ರಾಜ್ಯದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡ್ತಾ ಇರಲಿದ್ದು ಅದರಲ್ಲಿ ಮಹಿಳಾ ಪರವಾದ ಯೋಜನೆ ಗೃಹಲಕ್ಷ್ಮಿ ಯೋಜನೆ ಬಹಳಷ್ಟು ಸದ್ದು ಮಾಡ್ತಾ ಇದೆ. ಈಗಾಗಲೇ ಮಹಿಳೆಯರು ಈ ಯೋಜನೆಯ ಮೂಲಕ ತಿಂಗಳಿಗೆ ಎರಡು ಸಾವಿರ ಮೊತ್ತವನ್ನು ಪಡಿತಾ ಇದ್ದಾರೆ. ಹೆಚ್ಚಿನ ಮಹಿಳೆಯರಿಗೆ ಈ ಹಣ (Gruha Lakshmi Money) ಹೆಚ್ಚು ಸಹಾಯವಾಗಿದ್ದು ಮಹಿಳೆಯರು ಸಕ್ರಿಯವಾಗಿ ಸ್ಪಂದನೆ ಕೂಡ ನೀಡಿದ್ದಾರೆ.
ಹಣ ಜಮೆಯಾಗಿಲ್ಲ:
ಆದರೆ ಇದೀಗ ಎರಡು ಮುರುತಿಂಗಳಿನಿಂದ ಗೃಹಲಕ್ಷ್ಮಿ ಹಣ (Gruha Lakshmi Money) ಜಮೆ ಯಾಗಿಲ್ಲ. ಈ ಬಗ್ಗೆ ಮಹಿಳೆಯರು ಹಣ ಬಂದಿಲ್ಲ, ಯಾಕೆ ಜಮೆ ಯಾಗಿಲ್ಲ ಎಂದು ಪ್ರಶ್ನೆ ಮಾಡ್ತಾ ಇದ್ದಾರೆ. ಇದೀಗ ಹಣ ಮೂರು ತಿಂಗಳ ಹಣ ಹಾಕುವ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಕಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ತಾಂತ್ರಿಕ ಸಮಸ್ಯೆ:
ಮೂರು ತಿಂಗಳಿನಿಂದ ಹಣ ಕೆಲವು ಮಹಿಳೆಯರ ಖಾತೆಗೆ ತಲುಪಿಲ್ಲ ಹಣ ಹಾಕುವಾಗ ತಾಂತ್ರಿಕ ಸಮಸ್ಯೆಗಳು (Technical Issues) ಕಂಡುಬಂದಿದ್ದು ಈ ಕಾರಣದಿಂದ ಹಣ ಜಮೆಯಾಗಿಲ್ಲ. ಜೂನ್ ತಿಂಗಳಲ್ಲಿ ಎಸ್ಸಿ, ಎಸ್ಟಿ ಫಾಲಾನುಭವಿಗಳ ಪೋರ್ಟಲ್ನಲ್ಲಿ ತಾಂತ್ರಿಕ ಸಮಸ್ಯೆಗಳು ಕಂಡುಬಂದಿದ್ದವು. ಅವುಗಳನ್ನು ಸರಿಪಡಿಸಲಾಗಿದ್ದು ಹಣ ಬಿಡುಗಡೆ ಮಾಡಲಾಗಿದೆ.
ಈಗಾಗಲೇ ಇದಕ್ಕೆ ತೊಡಕಾಗಿದ್ದ ತಾಂತ್ರಿಕ ದೋಷವನ್ನ ಈಗಾಗಲೇ ಸರಿ ಮಾಡಿದ್ದು ಜುಲೈ ಮತ್ತು ಆಗಷ್ಟ್ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರೊಂದಿಗೆ ಬೆಳಗಾವಿಗೆ ಬಂದಿದ್ದಾಗ ಚರ್ಚೆ ಮಾಡಿದ್ದು ಶೀಘ್ರದಲ್ಲೇ ಮೂರು ತಿಂಗಳ ಹಣ ಒಟ್ಟಿಗೆ ಜಮೆ ಯಾಗಲಿದೆ.
ಸ್ಥಗಿತ ಆಗಲ್ಲ:
ಇನ್ನು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಸ್ಥಗಿತ ಆಗುವ ಬಗ್ಗೆ ಅವಹೇಳನ ಕಾರಿ ಮಾತುಗಳು ಕೇಳಿ ಬರ್ತಾ ಇದ್ದು ಇದುಸುಳ್ಳು ಸುದ್ದಿ, ಇದು ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಮಹಿಳೆಯರಿಗೆ ಈ ಸೌಲಭ್ಯ ಹೆಚ್ಚು ಸಹಾಯಕವಾಗ್ತ ಇದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ನಿಲ್ಲಿಸುವುದಿಲ್ಲ. ಸಿಎಂ ಬಳಿಯೂ ಹಣ ಬಿಡುಗಡೆ ವಿಚಾರವಾಗಿ ಚರ್ಚೆ ಮಾಡಿದ್ದು ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಹಣ ಬರಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.