ರಾಜ್ಯದ ರೈತರಿಗೆ ಸಿಎಂ ಸಿದ್ದರಾಮಯ್ಯ ಇದೀಗ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಹೌದು ಅಕ್ರಮ ಕೃಷಿ ಪಂಪ್ ಸೆಟ್ (Agriculture Pump Set) ಗಳ ಸಕ್ರಮ ಯೋಜನೆ ಮರು ಜಾರಿ ಮಾಡುವ ಬಗ್ಗೆ ಸಿಹಿಸುದ್ದಿಯನ್ನು ನೀಡಿದ್ದು ನೀರಾವರಿ ಪಂಪ್‌ಸೆಟ್‌ಗಳಿಗೆ ರೈತರ ಆಧಾರ್ ಸಂಖ್ಯೆ ಜೋಡಣೆ ಬಗ್ಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಈ ಬಗ್ಗೆ ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿ ಕೃಷಿ ಪಂಪ್ ಸೆಟ್ (Agriculture Pump Set) ಯೋಜನೆ ಮರು ಸ್ಥಾಪಿಸುದಾಗಿ ಸಿದ್ದರಾಮಯ್ಯ ತಿಳಿಸಿದರು.
ಕೃಷಿ ಪಂಪ್ ಸೆಟ್ (Agriculture Pump Set) ಗಳಿಗೆ ರೈತರು ಆಧಾರ್ ಲಿಂಕ್ ಮಾಡುತ್ತಿರುವುದನ್ನು ಕೈ ಬಿಡಬೇಕು. ಬರ, ಅತಿವೃಷ್ಟಿ ಹಾನಿ, ಪ್ರವಾಹ ಹಾನಿ, ಎನ್ಡಿಆರ್ಎಫ್ ಪರಿಹಾರ ಮಾನದಂಡ ತಿದ್ದುಪಡಿ ಮಾಡಿ ವೈಜ್ಞಾನಿಕ ಪರಿಹಾರ ಮಾನದಂಡ ಜಾರಿಯಾಗಬೇಕು ಎಂದು ಮಾಹಿತಿ ನೀಡಿದ್ದಾರೆ.
ಯೋಜನೆ ಮರುಜಾರಿ:
ರೈತರು ನಿರ್ಮಿಸುವಂತಹ ಕೊಳವೆ ಬಾವಿಗಳಿಗೆ 500 ಮೀಟರ್ ವರೆಗೆ ಸಂಪರ್ಕ ಕಲ್ಪಿಸುವ ಉಚಿತ ಯೋಜನೆ ಯನ್ನು ಸರಕಾರ ಈಮೊದಲು ನೀಡಿತ್ತು. ರೈತರು ಅಕ್ರಮ ಸಕ್ರಮದ ಅಡಿಯಲ್ಲಿ ಅರ್ಧ ಕಿ.ಮೀ. ವರೆಗೆ ವಿದ್ಯುತ್ ಕಲ್ಪಿಸಲು ಕಂಬಗಳು, ತಂತಿ, ಹಾಗೂ ಅದಕ್ಕೆ ತಗಲುವಂತಹ ವೆಚ್ಛವನ್ನು ಭರಿಸಿ ರೈತರಿಗೆ ಸರ್ಕಾರವೇ ವಿದ್ಯುತ್ ನೀಡುತ್ತಿತ್ತು.
ಆದರೆ, ಈಗ ಸರ್ಕಾರ ಈ ಯೋಜನೆ ನಿಲ್ಲಿಸಿತ್ತು., ಹಾಗಾಗಿ ವಿದ್ಯುತ್ ಪಡೆಯಲು ರೈತರಿಗೆ ಕಷ್ಟ ವಾಗಿತ್ತು. ಇದೀಗ ಅಕ್ರಮ ಕೃಷಿ ಪಂಪ್ ಸೆಟ್ (Agriculture Pump Set) ಗಳ ಸಕ್ರಮ ಯೋಜನೆ ಮರು ಜಾರಿ ಸೇರಿ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿ ಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದ್ದಾರೆ.
ಸಾಲ ನೆಪದಲ್ಲಿ ರೈತರಿಗೆ ಕಿರುಕುಳ:
ಖಾಸಗಿ ಫೈನಾನ್ಸ್ ಬ್ಯಾಂಕ್ ಗಳು ಸಾಲ (Loan) ವಸೂಲಿ ನೆಪದಲ್ಲಿ ರೈತರಿಗೆ ಕಿರುಕುಳ ನೀಡುತ್ತಿದ್ದು, ಇದಕ್ಕೆ ಸೂಕ್ತ ರೀತಿಯಲ್ಲಿ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದ್ದಾರೆ. ಜಿಂದಾಲ್ ಗೆ ನೀಡಿದ 3667 ಎಕರೆ ಜಮೀನು ಹಿಂಪಡೆಯಬೇಕು ಎಂದು ರೈತರು ಒತ್ತಾಯ ಮಾಡಿದ್ದು ರಾಜ್ಯ ಸರ್ಕಾರವು ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡುವುದಕ್ಕೆ ಬದ್ಧವಾಗಿದೆ. ವಿಧಾನ ಪರಿಷತ್‌ನಲ್ಲಿ ಪಕ್ಷ ಬಹುಮತ ಸಾಧಿಸಿದ ನಂತರ ತಿದ್ದುಪಡಿ ವಿಧೇಯಕ ಮಂಡಿಸಿ ಹಿಂದಿನ ಕಾಯ್ದೆ ಮರು ಸ್ಥಾಪಿಸಲಾಗುವುದು ಎಂದು ಸೂಚಿಸಿದರು.