Udyogini Yojana: 3 ಲಕ್ಷ ಸಾಲಕ್ಕೆ ಅರ್ಧ ಹಣ ಕಟ್ಟಿದರೆ ಸಾಕು! ಮಹಿಳೆಯರಿಗೆ ಹೊಸ ಯೋಜನೆ

Join WhatsApp

ಇಂದು ರಾಜ್ಯ ಮತ್ತು ಕೇಂದ್ರ ಸರಕಾರಗಳು ಮಹಿಳಾ ಪರವಾದ ಯೋಜನೆಗಳನ್ನು ಹೆಚ್ಚು ಹಮ್ಮಿಕೊಳ್ಳುತ್ತಿದೆ. ಈಗಾಗಲೇ ಮಹಿಳೆಯರನ್ನು ಆರ್ಥಿಕ ವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಗೃಹಲಕ್ಷ್ಮಿ (Gruha Lakshmi), ಶಕ್ತಿ ಯೋಜನೆ,ಮಾತೃ ವೃಂದ ಯೋಜನೆ ಹೀಗೆ ಹಲವು ರೀತಿಯ ಮಹಿಳಾ ಪರವಾದ ಯೋಜನೆಗಳು‌ ಇರಲಿದೆ. ಹಾಗೆಯೇ ಮಹಿಳೆಯರು ಸ್ವ ಉದ್ಯಮ ಪಡೆಯಲು, ಅವರೇ ಉದ್ಯಮ ಸ್ಥಾಪಿಸಲು ಸರಕಾರ ಇದೀಗ ಬೆಂಬಲ ನೀಡ್ತಾ ಇದೆ. ಇದಕ್ಕಾಗಿ ಸರಕಾರವು ಸಾಲ ಸೌಲಭ್ಯ ವನ್ನು ವಿತರಣೆ ಮಾಡುವ ಮೂಲಕ ಸ್ವ ಉದ್ಯಮ ವನ್ನು‌ ಕೈಗೊಳ್ಳ ಬಹುದಾಗಿದೆ.

ಸರಕಾರವು 2015-16ರಲ್ಲಿ ‌ ಉದ್ಯೋಗಿನಿ ಯೋಜನೆ (Udyogini Yojana) ಯನ್ನು ಜಾರಿ ಮಾಡಿದ್ದುಇದರ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ಕೈಗೊಳ್ಳಲು ಸಾಲವನ್ನು ನೀಡಲಾಗುತ್ತದೆ. ಮಹಿಳಾ ಸಬಲೀಕರಣ ಮಾಡುವ ಉದ್ದೇಶದೊಂದಿಗೆ ಕಡಿಮೆ ಬಡ್ಡಿದರದಲ್ಲಿ ಈ ಯೋಜನೆಯಡಿ ಸಾಲ ದ ಜೊತೆಗೆ ಸಬ್ಸಿಡಿ ನೀಡಲಿದೆ.

ಮೂರು ಲಕ್ಷ ಸಾಲ ಸೌಲಭ್ಯ:

 

Image Credit: News18

ಇದು SC, ST, ಸಾಮಾನ್ಯ ವರ್ಗದ ಮಹಿಳೆಯರಿಗೆ ಜಾರಿ ಮಾಡಿರುವಂತಹ ಯೋಜನೆ ಯಾಗಿದ್ದು ಮಹಿಳೆಯರಿಗೆ 3 ಲಕ್ಷದವರೆಗೆ ಸಬ್ಸಿಡಿ ಯೊಂದಿಗೆ ಸಾಲಸೌಲಭ್ಯವನ್ನು ಕೂಡ ನೀಡಲಾಗುತ್ತೆ. ಈ ಯೋಜನೆಯ (Udyogini Yojana) ಮೂಲಕ ಪಡೆದಂತಂಹ ಸಾಲಕ್ಕೆ ಸರಕಾರ ಸಬ್ಸಿಡಿಯನ್ನು ಕೂಡ ಒದಗಿಸಲಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಮೇಲೆ ಶೇ.50ರಷ್ಟು ಸಬ್ಸಿಡಿ ಸಾಮಾನ್ಯ ವರ್ಗಕ್ಕೆ ಸೇರಿದ ಮಹಿಳೆಯರಿಗೆ ಸಾಲದಮೇಲೆ 30% ಸಬ್ಸಿಡಿ ನೀಡಲಿದೆ.

ಇವರು ಅರ್ಹರು:

 

Image Credit: Tv9
  • 18 ರಿಂದ 55 ವರ್ಷ ವಯಸ್ಸಿನ ಮಹಿಳಾ ಫಲಾನುಭವಿಗಳು ಮಾತ್ರ ಈ ಯೋಜನೆಯ ಸಾಲ ಪಡೆಯಲು ಅರ್ಹರು.
  • ಕರ್ನಾಟಕ ರಾಜ್ಯದ ಖಾಯಂ ನಾಗರಿಕ ಮಹಿಳೆಯರು ಮಾತ್ರ ಈ ಯೋಜನೆಗೆ ಅರ್ಹರು
  • ಇನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಫಲಾನುಭವಿಗಳ ವಾರ್ಷಿಕ ಆದಾಯ 2,00,000 ರೂ.ಗಿಂತ ಕಡಿಮೆ ಇರಬೇಕು.

ಹಾಗೆಯೇ ಸಾಮಾನ್ಯ ವಿಶೇಷ ವರ್ಗದ ಮಹಿಳಾ ಫಲಾನುಭವಿಗಳ ವಾರ್ಷಿಕ ಆದಾಯ ರೂ.1,50,000 ಕ್ಕಿಂತ ಕಡಿಮೆ ಇರಬೇಕು.

ಈ ದಾಖಲೆ ಬೇಕು

  • ಆಧಾರ್ ಕಾರ್ಡ್
  • ಜನನ ಪ್ರಮಾಣಪತ್ರ.
  • ರೇಷನ್ ಕಾರ್ಡ್
  • ಬ್ಯಾಂಕ್ ಖಾತೆ ವಿವರಗಳು.
  • ಮೊಬೈಲ್ ಸಂಖ್ಯೆ

ಉದ್ಯೋಗಿನಿ ಯೋಜನೆ (Udyogini Yojana) ಸಾಲಸೌಲಭ್ಯಕ್ಕಾಗಿ ಅರ್ಜಿ ಹಾಕಲು ಮಹಿಳೆಯರು https://kswdc.karnataka.gov.in ಇಲ್ಲಿ ಅರ್ಜಿ ಹಾಕಬಹುದಾಗಿದೆ.

Leave a Comment

Your email address will not be published. Required fields are marked *

Scroll to Top