Free Sewing Machine: ಗೃಹಲಕ್ಹ್ಮೀ ಹಣ ಬಾರದ ಈ ಜಿಲ್ಲೆಯ ಮಹಿಳೆಯರಿಗೆ ಸಿಗುತ್ತಿದೆ ಉಚಿತ ಹೊಲಿಗೆ ಯಂತ್ರ

Join WhatsApp

ಇಂದು ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರ ಹೆಚ್ಚಿನ ಉತ್ತೇಜನ ವನ್ನು ನೀಡುತ್ತ ಬಂದಿದೆ. ಇಂದು ಮಹಿಳೆ ಯರು ಕೂಡ ವಿದ್ಯಾವಂತರಾಗಿದ್ದು ವಿವಿಧ ವೃತ್ತಿ ಕ್ಷೇತ್ರದಲ್ಲಿ ತೊಡಗಿ ‌ಕೊಂಡಿದ್ದಾರೆ. ಹಾಗೆಯೇ ಮಹಿಳೆ ಯರು ಕೂಡ ಆರ್ಥಿಕವಾಗಿ ಅಭಿವೃದ್ಧಿ ಯಾಗಲು ಸ್ವ ಉದ್ಯಮ ಕೈಗೊಳ್ಳಲು ಸರಕಾರ ವಿವಿಧ ರೀತಿಯ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಇದೀಗ ಉಚಿತ ಹೊಲಿಗೆ ಯಂತ್ರ (Free Sewing Machine) ಪಡೆಯಲು ಅರ್ಜಿ ಯನ್ನು ಆಹ್ವಾನಿಸಿದೆ.

ಇಂದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಹಿಳೆಯರು ಟೈಲರಿಂಗ್ ಉದ್ಯಮ ಮಾಡ್ತಾ ಇದ್ದಾರೆ. ಹೆಚ್ಚಿನ ಮಹಿಳೆಯರಿಗೆ ಹೊಲಿಯುವ ಆಸಕ್ತಿ ಇದ್ದರೂ ಹೊಲಿ ಯುವ ಯಂತ್ರ ಇರದೇ ಕೆಲಸ ಇಲ್ಲ ದಂತಾಗಿದೆ. ಹಾಗಾಗಿ ಗ್ರಾಮೀಣ ಮಹಿಳೆಯರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಉಚಿತ ಟೈಲರಿಂಗ್ ಮಿಷನ್ ಅನ್ನು ಸರಕಾರ ನೀಡ್ತಾ ಇದೆ.‌ ಹಾಗಾಗಿ ಬೀದರ್ ಜಿಲ್ಲೆ, ಗದಗ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆ, ಚಿಕ್ಕ ಮಗಳೂರು, ತುಮ ಕೂರು ಜಿಲ್ಲೆಯ ಮಹಿಳೆಯರು ಉಚಿತ ಮಿಷನ್ ಪಡೆಯಲು ಅರ್ಜಿ ಹಾಕಬಹುದು.

ಉಚಿತ ಹೊಲಿಗೆ ಯಂತ್ರ ಯೋಜನೆ (Free Sewing Machine Scheme) ಪುಸ್ತುತ ಕೆಲವು ರಾಜ್ಯಗಳಲ್ಲಿ ಚಾಲನೆಯಲ್ಲಿದೆ. ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಹರಿಯಾಣ, ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಛತ್ತೀಸ್‌ಗಡ್‌ ಇಂತಹ ರಾಜ್ಯಗಳಲ್ಲಿ ಜಾರಿಯಾಲಿದ್ದು ಹೆಚ್ಚಿನ ಮಹಿಳೆಯರಿಗೆ ಈ ಸೌಲಭ್ಯ ಸಿಗ್ತಾ ಇದೆ.

 

Image Credit: IBC24.in

ಈ ದಾಖಲೆ ಅಗತ್ಯ:

  • ರೇಷನ್ ಕಾರ್ಡ್
  • ಫೋಟೋ
    ಗ್ರಾಮ ಪಂಚಾಯಿತಿಯ ದೃಢೀಕರಣ ಪತ್ರ.
  • ಮತದಾರರ ಗುರುತಿನ ಚೀಟಿ.
  • ಗ್ರಾಮ ಪಂಚಾಯಿತಿ ಅಥವಾ ಕಾರ್ಮಿಕ ಇಲಾಖೆಯಿಂದ ಕುಶಲಕರ್ಮಿಯಾಗಿದ್ದಲ್ಲಿ ಕಸುಬು ನಡೆಸುತ್ತಿರುವಂತಹ ದೃಢೀಕರಣ ಪತ್ರ.
  • ಟೈಲರಿಂಗ್ ತರಬೇತಿ ಪ್ರಮಾಣ ಪತ್ರ

ಈ ಅರ್ಹತೆ ಬೇಕು:

 

Image Credit: Visual Stock
  • ಈ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಅರ್ಜಿದಾರರು ಹೊಲಿಗೆ ಯಂತ್ರ ತರಬೇತಿ (Sewing Machine Training) ಪಡೆದ ಪ್ರಮಾಣ ಪತ್ರ ಹೊಂದಿರಬೇಕು.
  • ಒಂದು ಕುಟುಂಬದಲ್ಲಿ ಒಬ್ಬ ಸದಸ್ಯರು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
  • ವಯೋಮಿತಿ 18 ರಿಂದ 55 ವರ್ಷದೊಳಗಿರಬೇಕು.
  • ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.
  • ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರಬೇಕು.
  • ಅರ್ಹ ಮಹಿಳೆಯರು ಗ್ರಾಮೀಣ ಕೈಗಾರಿಕೆ ಇಲಾಖೆಯ ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿ ಅರ್ಜಿ ಹಾಕಬಹುದಾಗಿದೆ.

Leave a Comment

Your email address will not be published. Required fields are marked *

Scroll to Top