ಪ್ರಧಾನಿ ನರೇಂದ್ರ ಮೋದಿ (PM Narendra Modi) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2015 ರಿಂದ ಹೆಣ್ಣು ಮಕ್ಕಳ ಉನ್ನತಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯನ್ನು ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ 10 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ಕೂಡ ಖಾತೆಯನ್ನು ತೆರೆಯಬಹುದಾಗಿದೆ. ಹಾಗಿದ್ರೆ ಬನ್ನಿ ಈ ಯೋಜನೆ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana):
250 ರೂಪಾಯಿಗಳಿಂದ ಪ್ರಾರಂಭಿಸಿ 1.5 ಲಕ್ಷರೂಪಾಯಿಗಳ ಹೂಡಿಕೆಯನ್ನು ಕೂಡ ಈ ಯೋಜನೆಯಲ್ಲಿ ಮಗಳ ಹೆಸರಿನಲ್ಲಿ ಮಾಡಬಹುದಾಗಿದೆ. 15 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗಿರುತ್ತದೆ. 21 ವರ್ಷ ಆಗುತ್ತಿದ್ದಂತೆ ಅಕೌಂಟ್ ಮೆಚುರಿಟಿ ಆಗುತ್ತದೆ. 8.2% ಬಡ್ಡಿದರವನ್ನು ನಿಗದಿಪಡಿಸಲಾಗಿದ್ದು 80 ಸಿ ಅಡಿಯಲ್ಲಿ ಇನ್ಕಮ್ ಟ್ಯಾಕ್ಸ್ ರಿಯಾಯಿತಿ (Income Tax Discount) ಕೂಡ ಸಿಗಲಿದೆ.
ಒಂದು ಕುಟುಂಬದಿಂದ ಎರಡು ಹೆಣ್ಣು ಮಕ್ಕಳಿಗೆ ಈ ಖಾತೆಯನ್ನು ಮಾಡುವಂತಹ ಅವಕಾಶವಿದ್ದು ಹತ್ತು ವರ್ಷ ವಯಸ್ಸಿಗಿಂತ ಕಡಿಮೆ ವಯಸ್ಸಾಗಿರಬೇಕಾಗಿರುತ್ತದೆ. ಬೇಕಾಗಿರುವ ಡಾಕ್ಯುಮೆಂಟ್ಸ್ ಗಳು, ಮಕ್ಕಳ ಬರ್ತ್ ಸರ್ಟಿಫಿಕೇಟ್, ತಂದೆ ತಾಯಿಯರ ಐಡಿ ಕಾರ್ಡ್, ನಿವಾಸ ಪ್ರಮಾಣ ಪತ್ರ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳು ಬೇಕಾಗಬಹುದು.
1 ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ 15 ವರ್ಷಗಳಿಗೆ 15 ಲಕ್ಷ ರೂಪಾಯಿಗಳ ಒಟ್ಟಾರೆ ಹೂಡಿಕೆ ಮಾಡಿದಂತಾಗುತ್ತದೆ. ಈ ಯೋಜನೆಯ (Sukanya Samriddhi Yojana) ಮೇಲೆ ಸಿಗುವಂತಹ ಬಡ್ಡಿದರ 8.2%. ಈ ಮೂಲಕ ನೀವು ಮೆಚುರಿಟಿ ಸಂದರ್ಭದಲ್ಲಿ 31 ರಿಂದ 35 ಲಕ್ಷ ರೂಪಾಯಿಗಳ ರಿಟರ್ನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಮಗಳ ಉನ್ನತ ವ್ಯಾಸಂಗ ಅಥವಾ ಮದುವೆ ಸಂದರ್ಭದಲ್ಲಿ ಖಂಡಿತವಾಗಿ ಈ ದೊಡ್ಡ ಮಟ್ಟದ ಹಣ ನಿಮಗೆ ಸಹಾಯಕವಾಗಲಿದೆ.