ಪ್ರತಿಯೊಬ್ಬರು ಕೂಡ ಇಂದಿನ ದಿನಗಳಲ್ಲಿ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಹಣವನ್ನು ಹೂಡಿಕೆ ಮಾಡುವ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುತ್ತಾರೆ. ಯಾಕೆಂದ್ರೆ ಇಂದಿನ ಸಮಯದಲ್ಲಿ ಹೇಳುತ್ತಿರುವ ಅಂತಹ ಹಣದುಬ್ಬರದ ಪ್ರತಿಯಾಗಿ ಭವಿಷ್ಯದಲ್ಲಿ ಆರ್ಥಿಕವಾಗಿ ಸಬಲರಾಗಬೇಕು ಎನ್ನುವಂತಹ ಕನಸನ್ನು ಪ್ರತಿಯೊಬ್ಬರು ಕೂಡ ಕಂಡಿರುತ್ತಾರೆ.
ಇನ್ನು ಇವತ್ತಿನ ಈ ಲೇಖನದ ಮೂಲಕ ಹಿರಿಯ ನಾಗರಿಕರು ಯಾವ ರೀತಿಯಲ್ಲಿ ಮನೆಯಲ್ಲಿ ಕುಳಿತುಕೊಂಡಲ್ಲೇ ತಿಂಗಳಿಗೆ 20,000 ರೂಪಾಯಿಗಳ ಆದಾಯವನ್ನು ತಮ್ಮ ಹೂಡಿಕೆಯ ಮೂಲಕ ಪಡೆದುಕೊಳ್ಳಬಹುದು ಮಾಹಿತಿಯನ್ನು ನೀಡಲು ಹೊರಟಿದ್ದೇವೆ.
ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (Senior Citizen Saving Scheme):
ಈ ಯೋಜನೆಯಲ್ಲಿ (Senior Citizen Scheme) ನೀವು ವಾರ್ಷಿಕ 8.2 ಪ್ರತಿಶತ ಬಡ್ಡಿಯನ್ನು ಪಡೆದುಕೊಳ್ಳುತ್ತಿರುವ ಇದು ಅತ್ಯಂತ ಹೆಚ್ಚಿನ ಬಡ್ಡಿದರ ಆಗಿರುತ್ತದೆ. ಸಾವಿರ ರೂಪಾಯಿಗಳ ಮಿನಿಮಮ್ ಹೂಡಿಕೆಯಿಂದ ಪ್ರಾರಂಭ ಮಾಡಬಹುದಾಗಿದ್ದು 30 ಲಕ್ಷ ರೂಪಾಯಿಗಳ ಮ್ಯಾಕ್ಸಿಮಮ್ ಹೂಡಿಕೆ ನಿಗದಿಯಾಗಿದೆ.
60 ವರ್ಷ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ. ಐದು ವರ್ಷಗಳ ಮೆಚುರಿಟಿ ಪಿರಿಯಡ್ ಕೂಡ ಇರುತ್ತದೆ. ಇನ್ಕಮ್ ಟ್ಯಾಕ್ಸ್ ಆಕ್ಟ್ 80 ಸಿ ಅಡಿಯಲ್ಲಿ 1.5 ಲಕ್ಷ ರೂಪಾಯಿಗಳ ಟ್ಯಾಕ್ಸ್ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.
ಒಬ್ಬ ವ್ಯಕ್ತಿ 30 ಲಕ್ಷ ರೂಪಾಯಿಗಳ ಹಣವನ್ನು ಹೂಡಿಕೆ ಮಾಡಿದರೆ 8.2 ಪ್ರತಿಶತ ಬಡ್ಡಿ ದರದ ಲೆಕ್ಕಾಚಾರದಲ್ಲಿ ವರ್ಷಕ್ಕೆ 2.46 ಲಕ್ಷ ರೂಪಾಯಿಗಳ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದಾಗಿದ್ದು ಅದನ್ನು ತಿಂಗಳಿಗೆ ಲೆಕ್ಕಾಚಾರ ಹಾಕಿದರೆ 20,000 ರೂಪಾಯಿಗಳ ಆದಾಯವನ್ನು ಹಿರಿಯ ನಾಗರಿಕರು ಈ ಯೋಜನೆ ಅಡಿಯಲ್ಲಿ ಪಡೆದುಕೊಳ್ಳಬಹುದಾಗಿದೆ.