ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಕೇಂದ್ರ ಸರ್ಕಾರ ಮಹಿಳೆಯರಿಗೆ ಅಡುಗೆ ಮಾಡೋದಕ್ಕೆ ಕಷ್ಟ ಆಗಬಾರದು ಎನ್ನುವ ಕಾರಣಕ್ಕಾಗಿ ಉಜ್ವಲ ಯೋಜನೆ (PM Ujjwala Scheme) ಅಡಿಯಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ನೀಡುವಂತಹ ಕೆಲಸವನ್ನು ಮಾಡಿತ್ತು. ಇಂದು ಭಾರತ ದೇಶದ ಬಹುತೇಕ ಎಲ್ಲಾ ಕಡೆಗಳಲ್ಲಿ ಗ್ಯಾಸ್ ಕನೆಕ್ಷನ್ ಇದೆ ಅಂತ ಅಂದ್ರೆ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಈ ಉಜ್ವಲ್ ಯೋಜನೆನೆ ಕಾರಣ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ಕೇಂದ್ರ ಸರ್ಕಾರ ಉಜ್ವಲ್ ಗ್ಯಾಸ್ ಯೋಜನೆ 4.0 ಲಾಂಚ್ ಮಾಡೋದಕ್ಕೆ ಸಿದ್ಧವಾಗಿದ್ದು ಈ ಯೋಜನೆ ಅಡಿಯಲ್ಲಿ ಮತ್ತೊಂದು ಗುಡ್ ನ್ಯೂಸ್ ಅನ್ನು ದೇಶದ ಮಹಿಳೆಯರಿಗೆ ನೀಡುವುದಕ್ಕೆ ಹೊರಟಿದೆ.
ಹೌದು ಉಜ್ವಲ್ ಗ್ಯಾಸ್ ಯೋಜನೆ (PM Ujjwala Scheme) ಯ ಹೊಸ ಆವೃತ್ತಿಯ ಜೊತೆಗೆ ಭಾರತದ ಅತ್ಯಂತ 50 ಲಕ್ಷಕ್ಕೂ ಅಧಿಕ ಹೊಸ ಉಚಿತ ಗ್ಯಾಸ್ ಕನೆಕ್ಷನ್ ನೀಡುವುದಕ್ಕೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಸದ್ಯದ ಮಟ್ಟಿಗೆ ಇಡೀ ಭಾರತ ದೇಶದಲ್ಲಿ 31.40 ಕೋಟಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ (LPG Gas Connection) ಇದೆ ಹಾಗೂ ಅದರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ 10.33 ಕೋಟಿ ಗ್ಯಾಸ್ ಕನೆಕ್ಷನ್ ಅನ್ನು ಅಳವಡಿಸಲಾಗಿದೆ.
ಈಗಾಗಲೇ ಮೂರು ಬಾರಿ ಈ ಯೋಜನೆಯನ್ನು ಲಾಂಚ್ ಮಾಡಿದಾಗ್ಲೂ ಕೂಡ ಸರ್ಕಾರ ಸಾಕಷ್ಟು ಕಡೆಗಳಲ್ಲಿ ಗ್ಯಾಸ್ ಕನೆಕ್ಷನ್ ಅನ್ನು ಮನೆಯ ಮಹಿಳೆಯರಿಗೆ ಸಹಕಾರವಾಗುವ ರೀತಿಯಲ್ಲಿ ತಲುಪಿಸುವಂತಹ ಕೆಲಸವನ್ನು ಮಾಡಿದೆ.
ಆದರೆ ವಿಶೇಷವಾಗಿ ಈ ಬಾರಿ ಪ್ರಧಾನ ಮಂತ್ರಿ ಉಜ್ವಲ್ ಗ್ಯಾಸ್ ಕನೆಕ್ಷನ್ ಯೋಜನೆ (PM Ujjwala Scheme) 4.0 ಅನ್ನು ಅತ್ಯಂತ ಹಳ್ಳಿ ಕಡೆಗಳಲ್ಲಿ ಅಂದರೆ ಈ ಹಿಂದೆ ತಲುಪಲಾಗದಂತಹ ಸ್ಥಳಗಳಲ್ಲಿ ತಲುಪಿಸಿ ಅವರಿಗೆ ಉಚಿತ ಗ್ಯಾಸ್ ಕನೆಕ್ಷನ್ ನೀಡುವಂತಹ ಕೆಲಸವನ್ನು ಸರ್ಕಾರ ಮಾಡೋದಕ್ಕೆ ಹೊರಟಿದೆ ಅನ್ನೋದನ್ನ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಈ ಬಾರಿ ಭಾರತ ದೇಶದ ಸರಿಸುಮಾರು 50 ಲಕ್ಷ ಕುಟುಂಬಗಳು ಈ ಯೋಜನೆ ಅಡಿಯಲ್ಲಿ ಈ ಬಾರಿ ಗ್ಯಾಸ್ ಕನೆಕ್ಷನ್ ಅನ್ನು ಪಡೆದುಕೊಳ್ಳಲಿದ್ದಾರೆ.