ಮಾನ್ಯ ಪ್ರಧಾನ ಮಂತ್ರಿಗಳಾಗಿರುವಂತಹ ನರೇಂದ್ರ ಮೋದಿ (Narendra Modi) ರವರ ಆಡಳಿತದಲ್ಲಿ ಪ್ರಾರಂಭವಾಗಿರುವಂತಹ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದೇಶದ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಲ್ಲಿ ಜಾರಿಗೆ ತಂದಿರುವಂತಹ ಒಂದು ಜನಪ್ರಿಯ ಯೋಜನೆಯಾಗಿದೆ.
ಈ ಯೋಜನೆ ಅಡಿಯಲ್ಲಿ ನಿರ್ದಿಷ್ಟ ಸಮಯದವರೆಗೆ ಹಣವನ್ನು ಹೂಡಿಕೆ ಮಾಡಿದ ನಂತರ ಹೆಣ್ಣು ಮಕ್ಕಳ ಉನ್ನತ ವ್ಯಾಸಂಗ ಹಾಗೂ ಮದುವೆ ಹಣದ ಖರ್ಚಿಗಾಗಿ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಈಗ ಈ ಯೋಜನೆ ಬಗ್ಗೆ ಅಕ್ಟೋಬರ್ 1 ನೇ ತಾರೀಖಿನಿಂದ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಕೆಲವೊಂದು ಪ್ರಮುಖ ಬದಲಾವಣೆಗಳು ಕಂಡು ಬರಲು ಎಂಬ ಮಾಹಿತಿ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.
ಮೊದಲು ಬೇರೆ ಬೇರೆ ರೀತಿಯ ಸಂಬಂಧವನ್ನು ಹೊಂದಿರುವಂತಹ ವ್ಯಕ್ತಿಗಳು ತಮ್ಮ ಮನೆಯ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯ ಸಮೃದ್ಧಿ ಯೋಜನೆ (Sukanya Samriddhi Yojana) ಯಲ್ಲಿ ಖಾತೆಯನ್ನು ತೆರೆಯಬಹುದಾಗಿತ್ತು ಆದರೆ ಈಗ ಕೇವಲ ತಂದೆ ತಾಯಿ ಅಂತಹ ಸಹಜ ಅಧಿಕಾರವನ್ನು ಹೊಂದಿರುವಂತಹ ಪೋಷಕರು ಮಾತ್ರ ಹೆಣ್ಣು ಮಗುವಿನ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ.
ಇನ್ನೊಂದು ವೇಳೆ ನೀವು ನಿಮ್ಮ ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಯ ಖಾತೆಯನ್ನು ಒಂದು ಪೋಸ್ಟ್ ಆಫೀಸ್ (Post Office) ವರ್ಗಾವಣೆ ಮಾಡುವುದಕ್ಕೆ ಅಲ್ಲಿಂದ ಫಾರ್ಮ್ ಅನ್ನು ಪಡೆದುಕೊಂಡು ಸರಿಯಾದ ರೀತಿಯಲ್ಲಿ ಮಾಹಿತಿಗಳನ್ನ ತುಂಬಿಸಿ ಅದನ್ನು ವರ್ಗಾವಣೆ ಮಾಡುವುದಕ್ಕೆ ಬಳಸಿಕೊಳ್ಳಬಹುದಾಗಿದೆ.
ಈ ರೀತಿಯ ವರ್ಗಾವಣೆ ಪ್ರಕ್ರಿಯೆಯನ್ನು ನಿಜವಾದ ಪೋಷಕರ ಹೆಸರನ್ನು ಪರಿವರ್ತಿಸುವ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದು ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬಹುದಾಗಿದೆ. ಈ ರೀತಿಯ ನಿಯಮಗಳ ಬದಲಾವಣೆ ಆಗಿರುವುದನ್ನು ನೀವು ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಕಚೇರಿಗೆ ಹೋಗಿ ಸುಕನ್ಯಾ ಸಮೃದ್ಧಿ ಯೋಜನೆಯ (Sukanya Samriddhi Yojana) ಹೊಸ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನ ಅಧಿಕಾರಿಗಳಿಂದ ತಿಳಿದುಕೊಳ್ಳಬಹುದಾಗಿದೆ.