ನಿವೃತ್ತಿಯ ನಂತರ ಕೂಡ ರೆಗುಲರ್ ಇನ್ಕಮ್ ಬೇಕು ಅಂತ ಒಂದೊಳ್ಳೆ ಹೂಡಿಕೆಯ ಸ್ಕೀಮ್ ಗಾಗಿ ಕಾಯ್ತಾ ಇದ್ರೆ ಅಂಥವರಿಗೆ ಖಂಡಿತವಾಗಿ ಈ ಲೇಖನ ಸಾಕಷ್ಟು ಸಹಾಯ ಮಾಡುತ್ತೆ ಅನ್ನೋದನ್ನ ಹೇಳಬಹುದಾಗಿದೆ. ಹೌದು ನಾವು ಹೇಳ್ತಾ ಇರೋದು ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ (Senior Citizen Scheme) ಬಗ್ಗೆ.
Senior Citizen Savings Scheme:
ಈ ಯೋಜನೆಯನ್ನು ವಿಶೇಷವಾಗಿ ಹಿರಿಯ ನಾಗರಿಕರಿಗೆ ವಿನ್ಯಾಸಗೊಳಿಸಲಾಗಿದ್ದು ಭಾರತ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿರುವುದು. ಹೀಗಾಗಿ ಇದು ಲಾಭದಾಯಕದ ಜೊತೆಗೆ ಅತ್ಯಂತ ಸುರಕ್ಷಿತ ಎಂಬುದನ್ನು ಕೂಡ ನಾವಿಲ್ಲಿ ತಿಳಿದುಕೊಳ್ಳಬಹುದಾಗಿದೆ.
60 ವರ್ಷ ವಯಸ್ಸಿಗಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ಇದು ಲಾಭದಾಯಕ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ನೀವು ನಿವೃತ್ತಿಯ ನಂತರ ತಿಂಗಳಿಗೆ ಒಂದು ನಿರ್ದಿಷ್ಟ ಹಣವನ್ನು ಪಡೆದುಕೊಳ್ಳಬಹುದಾಗಿದ್ದು, ನಿವೃತ್ತಿಯ ನಂತರ ಕೂಡ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ದೃಢಗೊಳಿಸುತ್ತದೆ.
ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ (Post Office) ಹೋಗಿ ನೀವು ಈ ಯೋಜನೆಯಲ್ಲಿ ಖಾತೆಯನ್ನು ತಡೆಯಬಹುದಾಗಿದೆ. 8.2 ಪ್ರತಿಶತ ಬಡ್ಡಿದರವನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದ್ದು, ಇದು ಮೂರು ತಿಂಗಳಿಗೊಮ್ಮೆ ಕೂಡ ನಿಮಗೆ ಸಿಗುವಂತಹ ಅವಕಾಶವಿದೆ. ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿದರವನ್ನು ನೀಡುವಂತಹ ಕೆಲಸ ಯೋಜನೆ (Senior Citizen Scheme) ಮಾಡುತ್ತಿದ್ದರು ಹಾಗೂ ಇದು ಅತ್ಯಂತ ಲಾಭದಾಯಕ ಹಾಗೂ ಸುರಕ್ಷಿತ ಕೂಡ ಹೌದು. ಒಂದು ವೇಳೆ ಐದು ವರ್ಷಕ್ಕೆ 30 ಲಕ್ಷ ರೂಪಾಯಿ ಡೆಪಾಸಿಟ್ ಅನ್ನು ಮಾಡಿದರೆ, ವರ್ಷಕ್ಕೆ 1.23 ಲಕ್ಷ ರೂಪಾಯಿಗಳ ರೀತಿಯಲ್ಲಿ 5 ವರ್ಷಕ್ಕೆ ಕೇವಲ ಬಡ್ಡಿಯಲ್ಲಿ 6.15 ಲಕ್ಷ ರೂಪಾಯಿಗಳನ್ನು ಸಂಪಾದನೆ ಮಾಡಬಹುದಾಗಿದೆ.
ಮೂರು ತಿಂಗಳಿಗೊಮ್ಮೆ ಲೆಕ್ಕಾಚಾರ ಹಾಕುವುದಾದರೆ ಈ ಯೋಜನೆ ಅಡಿಯಲ್ಲಿ 30,750 ರೂಪಾಯಿಗಳನ್ನು ಪಡೆದುಕೊಳ್ಳುವಂತಹ ಅವಕಾಶ ಇದೆ. ಹಿರಿಯ ನಾಗರಿಕರು ತಮ್ಮ ವೃದ್ಧಾಪ್ಯದ ಜೀವನವನ್ನು ಈ ಮೂಲಕ ಸಶಕ್ತ ಗೊಳಿಸಬಹುದಾಗಿದೆ.