ಪ್ರಧಾನಿ ನರೇಂದ್ರ ಮೋದಿ ರವರ ನೇತೃತ್ವದಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM Kisan Yojana) ಯನ್ನು ಆರ್ಥಿಕವಾಗಿ ಹಿಂದುಳಿದಿರುವಂತಹ ರೈತವರ್ಗದ ಜನರಿಗೆ ನಾಲ್ಕು ತಿಂಗಳಿಗೆ ಒಮ್ಮೆ ತಲ ಎರಡು ಸಾವಿರ ರೂಪಾಯಿಗಳ ರೀತಿಯಲ್ಲಿ ವರ್ಷಕ್ಕೆ ಒಟ್ಟಾರೆ 6000 ಆರ್ಥಿಕ ಸಹಾಯವನ್ನು ನೀಡುವ ನಿಟ್ಟಿನಲ್ಲಿ ಪ್ರಾರಂಭ ಮಾಡಲಾಗಿದೆ.
ಇದುವರೆಗೂ ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ ನಿಮಗೆಲ್ಲರಿಗೂ ತಿಳಿದಿರಬಹುದು 17 ಕಂತುಗಳನ್ನ ಅರ್ಹವಾಗಿರುವಂತಹ ರೈತರ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗಿದೆ. 18ನೇ ಕಂತಿನ ಹಣ ಇದೇ ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗುವಂತಹ ಸಾಧ್ಯತೆ ಹೆಚ್ಚಾಗಿದೆ. ಆದರೆ ಕೆಲವು ರೈತರಿಗೆ ಕೆಲವು ವಿಚಾರಗಳಿಗಾಗಿ 18ನೇ ಕಂತಿರ ಹಣವನ್ನು ವರ್ಗಾವಣೆ ಮಾಡಲು ಸಾಧ್ಯ ಇಲ್ಲ ಎನ್ನುವುದಾಗಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಇವರಿಗೆ ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಹಣ ಸಿಗೋದಿಲ್ಲ:
- ಅಪ್ಲಿಕೇಶನ್ ಫಾರ್ಮ್ ನಲ್ಲಿ ಯಾರ ಹೆಸರು ತಪ್ಪಾಗಿ ದಾಖಲಾಗಿದೆಯೋ ಹಾಗೂ ಬ್ಯಾಂಕ್ ಖಾತೆಯ ಡಿಟೇಲ್ಸ್ ಅನ್ನು ಕೂಡ ನೀವು ತಪ್ಪಾಗಿ ಹಾಕಿದ್ರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗೋದಿಲ್ಲ.
- 18ನೇ ಕಂತಿನ ಹಣ ನಿಮ್ಮ ಖಾತೆಗೆ ಬರಬೇಕು ಅಂತ ಅಂದ್ರೆ ನಿಮ್ಮ ಭೂಪರಿಶೀಲನೆ ಆಗಬೇಕಾಗಿರುವುದು ಕೂಡ ಕಡ್ಡಾಯವಾಗಿದೆ.
- ಇ-ಕೆವೈಸಿ ಪ್ರಮುಖವಾಗಿ ಸಂಪೂರ್ಣವಾಗಿ ಸರಿಯಾದ ರೀತಿಯಲ್ಲಿ ಪೂರ್ತಿಯಾಗಿರಬೇಕಾಗಿರುತ್ತದೆ. ಒಂದು ವೇಳೆ ಇದು ಸರಿಯಾಗಿ ಆಗಿಲ್ಲದೆ ಹೋದಲ್ಲಿ ಇದು ಕೂಡ ನಿಮ್ಮ ಕಂತಿನ ಹಣ ಖಾತೆಗೆ ಬಾರದಂತೆ ತಡೆಯುತ್ತದೆ.
- ಪ್ರಧಾನ ಮಂತ್ರಿ ಕಿಸಾನ್ ಯೋಜನೆ (PM Kisan Yojana) ಯ ಹಣ ನಿಮ್ಮ ಖಾತೆಗೆ ಬರಬೇಕು ಅಂತ ಅಂದ್ರೆ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಕಾರ್ಡ್ (Aadhaar Card) ಲಿಂಕ್ ಆಗಿರ ಬೇಕಾಗಿರುವುದು ಕೂಡ ಕಡ್ಡಾಯವಾಗಿದೆ. ಇದರ ಜೊತೆಗೆ ನೀವು ಅನರ್ಹರಾಗಿದ್ದರೆ ಆ ಸಂದರ್ಭದಲ್ಲಿ ಕೂಡ ನಿಮ್ಮನ್ನು ಲಿಸ್ಟಿನಿಂದ ಹೊರ ಹಾಕಬಹುದಾಗಿದೆ.