ಸರ್ಕಾರ ಜಾರಿಗೆ ತಂದಿರುವಂತಹ 5 ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಗೃಹಜ್ಯೋತಿ ಯೋಜನೆ (Gruha Jyothi Yojana) ಕೂಡ ಒಂದಾಗಿದೆ. ಈ ಯೋಜನೆಯ ಮೂಲಕ 200 ಯೂನಿಟ್ ಗಳವರೆಗೂ ಕೂಡ ಉಚಿತ ವಿದ್ಯುತ್ ಅನ್ನು ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಸ್ಥರು ಪಡೆದುಕೊಳ್ಳುವಂತಹ ಅವಕಾಶ ಇದೆ. ಇನ್ನು ಇತ್ತೀಚಿಗಷ್ಟೇ ಈ ಯೋಜನೆಯಲ್ಲಿ ಒಂದು ಹೊಸ ಅವಕಾಶವನ್ನು ಕೂಡ ಪರಿಚಯಿಸಲಾಗಿದೆ. ಆ ನಿಯಮದ ಬಗ್ಗೆನೇ ಇವತ್ತಿನ ಈ ಲೇಖನದ ಮೂಲಕ ನಿಮಗೆ ಮಾಹಿತಿಯನ್ನು ನೀಡುವುದಕ್ಕೆ ಹೊರಟಿರೋದು.
ಗ್ರಹ ಜ್ಯೋತಿ ಯೋಜನೆಯಲ್ಲಿ ಪರಿಚಯವಾಗಿದೆ ಡಿ ಲಿಂಕ್:
ಈಗ ಇರುವಂತಹ ಮನೆಯನ್ನು ಬದಲಾವಣೆ ಮಾಡಿದಾಗ ಆ ಗೃಹ ಜ್ಯೋತಿ ಯೋಜನೆ (Gruha Jyothi Yojana) ಯಲ್ಲಿ ನೀವು ಡಿ ಲಿಂಕ್ ಆಯ್ಕೆಯನ್ನು ಮಾಡಿ ನಂತರ ನೀವು ಹೋಗುವಂತಹ ಹೊಸ ಮನೆಗೆ ಕೂಡ ಈ ಯೋಜನೆಯನ್ನು ಮುಂದುವರಿಸಿಕೊಂಡು ಹೋಗುವಂತಹ ಪ್ರಕ್ರಿಯೆಯನ್ನೇ ಡಿ ಲಿಂಕ್ ಎಂಬುದಾಗಿ ಕರೆಯಲಾಗುತ್ತದೆ.
ಹಳೆಯ ಮನೆಯಲ್ಲಿ ತ್ಯಜಿಸಿ ಹೊಸ ಮನೆಯನ್ನು ಸೇರಿದಾಗ ಆ ಆರ್ ಆರ್ ನಂಬರ್ ನಿಂದ ನಿಮ್ಮ ಗೃಹ ಜ್ಯೋತಿ ಯೋಜನೆಯನ್ನು ತೆಗೆದು ಹೊಸ ಮನೆಯ ಆರ್ ಆರ್ ನಂಬರ್ (RR Number) ಗೆ ಲಿಂಕ್ ಮಾಡಬೇಕಾಗಿರುತ್ತದೆ.
ಈ ನಿಯಮವನ್ನು ಅನುಸರಿಸುವ ಮೂಲಕ ನೀವು ಹೋಗುವಂತಹ ಹೊಸ ಮನೆಯಲ್ಲಿ ಕೂಡ ಗೃಹಜ್ಯೋತಿ ಯೋಜನೆ (Gruha Jyothi Yojana) ಅಡಿಯಲ್ಲಿ ಉಚಿತ ವಿದ್ಯುತ್ (Free Electricity) ಅನ್ನು ನಿಮ್ಮ ಯೋಗ್ಯ ಅರ್ಹತೆಗೆ ಅನುಸಾರವಾಗಿ ಬಳಸಿಕೊಳ್ಳಬಹುದಾಗಿದೆ. ಇದಕ್ಕಾಗಿ ನೀವು ಸೇವಾ ಸಿಂಧು ಪೋರ್ಟಲ್ಲಿ ಹೋಗಿ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.
ಗೃಹಜ್ಯೋತಿ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ 1.56 ಕೋಟಿಗೂ ಅಧಿಕ ಜನರು ತಮ್ಮನ್ನು ತಾವು ನೋಂದಾಯಿಸಿಕೊಂಡು ಫಲಾನುಭವಿಗಳಾಗಿದ್ದಾರೆ ಎಂಬುದಾಗಿ ಸಚಿವ ಕೆಜೆ ಜಾರ್ಜ್ ಹೇಳಿಕೊಂಡಿದ್ದಾರೆ. ಹೊಸ ಮನೆಗೆ ಹೋದಾಗ ಏನು ಮಾಡಬೇಕು ಅನ್ನೋದಾಗಿ ಯೋಚಿಸುತ್ತಿದ್ದ ಜನರಿಗೆ ಇದು ನೆಮ್ಮದಿಯ ವಿಚಾರವಾಗಿದೆ.