ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಇಂದು ಹಮ್ಮಿಕೊಳ್ಳುತ್ತಿದೆ. ಮಹಿಳೆಯರು ದುಡಿಯುವಂತೆ ಆಗಬೇಕು, ಮತ್ತಷ್ಟು ಸಬಲಿಕರಣ ಆಗಬೇಕು ಎನ್ನುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಸರಕಾರ ಆರಂಭ ಮಾಡಿದೆ. ಮುಖ್ಯವಾಗಿ ಮಹಿಳೆಯರಿಗೆ ಉದ್ಯೋಗ ತರಬೇತಿ, ಕಡಿಮೆ ಬಡ್ಡಿಯ ಸಾಲ (Loan) ಸೌಲಭ್ಯ, ಮಹಿಳಾ ಮೀಸಲಾತಿ ಇತ್ಯಾದಿ ಸೌಲಭ್ಯ ಗಳನ್ನು ಸರಕಾರ ಘೋಷಣೆ ಮಾಡ್ತಾ ಇದೆ. ಹಾಗೆಯೇ ಮಹಿಳೆಯರು ಸ್ವ ಉದ್ಯಮ ವನ್ನು ಸ್ಥಾಪಿಸಲು ಸರಕಾರ ಬಡ್ಡಿ ರಹಿತ ಸಾಲ (Interest Free Loan) ಸೌಲಭ್ಯ ವನ್ನು ಘೋಷಣೆ ಮಾಡಿದೆ. ಆಸಕ್ತಿ ಇದ್ದ ಮಹಿಳೆಯರು ಈ ಯೋಜನೆಯ ಸದುಪಯೋಗ ಮಾಡಿಕೊಳ್ಳಬಹುದು.
ಲಖ್ಪದಿ ದೀದಿ ಯೋಜನೆ:
ಕೇಂದ್ರ ಸರ್ಕಾರವು ಗ್ರಾಮೀಣ ಮಹಿಳೆಯರನ್ನು ಗುರಿಯಾಗಿಸಿ ಕೊಂಡು ಅವರ ಅಭಿವೃದ್ಧಿ ಗಾಗಿ ಈ ಯೋಜನೆ ರೂಪಿಸಿದೆ. ಲಖ್ಪತಿ ದೀದಿ ಯೋಜನೆ (Lakhpati Didi Scheme) ಯ ಮೂಲಕ ಮಹಿಳೆಯರನ್ನು ಆರ್ಥಿಕ ಸಬಲ ರನ್ನಾಗಿ ಮಾಡುವುದೇ ಇದರ ಮುಖ್ಯ ಗುರಿಯಾಗಿದೆ. ಇದರಲ್ಲಿ ಮಹಿಳೆಯರಿಗೆ ವಿಶೇಷ ತರಬೇತಿ ನೀಡುವ ಮೂಲಕ ಮತ್ತು ಉದ್ಯೋಗವನ್ನು ನಡೆಸಲು ಬಡ್ಡಿಯಿಲ್ಲದೆ 1 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳವರೆಗೆ ಸಾಲ (Loan) ವನ್ನು ನೀಡಲಾಗುತ್ತದೆ.
ವಿಶೇಷ ತರಬೇತಿ:
ಈ ಯೋಜನೆಯ ಮೂಲಕ ಮಹಿಳೆಯರು ಹೆಚ್ಚು ಕ್ರಿಯಾಶೀಲ ರಾಗಲು, ಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳಲು ವಿವಿಧ ರೀತಿಯ ತರಬೇತಿ ಕೂಡ ನೀಡಲಾಗುತ್ತದೆ. ಎಲ್ ಇಡಿ ಬಲ್ಬ್ ತಯಾರಿಕೆ ತರಬೇತಿ, ಅಣಬೆ ಕೃಷಿಯಂತಹ ವಿವಿಧ ತರಬೇತಿ, ಹಣಕಾಸು ನಿರ್ವಹಣೆ, ಮಾರ್ಕೆಟಿಂಗ್, ಆನ್‌ಲೈನ್ ವ್ಯವಹಾರ, ತರಬೇತಿ ನೀಡಿ ಅವರ ಸ್ವಂತ ಕಾಲಿನ ಮೇಲೆ ನಿಲ್ಲುವಂತೆ ಪ್ರೋತ್ಸಾಹಿಸಲಾಗುತ್ತದೆ. ಹಾಗಾಗಿ ಇಂತಹ ಸ್ವ ಉದ್ಯಮ ಆರಂಭಿಸಲು ಐದು ಲಕ್ಷ ವರೆಗೆ ಸಾಲ ಸೌಲಭ್ಯ ನೀಡಲಾಗುತ್ತೆ.
ಇವರು ಅರ್ಹರು:
ಸ್ವಸಹಾಯ ಸಂಘಗಳ ಸದಸ್ಯರಾಗಿರುವವರು ಮತ್ತು 18 ರಿಂದ 50 ವರ್ಷದೊಳಗಿನ ಮಹಿಳೆಯರು ಲಖ್ಪತಿ ದೀದಿ ಯೋಜನೆ (Lakhpati Didi Scheme) ಗೆ ಅರ್ಹರಾಗಿರುತ್ತಾರೆ. ಇದಕ್ಕೆ ಅರ್ಜಿದಾರರು ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಯನ್ನು ಸಲ್ಲಿಕೆ ಮಾಡಬಹುದಾಗಿದೆ. ಅರ್ಜಿ ಹಾಕಲು ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ಪಾಸ್ಬುಕ್, SHG ಸದಸ್ಯತ್ವ ಕಾರ್ಡ್ ದೂರವಾಣಿ ಸಂಖ್ಯೆ, ಪಾಸ್ಪೋರ್ಟ್ ಸೈಜ್ ಫೋಟೋ ಇತ್ಯಾದಿ ದಾಖಲೆಗಳು ಅಗತ್ಯ ವಿದೆ.