ ರೂಪದಲ್ಲಿ ಕೆವೈಸಿಯನ್ನು ಪೂರ್ಣಗೊಳಿಸಬಹುದಾಗಿದೆ. ಸರಿಯಾದ ಅರ್ಹ ಫಲಾನುಭವಿಗಳಿಗೆ ಎಲ್ಪಿಜಿ ಗ್ಯಾಸ್ (LPG Cylinder) ಸಿಕ್ತಾ ಇದೆ ಅನ್ನೋದನ್ನ ಖಚಿತಪಡಿಸಿಕೊಳ್ಳುವುದಕ್ಕಾಗಿ ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ನೀವು ನಿಮ್ಮ ಸಬ್ಸಿಡಿ ಹಣವನ್ನು ಬ್ಯಾಂಕಿನ ಖಾತೆಗೆ ನೇರವಾಗಿ ಪಡೆದುಕೊಳ್ಳಬೇಕು ಎನ್ನುವುದಿದ್ದರೆ ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ತಿ ಗೊಳಿಸಬೇಕು.