ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಇಂದು ಕೂಡ ಹೆಚ್ಚು ಪ್ರಚಲಿತ ದಲ್ಲಿದೆ. ಅದರಲ್ಲಿ ಮುಖ್ಯವಾದ ಮಹಿಳಾ ಪರ ಯೋಜನೆಯಾದ ಗೃಹ ಲಕ್ಷ್ಮಿ (Gruha Lakshmi), ಶಕ್ತಿ ಯೋಜನೆ (Shakti Yojana) ಇಂದಿಗೂ ಸಾವಿರಾರು ಮಹಿಳೆಯರ ಪಾಲಿಗೆ ವರದಾನವೇ ಆಗಿದೆ. ದಿನನಿತ್ಯ ದ ಸಂಚಾರದಲ್ಲಿ ಉಚಿತ ಬಸ್ (Free Bus Travel) ವ್ಯವಸ್ಥೆ ಜೊತೆ ಮಹಿಳೆಯರ ಖಾತೆಗೆ ತಿಂಗಳಿಗೆ ಎರಡು ಸಾವಿರ ರೂ ವನ್ನು ಕೂಡ ಕಾಂಗ್ರೆಸ್ ಸರಕಾರ ಜಮೆ ಮಾಡುತ್ತಿದೆ. ಆದರೆ ಎರಡು ಮೂರು ತಿಂಗಳಿನಿಂದ ಗೃಹ ಲಕ್ಷ್ಮಿ ಮಹಿಳೆಯರ ಖಾತೆಗೆ ಜಮೆ ಯಾಗುತ್ತಿಲ್ಲ. ಈ ಬಗ್ಗೆ ವಿಪಕ್ಷ ನಾಯಕರು ಕೂಡ ಮಾತನಾಡಿದ್ದಾರೆ.
ಇನ್ಮುಂದೆ ಗೃಹ ಲಕ್ಷ್ಮಿ ಹಣ (Gruha Lakshmi Money) ಬರಲ್ಲ, ಸರಕಾರದ ಬಳಿ ಹಣ ಇಲ್ಲ ಇತ್ಯಾದಿ ಮಾಹಿತಿ ಗಳು ಕೇಳಿ ಬಂದಿದ್ದು ಇದೀಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಎರಡು ಮೂರು ತಿಂಗಳಿನಿಂದ ಗೃಹ ಲಕ್ಷ್ಮೀ ಹಣ ಯಾಕೆ ಬಂದಿಲ್ಲ, ಸಮಸ್ಯೆ ಏನು ಎಂಬುದನ್ನು ಸ್ಪಷ್ಟನೆ ಪಡಿಸಿದ್ದಾರೆ.
ಯಾಕೆ ಹಣ ಬಂದಿಲ್ಲ?
ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ (Gruha Lakshmi Money) ಮಹಿಳೆಯರ ಖಾತೆಗೆ ಬಂದಿಲ್ಲ. ಜೂನ್ ತಿಂಗಳ ಹಣ ಕೆಲವು ಮಹಿಳೆಯರ ಖಾತೆಗೆ ಜಮೆಯಾಗಿದ್ದು ಕೆಲವು ಮಹಿಳೆಯರಿಗೆ ಬಂದಿಲ್ಲ. ಹಾಗೆಯೇ ಇನ್ನೆರಡು ತಿಂಗಳ ಹಣ ಬರಲು ಬಾಕಿ ಇದೆ. ಮಹಿಳೆಯರ ಖಾತೆಗೆ ಸೇರಬೇಕಾಗಿದ್ದ ಹಣ ಮೂರು ತಿಂಗಳು ತಡವಾಗಿದ್ದು ಯಾಕೆ ಎಂದು ಸಚಿವೆ ತಿಳಿಸಿದ್ದಾರೆ.
ಈಗಾಗಲೇ ಗೃಹಲಕ್ಷ್ಮಿ ಹಣ (Gruha Lakshmi Money) ಬರಲು ಜಮೆಯಾಗಲು ಕೆಲವೊಂದು ತಾಂತ್ರಿಕ ದೋಷ ಇದ್ದರಿಂದ ಹಣ ಜಮೆ ಯಾಗಿಲ್ಲ. ಜುಲೈ ಮತ್ತು ಆಗಸ್ಟ್ ತಿಂಗಳ ಗೃಹಲಕ್ಷ್ಮಿ ಹಣದ ಬಗ್ಗೆ ಸಿಎಂ ಸಿದ್ದರಾಮಯ್ಯರೊಂದಿಗೆ (CM Siddaramaiah) ಚರ್ಚೆ ಮಾಡಲಾಗಿದ್ದು ಮುಂದಿನ ಕೆಲವೇ ದಿನದಲ್ಲಿ ಎರಡೂ ತಿಂಗಳ ಹಣ ಮಹಿಳೆಯರ ಖಾತೆಗೆ ಜಮೆ ಯಾಗಲಿದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಹಣವನ್ನು ಇದುವರೆಗೆ ಸುಮಾರು 25,000 ಕೋಟಿ ರೂ. ಹಣ ಗೃಹಲಕ್ಷ್ಮಿಯರ ಖಾತೆಗೆ ಜಮೆ ಯಾಗಿದ್ದು ಇದರಿಂದ 1.25 ಕೋಟಿ ಗೃಹಲಕ್ಷ್ಮಿಯರು ಹಣ ಪಡೆದು ಕೊಂಡಿದ್ದಾರೆ.ಆದರೆ ಗೃಹಲಕ್ಷ್ಮಿ ಯೋಜನೆ ಬಗ್ಗೆ ಆರೋಪಗಳು ಕೇಳಿ ಬರ್ತಾ ಇದ್ದು ಇಂತಹ ಮಾತುಗಳಿಗೆ ಕಿವಿ ಕೊಡಬಾರದು, ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗುವುದಿಲ್ಲ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರು ಹಲವು ರೀತಿಯಲ್ಲಿ ಹಣ ಬಳಕೆ ಮಾಡ್ತಾ ಇದ್ದಾರೆ. ಆರೋಗ್ಯ ಖರ್ಚು ವೆಚ್ಚಕ್ಕೆ, ಇತರರ ಸಹಾಯಕ್ಕೆ, ಈ ಹಣ ನೆರವಾಗುತ್ತಿದ್ದು ಈ ಯೋಜನೆ ಮುಂದುವರಿಸುತ್ತೇವೆ. ಈಗಾಗಲೇ 11 ತಿಂಗಳ ಹಣ ಬಿಡುಗಡೆಯಾಗಿದ್ದು, ಜೂನ್, ಜುಲೈ ಹಾಗೂ ಆಗಸ್ಟ್ ತಿಂಗಳ ಹಣವನ್ನು ಶೀಘ್ರವೇ ಜಮೆ ಮಾಡುತ್ತೇವೆ ಎಂದಿದ್ದಾರೆ.