ನರೇಂದ್ರ ಮೋದಿ (Narendra Modi) ರವರ ನಾಯಕತ್ವದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದಿರುವಂತಹ ಜನರಿಗೆ ಆಯುಷ್ಮಾನ್ ಕಾರ್ಡ್ ಯೋಜನೆ (Ayushman Card Yojana) ಯನ್ನು ಜಾರಿಗೆ ತರುವ ಮೂಲಕ ವಾರ್ಷಿಕವಾಗಿ 5 ಲಕ್ಷಗಳ ವರೆಗೆ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳುವಂತಹ ಯೋಜನೆಯನ್ನು ಜಾರಿಗೆ ತಂದಿತ್ತು. ಇನ್ನೂ ಇತ್ತೀಚಿಗಷ್ಟೇ 70 ವರ್ಷ ವಯಸ್ಸಿಗಿಂತ ಅಧಿಕ ವಯಸ್ಸಿನ ವ್ಯಕ್ತಿಗಳಿಗೆ ಕೂಡ ಆಯುಷ್ಮಾನ್ ಕಾರ್ಡ್ ಯೋಜನೆ ಯನ್ನು ಪರಿಚಯಿಸುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.
2024ರ ಅಂಕಿ ಅಂಶಗಳ ಪ್ರಕಾರ ಇದುವರೆಗೂ ಭಾರತ ದೇಶದಲ್ಲಿ 24.7 ಕೋಟಿಗಿಂತಲೂ ಹೆಚ್ಚಿನ ಆಯುಷ್ಮಾನ್ ಕಾರ್ಡ್ ಗಳು (Ayushman Card) ನಿರ್ಮಾಣವಾಗಿವೆ ಹಾಗೂ ಹಂಚಿಕೆಯಾಗಿದೆ ಎನ್ನುವಂತಹ ಮಾಹಿತಿ ದೊರಕಿದೆ. ಈ ಯೋಜನೆಯ ಮೂಲಕ ಇಡೀ ದೇಶದಲ್ಲಿ 29 ಸಾವಿರಗಳಿಗಿಂತಲೂ ಅಧಿಕ ಆಸ್ಪತ್ರೆಗಳಲ್ಲಿ ಕ್ಯಾಶ್ ಲೆಸ್ ವ್ಯವಸ್ಥೆಯ ಮೂಲಕ ಚಿಕಿತ್ಸೆಯನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕಲ್ಪಿಸಲಾಗಿದೆ.
ಒಂದು ಕುಟುಂಬದಲ್ಲಿ ಎಷ್ಟು ಜನ ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳಬಹುದು? ಏನಿದು ಹೊಸ ನಿಯಮ:
ಸರ್ಕಾರದಿಂದ ಈ ವಿಚಾರದ ಬಗ್ಗೆ ಯಾವುದೇ ರೀತಿಯ ಅಧಿಕೃತ ನಿಯಮಗಳು ಜಾರಿಯಾಗಿಲ್ಲ. ಹೀಗಾಗಿ ಒಂದು ಕುಟುಂಬದಿಂದ ಆಯುಷ್ಮಾನ್ ಕಾರ್ಡ್ (Ayushman Card) ಅನ್ನು ಎಷ್ಟು ಜನರು ಬೇಕಾದ್ರೂ ಕೂಡ ಮಾಡಿಕೊಳ್ಳಬಹುದಾದಂತಹ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಆದರೆ ಕುಟುಂಬದ ಪ್ರತಿ ಸದಸ್ಯರು ಕೂಡ ಈ ವಿಶೇಷವಾದ ಯೋಜನೆಗೆ ಅರ್ಹರಾಗಿರ್ಬೇಕು ಅನ್ನೋದನ್ನ ಕೂಡ ಪ್ರಮುಖವಾಗಿ ತಿಳಿದುಕೊಳ್ಳಬೇಕಾಗುತ್ತದೆ.
pmjay.gov.in ಅಧಿಕೃತ ವೆಬ್ ಸೈಟ್ ಗೆ ಹೋಗಿ ನಿಮ್ಮ 10 ಸಂಖ್ಯೆ ಇರುವಂತಹ ಮೊಬೈಲ್ ನಂಬರ್ ಅನ್ನು ಹಾಕಿ ಓಟಿಪಿ ಜನರೇಟ್ ಮಾಡಿದ ನಂತರ ನೀವು ನಿಜಕ್ಕೂ ಈ ಕಾರ್ಡ್ ಪಡೆದುಕೊಳ್ಳುವುದಕ್ಕೆ ಅರ್ಹರಾಗಿದ್ದೀರೋ ಇಲ್ವೋ ಅನ್ನೋದನ್ನ ಅಧಿಕೃತವಾಗಿ ತಿಳಿದುಕೊಳ್ಳಬಹುದು.