ಭಾರತ ದೇಶದಲ್ಲಿ ಹಣವನ್ನು ಇತ್ತೀಚಿನ ದಿನಗಳಲ್ಲಿ ಜನರು ಕೇವಲ ಉಳಿತಾಯ ಮಾಡುವುದಕ್ಕೆ ಮಾತ್ರವಲ್ಲ ಹಣವನ್ನು ಹೂಡಿಕೆ ಮಾಡಿ ಅದನ್ನ ಹೆಚ್ಚುಗೊಳಿಸುವುದಕ್ಕೆ ಕೂಡ ಕಲಿತುಕೊಂಡಿದ್ದಾರೆ ಹಾಗೂ ಆ ಬಗ್ಗೆ ಆಸಕ್ತಿಯನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ.
ಇಂತಹ ಹೂಡಿಕೆಯ ವಿಚಾರಕ್ಕೆ ಬಂದಾಗ ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಸ್ಥಳ ಅಂದ್ರೆ ಅದು ನಿಸ್ಸಂಶಯವಾಗಿ ಪೋಸ್ಟ್ ಆಫೀಸ್ ಯೋಜನೆಗಳು (Post Office Schemes). ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ರಿಕರಿಂಗ್ ಡೆಪಾಸಿಟ್ ಯೋಜನೆಯ (Post Office Recurring Deposit Scheme) ಬಗ್ಗೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಲಕ್ಷಾದೀಶ್ವರರಾಗಬಹುದು:
ಪೋಸ್ಟ್ ಆಫೀಸ್ನ ರಿಕರಿಂಗ್ ಡೆಪಾಸಿಟ್ ಯೋಜನೆ (Post Office Recurring Deposit Scheme) ಯಲ್ಲಿ 6.7% ಬಡ್ಡಿದರವನ್ನು ರಿಟರ್ನ್ ರೂಪದಲ್ಲಿ ನೀಡಲಾಗುತ್ತದೆ. ಐದು ವರ್ಷದ ಮೆಚುರಿಟಿಯ ಈ ಯೋಜನೆಯಲ್ಲಿ ನೀವು ಮೂರು ವರ್ಷಕ್ಕೆ ನಿಮ್ಮ ಖಾತೆಯನ್ನು ಕ್ಲೋಸ್ ಮಾಡಬಹುದಾಗಿದೆ.
ನೂರು ರೂಪಾಯಿಗಳಿಂದ ಈ ಯೋಜನೆಯಲ್ಲಿ ನೀವು ಹಣವನ್ನು ಹೂಡಿಕೆ ಮಾಡುವುದನ್ನ ಪ್ರಾರಂಭಿಸಿ ಮ್ಯಾಕ್ಸಿಮಮ್ ಯಾವುದೇ ಲಿಮಿಟ್ ಇಲ್ಲದೆ ಹಣವನ್ನು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ನೀವು ಹಣವನ್ನು ಹೂಡಿಕೆ ಮಾಡಬೇಕಾಗಿರುತ್ತದೆ ಹಾಗೂ ಅದರ 50% ಕೆಲವೊಮ್ಮೆ ನಿಮಗೆ ಅಗತ್ಯ ಇದ್ದಾಗ ಲೋನ್ (Loan) ರೂಪದಲ್ಲಿ ಕೂಡ ನೀಡಲಾಗುತ್ತದೆ.
ತಿಂಗಳಿಗೆ ನೀವು 2200 ರೂಪಾಯಿ ಹಣವನ್ನು ಐದು ವರ್ಷಗಳವರೆಗೆ ಈ ಯೋಜನೆ ಅಡಿಯಲ್ಲಿ ಪಾವತಿ ಮಾಡಿಕೊಂಡು ಹೋದರೆ 1.32 ಲಕ್ಷ ರೂಪಾಯಿ ಹಣವನ್ನು ನೀವು 5 ವರ್ಷಗಳ ವರೆಗೆ ಕಟ್ಟಿದಂತಾಗುತ್ತದೆ. 6.7 ಪ್ರತಿಶತ ಬಡ್ಡಿ ದರದಲ್ಲಿ ಈ ಹೂಡಿಕೆ ಮೇಲೆ ನೀವು ಹೆಚ್ಚುವರಿಯಾಗಿ 25,004 ರೂಪಾಯಿಗಳ ಬಡ್ಡಿಯನ್ನು ಪಡೆದುಕೊಂಡಂತಾಗುತ್ತದೆ ಅಂದ್ರೆ ಮಾಡಿರುವಂತಹ 1.32 ಲಕ್ಷ ರೂಪಾಯಿಗಳ ಹೂಡಿಕೆಗೆ ರಿಟರ್ನ್ ರೂಪದಲ್ಲಿ 1,57,004 ರೂಪಾಯಿಗಳನ್ನು ಪಡೆದುಕೊಳ್ಳುತ್ತೀರಿ.