ಕೇಂದ್ರ ಸರ್ಕಾರವು ಸರಕಾರಿ ನೌಕರರಿಗೆ ಇದೀಗ ಸಿಹಿ ಸುದ್ದಿ ಯೊಂದನ್ನು ನೀಡಿದೆ. ಎಷ್ಟೋ ಜನ ಸರಕಾರ ಕೆಲಸ ಮಾಡಿ ನಿವೃತ್ತಿ ಹೊಂದಿ ಮನೆಯಲ್ಲೇ ಇದ್ದವರು ಇದ್ದಾರೆ. ಅಂತವರಿಗೆ ಈ ಸುದ್ದಿ ಖುಷಿ ನೀಡಲಿದೆ. ಹೌದು ನಿವೃತ್ತಿ ಹೊಂದಿದ್ದವರಿಗೆ ಪಿಂಚಣಿ (Pension) ಬಿಡುಗಡೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಕೇಂದ್ರವು ಅಧಿಕಾರಿಗಳಿಗೆ ಇದೀಗ ಸೂಚನೆ ನೀಡಿದೆ.
ಕೇಂದ್ರ ಸರ್ಕಾರವು ಈಗಾಗಲೇ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹೊಸ ಪಿಂಚಣಿ ಯೋಜನೆ (National Pension System) ಅಡಿಯಲ್ಲಿ ಪರ್ಯಾಯವಾಗಿ ಏಕೀಕೃತ ಪಿಂಚಣಿ ಯೋಜನೆಯನ್ನು ಈಗಾಗಲೇ ಘೋಷಣೆ ಮಾಡಿದೆ. ಈ ಪಿಂಚಣಿ ಯೋಜನೆಯ ಮೂಲಕ ನೌಕರರ ಸೇವಾ ಅವಧಿಯ ಮೂಲಕ ಮೂಲ ವೇತನ ಮತ್ತು ತುಟ್ಟಿಭತ್ಯೆಯ ಶೇಕಡಾ 10ರಷ್ಡು ಉದ್ಯೋಗಿಗಳಿಗೆ ದೊರೆಯಲಿದೆ.
ಉದ್ಯೋಗಿಯ 10 ವರ್ಷಗಳ ಕನಿಷ್ಠ ಸೇವಾ ಅವಧಿ ಮೂಲಕ ಪಿಂಚಣಿ ಮೊತ್ತ ಜಮೆ ಮಾಡಲಾಗುತ್ತದೆ. ಹೊಸ ಪಿಂಚಣಿ ಯೋಜನೆ ಕನಿಷ್ಠ 10 ವರ್ಷಗಳ ಸೇವೆಯ ನಂತರ ನಿವೃತ್ತ ವ್ಯಕ್ತಿಗೆ ಮಾಸಿಕವಾಗಿ 10,000 ರೂ. ಪಿಂಚಣಿ ಸಿಗುವ ಖಾತೆ ಮತ್ತು ಇದರೊಂದಿಗೆ ನಿವೃತ್ತಿ ಬಳಿಕ ಗ್ರಾಚ್ಯುಟಿ ಸೇರಿ ಪಿಂಚಣಿದಾರನಿಗೆ ಸಿಗಲಿದೆ.
ಪಿಂಚಣಿ (Pension) ಮೊತ್ತವು ನಿವೃತ್ತಿ ಯಾದವರಿಗೆ ಬೇಗ ಜಮೆ ಯಾಗಲು ನಿವೃತ್ತಿಗೆ ಒಂದು ವರ್ಷದ ಮೊದಲೇ ಸೇವಾ ವಿವರಗಳು ಮತ್ತು ಇತರ ಪ್ರಮುಖ ಕೆಲಸಗಳ ಪರಿಶೀಲನೆಯನ್ನು ನಡೆಸಬೇಕು. ಮತ್ತು ಸರ್ಕಾರಿ ನೌಕರರು ನಿವೃತ್ತಿಗೆ ಆರು ತಿಂಗಳ ಮೊದಲು ತಮ್ಮ ಪಿಂಚಣಿ ನಮೂನೆಗಳನ್ನು ಸಲ್ಲಿಸಬೇಕು ಎಂದು ಸರಕಾರ ತಿಳಿಸಿದೆ.
ಇನ್ನು ಹೊಸ ಯೋಜನೆಯ ಮೂಲಕ ಸರ್ಕಾರ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಮಾಡಲು ಮುಂದಾಗಿದ್ದು ನೇರವಾಗಿ ಬ್ಯಾಂಕ್ ಖಾತೆಗೆ ಪಿಂಚಣಿಯನ್ನು ಬಿಡುಗಡೆ ಮಾಡಲಿದೆ. ನೌಕರರು ತಮ್ಮ ಗ್ರಾಮದ ಬ್ಯಾಂಕ್ ಖಾತೆಗೆ ಹೋಗಿ ಪಿಂಚಣಿ (Pension) ಪಡೆಯಬಹುದು. ಇದರಿಂದಾಗಿ ಪಿಂಚಣಿದಾರರು ತಮ್ಮ ಪಿಂಚಣಿಗಳನ್ನು ಯಾವುದೇ ಬ್ಯಾಂಕ್‌ನಿಂದ, ಯಾವುದೇ ಶಾಖೆಯಿಂದ, ದೇಶದ ಯಾವ ಭಾಗದಿಂದಲಾದರೂ ಪಡೆಯಲು ಕೂಡ ಅನುಕೂಲ ವಾಗಲಿದೆ.
ಇದರಿಂದ ಪಿಂಚಣಿ ಸೌಲಭ್ಯವನ್ನು ಸರಿಯಾದ ಸಮಯಕ್ಕೆ ತಲುಪಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ಕಚೇರಿಯ ಮುಖ್ಯಸ್ಥರು ನಿವೃತ್ತಿಯ ನಾಲ್ಕು ತಿಂಗಳ ಈ ಮೊದಲೇ ಪಿಂಚಣಿ ಖಾತೆಯನ್ನು ಕಚೇರಿಗೆ ತಲುಪಿಸಬೇಕು. ಇನ್ನು ನಿವೃತ್ತಿಯ ಒಂದು ತಿಂಗಳ ಮೊದಲು ಕೇಂದ್ರ ಪಿಂಚಣಿ ಲೆಕ್ಕಪತ್ರ ಕಚೇರಿ ಕಳುಹಿಸಿ ಅಂತಿಮ ಪಿಂಚಣಿ ಪ್ರಕ್ರಿಯೆ ಮಾಡದಿದ್ದರೆ ತಾತ್ಕಾಲಿಕ ಪಿಂಚಣಿ ನೀಡಬಹುದು. ನಿವೃತ್ತರು ತಮ್ಮ ಹಣವನ್ನು ಸಮಯಕ್ಕೆ ಸರಿಯಾಗಿ ಸ್ವೀಕರಿಸುವುದನ್ನು ಖಚಿತಪಡಿಸಿಕೊಳ್ಳಲು ಈ ನಿಯಮ ಜಾರಿ ಮಾಡಲಾಗಿದೆ