ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡ್ತಾ ಇರಲಿದ್ದು ಅದರಲ್ಲಿ ಮಹಿಳಾ ಪರವಾದ ಮುಖ್ಯವಾದ ಯೋಜನೆ ಗೃಹಲಕ್ಷ್ಮಿ (Gruha Lakshmi) ಕೂಡ ಒಂದಾಗಿದೆ. ಮಹಿಳೆಯರು ಆರ್ಥಿಕ ವಾಗಿ ಸಬಲರಾಗಬೇಕು, ಅವರಿಗೂ ಮೂಲಭೂತ ವಸ್ತುಗಳನ್ನು ಖರೀದಿ ಮಾಡುವಂತೆ ಆಗಬೇಕು ಎಂದು ಸರಕಾರ ಮಹಿಳಾ ಪರವಾದ ಯೋಜನೆ ಜಾರಿ ಮಾಡಿದೆ. ಈ ಯೋಜನೆ ಮೂಲಕ ಮನೆಯ ಮುಖ್ಯ ಮಹಿಳೆಗೆ ತಿಂಗಳಿಗೆ ಎರಡು ಸಾವಿರ ಮೊತ್ತವನ್ನು ಜಮೆ ಮಾಡ್ತಾ ಇದೆ. ಇದುವರೆಗೂ ಜೂನ್ ವರೆಗೆ ಕೆಲವು ಮಹಿಳೆಯರಿಗೆ ಹಣ ಬಿಡುಗಡೆ ಯಾಗಿದೆ.
ಹೊಸ ಆದೇಶ:
ಆದರೆ ಇನ್ಮುಂದೆ ಕೆಲವೊಂದು ಮಹಿಳೆಯರ ಹೆಸರನ್ನು ಈ ಯೋಜನೆಯಿಂದ ನಿಷ್ಕ್ರಿಯ ಮಾಡಲಿದೆ. ಹೌದು ರಾಜ್ಯ ಸರಕಾರ ಇದೀಗ ಈ ಬಗ್ಗೆ ಮಹತ್ವದ ಆದೇಶ ಜಾರಿ ಮಾಡಿದೆ. ಇಂದು ಅರ್ಹತೆ ಇಲ್ಲದೆ ಇದ್ದವರು ಕೂಡ ಈ ಗೃಹಲಕ್ಷ್ಮಿ ಹಣ (Gruha Lakshmi Money) ವನ್ನು ಪಡೆಯುವ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಇದೀಗ ಸುಮಾರು 1.78 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಹಣ ಪಾವತಿಗೆ ತಡೆ ಹಾಕಲಾಗಿದೆ. ಹೌದು ಆದಾಯ ತೆರಿಗೆ ಪಾವತಿ ದಾರರಾಗಿರುವವರು ಈ ಯೋಜನೆಯ ಸದುಪಯೋಗ ಮಾಡಿ ಕೊಂಡಿದ್ದು ಇಂತವರನ್ನು ಈ ಯೋಜನೆಯ ಪಟ್ಟಿಯಿಂದ ಹೊರ ಇಡಲಾಗಿದೆ.
ದಾಖಲೆ ಪರಿಶೀಲನೆ:
ಈಗಾಗಲೇ ಇಂತಹ ದಾಖಲೆಗಳನ್ನು ಪರಿಶೀಲಿಸಲು ಸರಕಾರ ತಂಡ ರಚನೆ ಮಾಡಿದ್ದು ಇ-ಗವರ್ನೆನ್ಸ್ ಇಲಾಖೆಗೆ ತನಿಖೆ ನಡೆಸಲು ಮಹಿಳಾ ಮತ್ತು ಮಕ್ಕಳ ಇಲಾಖೆ ಕೋರಿದೆ. ಈಗಾಗಲೇ ಸರಕಾರವು IT GST ಪಾವತಿದಾರರ ಪಟ್ಟಿ ಕೂಡ ಸಿದ್ಧವಾಗಿದ್ದು 2 ಲಕ್ಷಕ್ಕೂ ಹೆಚ್ಚು ಮಹಿಳೆಯರ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಸ್ಥಗಿತಗೊಳಿಸಲಾಗಿದೆ.ಹಾಗೆಯೇ ಮತ್ತೊಂದೆಡೆ ನಕಲಿ ದಾಖಲೆಗಳನ್ನು ಪಡೆಯುವರ ವಿರುದ್ಧವೂ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದೆ.
ಈಗಾಗಲೇ ಕೆಲವೊಂದು ದಾಖಲೆ ಪರಿಶೀಲನೆ ಮಾಡಿ ಆದಾಯ ತೆರಿಗೆ ಪಾವತಿಸದ ಬಗ್ಗೆ ದೃಢೀಕರಣ ಪತ್ರ ಸಲ್ಲಿಕೆ ಮಾಡಲು ತಿಳಿಸಿದ್ದು ಅದರಲ್ಲಿ 1.78 ಲಕ್ಷ ಮಂದಿ ಪೈಕಿ 6,000ಕ್ಕೂ ಹೆಚ್ಚು ಜನ ದೃಢೀಕರಣ ಪತ್ರ ಸಲ್ಲಿಕೆ ಮಾಡಿದ್ದಾರೆ. ಇದೀಗ ಇವರನ್ನು ಯೋಜನೆಗೆ ಪರಿಗಣನೆ ಮಾಡಲಾಗುತ್ತದೆ ಎಂದು ಸರಕಾರ ತಿಳಿಸಿದೆ.