ರೈತರಿಗೆ ಕೃಷಿ ಚಟುವಟಿಕೆ ಮಾಡಲು ಸಾಲದ ಅವಶ್ಯಕತೆ ಇರಲಿದ್ದು ಬ್ಯಾಂಕ್ ಸಾಲದ ಮೊರೆ ಹೋಗಬೇಕಾಗುತ್ತದೆ. ಇದಕ್ಕಾಗಿ ಸರಕಾರ ಕೂಡ ರೈತರಿಗಾಗಿ ಬೆಳೆ ಸಾಲವನ್ನು (Crop Loan) ನೀಡ್ತಾ ಇದೆ. ಈಗಾಗಲೇ ಬ್ಯಾಂಕ್‌ಗಳು ಯಾವುದೇ ತಕರಾರು ಇಲ್ಲದೆ ರೈತರಿಗೆ 10 ಲಕ್ಷದವರೆಗೆ ಬೆಳೆಸಾಲ ನೀಡಲು ಸರಕಾರ ಮುಂದಾಗಿದೆ.
ಕೆಲವೊಮ್ಮೆ ಬರಗಾಲ, ನೆರೆ ಹಾವಳಿ, ಅತೀವ ಮಳೆ ಸಂದರ್ಭದಲ್ಲಿ ರೈತರ ಬೆಳೆ ನಷ್ಟ ಉಂಟಾಗಲಿದೆ. ಈ ಸಂದರ್ಭದಲ್ಲಿ ರೈತರಿಗೆ ಸಾಲ ತೀರಿಸಲು ಕಷ್ಟ ಸಾಧ್ಯವಾಗಲಿದೆ. ಈ ಸಂದರ್ಭದಲ್ಲಿ ಸರಕಾರ ಕೆಲವೊಮ್ಮೆ ಸಾಲ ಮನ್ನಾ (Loan Waiver) ಮಾಡಲು ಮುಂದಾಗಲಿದೆ. ಹಾಗೆಯೇ 2017 ಮತ್ತು 2018 ಸಂದರ್ಭದಲ್ಲಿ ರೈತರ ಬೆಳೆ ಸಾಲ ಮನ್ನಾ (Crop Loan Waiver) ವನ್ನು ರಾಜ್ಯ ಸರಕಾರದಿಂದ ಮಾಡಲಾಗಿತ್ತು. ಇದರಲ್ಲಿ 50 ಸಾವಿರ ಒಂದು ಬಾರಿಗೆ ಮತ್ತೊಮ್ಮೆ 1 ಲಕ್ಷದ ವರೆಗೆ ಬ್ಯಾಂಕ್ ಸಾಲವನ್ನು ಮನ್ನಾ ಮಾಡಲಾಗಿದ್ದು, ಇದಕ್ಕೆ ಒಟ್ಟು 7,662 ಕೋಟಿ ಹಣವನ್ನು ಸರಕಾರ ಈಗಾಗಲೇ ಖರ್ಚು ಮಾಡಿದೆ.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ನೀಡಲಾಗಿದ್ದ 50 ಸಾವಿರ ಸಾಲ ಮನ್ನಾ ಪ್ರಯೋಜನವನ್ನು ಘೋಷಣೆ ಮಾಡಿದ್ದು ಅದರಲ್ಲಿ 1 ಲಕ್ಷ ಸಾಲ ಮನ್ನಾ ಪ್ರಯೋಜನವನ್ನು 17.37 ಲಕ್ಷ ರೈತರು ಪಡೆದು ಕೊಂಡಿದ್ದರು. ತಾಂತ್ರಿಕ ಕಾರಣಗಳಿಂದ 31 ಸಾವಿರ ರೈತರಿಗೆ ಸೌಲಭ್ಯ ಸಿಕ್ಕಿರಲಿಲ್ಲ. ಹಾಗಾಗಿ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದ್ದು ಬಾಕಿ ಉಳಿದ ರೈತರ ಸಾಲ ಮನ್ನಾ (Loan Waiver) ಆಗಲಿದೆ.
- ಈ ಸಾಲ ಮನ್ನಾ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ರೈತರು ಸಾಲ ಮನ್ನಾ ಪಟ್ಟಿಯಲ್ಲಿ ಹೆಸರು ಇದೆಯಾ ಎಂದು ಚೆಕ್ ಮಾಡಬಹುದಾಗಿದೆ.
- ರೈತರು ಮಾಹಿತಿ ಕಣಜ ಜಾಲತಾಣದಲ್ಲಿ Loan Waiver Report ಲಿಂಕ್ ಮೇಲೆ ತೆರಳಿ, ವಾಣಿಜ್ಯ ಬ್ಯಾಂಕ್ ಗಾಗಿ ಸಾಲ ಮನ್ನಾ ವರದಿ ಎನ್ನುವ ಆಯ್ಕೆ ಇರಲಿದ್ದು ಇದರ ಮೇಲೆ ಕ್ಲಿಕ್ ಮಾಡಬೇಕು.
- ಬಳಿಕ Type ಆಯ್ಕೆ ಕಾಲಂ ನಲ್ಲಿ ರೈತ ಆಪ್ಚನ್ ಇರಲಿದ್ದು ಇಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆಯನ್ನು ಮಾಡಿಕೊಂಡು ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ರೈತವಾರು ವಾಣಿಜ್ಯ ಬ್ಯಾಂಕ್ ನ ಸಾಲ ಮನ್ನಾ ಪಟ್ಟಿ ಕಾಣಲಿದೆ.