ಇವತ್ತಿನ ಈ ಲೇಖನದ ಮೂಲಕ ನಿಮಗೆ ಒಂದು ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಯ ಬಗ್ಗೆ ಹೇಳೋದಿಕ್ಕೆ ಹೊರಟಿದ್ದೇವೆ. ಹೌದು ನಾವ್ ಮಾತಾಡ್ತಿರೋದು ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ (Post Office Monthly Scheme) ಬಗ್ಗೆ. ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ.
ಪೋಸ್ಟ್ ಆಫೀಸ್ ಮಂತ್ಲಿ ಸ್ಕೀಮ್ (Post Office Monthly Scheme):
ಈ ಯೋಜನೆಯಲ್ಲಿ ವಾರ್ಷಿಕ 7.4% ಬಡ್ಡಿದರವನ್ನು ನೀವು ಪಡೆದುಕೊಳ್ಳಬಹುದು. ಈ ಯೋಜನೆಯಲ್ಲಿ ನೀವು ಒಂದೇ ಬಾರಿಗೆ ಹಣವನ್ನು ಹೂಡಿಕೆ ಮಾಡಬೇಕು. ಇದಾದ ನಂತರ ಪ್ರತಿ ತಿಂಗಳು ನಿಗದಿತ ಆದಾಯವನ್ನು ನೀವು ಬಡ್ಡಿ ರೂಪದಲ್ಲಿ ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆಯಲ್ಲಿ ಯಾವುದೇ ರಿಸ್ಕ್ ಇರೋದಿಲ್ಲ. ಸಾವಿರ ರೂಪಾಯಿಗಳಿಂದ ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದೆ. ಸಿಂಗಲ್ ಖಾತೆಯಲ್ಲಿ ಒಂಬತ್ತು ಲಕ್ಷ ರೂಪಾಯಿಗಳು ಮ್ಯಾಕ್ಸಿಮಮ್ ಹಾಗೂ ಜಂಟಿ ಖಾತೆಯಲ್ಲಿ 15 ಲಕ್ಷ ರೂಪಾಯಿಗಳ ಮ್ಯಾಕ್ಸಿಮಮ್ ಹೂಡಿಕೆ ಮಾಡಬಹುದಾಗಿದೆ. ಐದು ವರ್ಷಗಳ ಮೆಚುರಿಟಿ ಅವಧಿ ಇರುತ್ತದೆ.
- ಒಂದು ವೇಳೆ ಒಂಬತ್ತು ಲಕ್ಷ ರೂಪಾಯಿಗಳ ಹೂಡಿಕೆ ಮಾಡಿದರೆ ನೀವು ವರ್ಷಕ್ಕೆ 66,600 ರೂಪಾಯಿಗಳ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದಾಗಿದೆ. ಈ ಲೆಕ್ಕಾಚಾರದಲ್ಲಿ ತಿಂಗಳಿಗೆ ನಿಮಗೆ 5,500 ರೂಪಾಯಿಗಳ ಆದಾಯ ದೊರಕುತ್ತದೆ.
- 15 ಲಕ್ಷ ರೂಪಾಯಿಗಳ ಠೇವಣಿ ಇಟ್ಟರೆ ಪ್ರತಿ ತಿಂಗಳಿಗೆ 9250 ಹಾಗೂ ಮೂರು ತಿಂಗಳಿಗೆ ಒಮ್ಮೆ ತೆಗೆದುಕೊಳ್ಳುವುದಾದರೆ 27,750 ರೂಪಾಯಿಗಳ ಬಡ್ಡಿಯನ್ನು ನೀವು ಪಡೆದುಕೊಳ್ಳಬಹುದು.