ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಜಮೆ ಮಾಡುವ ಯೋಜನೆ ಗೃಹ ಲಕ್ಷ್ಮೀ ಯೋಜನೆ (Gruha Lakshmi Yojana) ಯಾಗಿದ್ದು ಮಹಿಳೆಯರಿಗೆ ಇದರಿಂದ ಬಹಳಷ್ಟು ಆರ್ಥಿಕ ಸಹಾಯ ಆಗಿದೆ. ಈಗಾಗಲೇ ಹೆಚ್ಚಿನ ಮಹಿಳೆಯರು ಈ ಹಣವನ್ನು ಕೂಡಿಡುವ ಮೂಲಕ ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದ್ದಾರೆ.ಹಾಗೆಯೇ ಹೆಚ್ಚಿನ ಮಹಿಳೆಯರು ಧನಾತ್ಮಕ ಪ್ರತಿಕ್ರಿಯೆ ಯನ್ನು ಕೂಡ ನೀಡಿದ್ದಾರೆ.
ಆದರೆ ಎರಡು ಮೂರು ತಿಂಗಳಿನಿಂದ ಈ ಗೃಹ ಲಕ್ಷ್ಮಿ ಹಣ (Gruha Lakshmi Money) ಬಂದಿಲ್ಲ ಅಂತ ಹೆಚ್ಚಿನ ಮಹಿಳೆಯರು ಬೇಸರ ಪಟ್ಟುಕೊಂಡಿದ್ದರು. ಇನ್ಮುಂದೆ ಈ ಹಣ ಬರಲ್ವ ಎಂದು ಗ್ರಾಮ ಓನ್ (Grama One) ಕೇಂದ್ರದಲ್ಲಿಯು ಮಹಿಳೆಯರು ವಿಚಾರಣೆ ಮಾಡಿದ್ದಾರೆ. ಆದರೆ ಈ ಗೃಹ ಲಕ್ಷ್ಮಿ ಹಣ ಯಾವಾಗ ಬರಲಿದೆ ಎಂದು ಕಾಯ್ತಾ ಇದ್ದ ಮಹಿಳೆಯರಿಗೆ ಇದೀಗ ಗುಡ್ ನ್ಯೂಸ್ ಮಾಹಿತಿಯೊಂದನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕಾರ್ (Lakshmi Hebbalkar) ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವೆ ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣದ (Gruha Lakshmi Money) ಬಗ್ಗೆ ಸಿಎಂ ಸಿದ್ದ ರಾಮಯ್ಯರೊಂದಿಗೆ (CM Siddaramaiah) ಈಗಾಗಲೇ ಚರ್ಚೆ ಮಾಡಲಾಗಿದೆ. ಮುಂದಿನ ವಾರದೊಳಗೆ ಈ ಎರಡೂ ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆಗೆ ಬರಲಿದೆ ಅಂತಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.
ಜೂನ್ ತಿಂಗಳಲ್ಲಿ ಈಗಾಗಲೇ SC, ST ಫಾಲಾನುಭವಿಗಳ ಪೋರ್ಟಲ್ನಲ್ಲಿ ತಾಂತ್ರಿಕ ಸಮಸ್ಯೆ ಇದ್ದರಿಂದ ಹಣ ಬಿಡುಗಡೆ ಯಾಗಿಲ್ಲ. ಅವುಗಳನ್ನು ಸರಿಪಡಿಸಿ ಹಣ ಬಿಡುಗಡೆ ಮಾಡಲಾಗಿದೆ. ಸದ್ಯದಲ್ಲೇ ಹಣ ಖಾತೆಗೆ ಜಮೆ ಯಾಗಲಿದೆ ಎಂದು ಹೇಳಿದ್ದಾರೆ. ನೋಂದಣಿ ಮಾಡಿದ ಪ್ರತಿ ಮಹಿಳೆಯರಿಗೂ ಹಣ ಜಮೆಯಾಗಲಿದ್ದು ಮಹಿಳೆಯರು ಆತಂಕ ಪಡಬೇಕಿಲ್ಲ ಎಂದರು.
ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಹಣ ಬರಲು ತಾಂತ್ರಿಕ ಸಮಸ್ಯೆ ಉಂಟಾಗಿದ್ದು ಇದನ್ನು ಶೀಘ್ರವೇ ಬಗೆಹರಿಸಬೇಕೆಂದು ಸಿಡಿಪಿಒಗಳಿಗೆ ಸೂಚನೆ ನೀಡಿದರು. ಇದುವರೆಗೂ ಜೂನ್ ಮಾಹೆಯವರೆಗಿನ ಗೃಹಲಕ್ಷ್ಮೀ ಹಣವನ್ನು ಜಮಾ ಮಾಡಲಾಗಿದೆ. ಬಾಕಿ ಇರುವ ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು 5 ರಿಂದ 10 ದಿನದೊಳಗೆ ಜಮಾ ಮಾಡುವುದಾಗಿ ಮಹಿಳೆಯರಿಗೆ ಭರವಸೆ ನೀಡಿದ್ದಾರೆ.