ಕೇಂದ್ರ ಸರ್ಕಾರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಹಿಳೆಯರ ವಿಚಾರದಲ್ಲಿ ಅವರು ಸಮಾಜದಲ್ಲಿ ಆರ್ಥಿಕವಾಗಿ ಸ್ವಾವಲಂಬಿತನದಿಂದ ಜೀವನ ಮಾಡಬೇಕು ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿರುವಂತಹ ಸಾಕಷ್ಟು ಯೋಜನೆಗಳಿವೆ. ಅವುಗಳಲ್ಲಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಮಹಿಳೆಯರು ಲಕ್ಷಾಂತರ ರೂಪಾಯಿ ಹಣವನ್ನು ಸಂಪಾದನೆ ಮಾಡಬಲ್ಲಂತಹ ನಾಲ್ಕು ಪ್ರಮುಖ ಸರ್ಕಾರಿ ಯೋಜನೆಗಳ (Govt Schemes) ಬಗ್ಗೆ ತಿಳಿಸಲು ಹೊರಟಿದ್ದೇವೆ.
Sukanya Samriddhi Yojana:
ಸುಕನ್ಯಾ ಸಮೃದ್ಧಿ ಯೋಜನೆ (Sukanya Samriddhi Yojana) ಅಡಿಯಲ್ಲಿ ಮಹಿಳೆಯರು ವಾರ್ಷಿಕವಾಗಿ 8.2% ಬಡ್ಡಿ ದರವನ್ನು ಪಡೆದುಕೊಳ್ಳಬಹುದಾಗಿದೆ ಹಾಗೂ 80 ಸಿ ಪ್ರಕಾರ ಇನ್ಕಮ್ ಟ್ಯಾಕ್ಸ್ ಅನ್ನು ಉಳಿತಾಯ ಕೂಡ ಮಾಡಬಹುದಾಗಿದೆ. ಹೆಣ್ಣು ಮಕ್ಕಳ ಹೆಸರಿನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಬಹುದಾಗಿದ್ದು ಒಂದು ಆರ್ಥಿಕ ವರ್ಷದಲ್ಲಿ 1.50 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬಹುದಾಗಿದೆ.
Mahila Samman Saving Certificate Scheme:
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆ (Mahila Samman Saving Certificate Scheme) ಅಡಿಯಲ್ಲಿ ನೀವು ಕೇವಲ ಎರಡು ವರ್ಷಗಳಿಗೆ ಹಣವನ್ನು ಹೂಡಿಕೆ ಮಾಡಿದರೆ ಸಾಕು. ಮ್ಯಾಕ್ಸಿಮಮ್ 2 ಲಕ್ಷ ರೂಪಾಯಿಗಳ ವರೆಗೆ ಹಣವನ್ನು ಹೂಡಿಕೆ ಮಾಡಬಹುದಾಗಿದ್ದು 7.5% ಬಡ್ಡಿದರದ ರಿಟರ್ನ್ ಅನ್ನು ನೀವು ಪಡೆದುಕೊಳ್ಳಬಹುದಾಗಿದೆ.
Subhadra Yojana:
ಸುಭದ್ರ ಯೋಜನೆ (Subhadra Yojana) ಅಡಿಯಲ್ಲಿ ವಾರ್ಷಿಕ 2 ಇನ್ಸ್ಟಾಲ್ಮೆಂಟ್ಗಳಲ್ಲಿ 10,000 ರೂಪಾಯಿಗಳನ್ನ ನೀಡಲಾಗುತ್ತದೆ ಹಾಗೂ ಐದು ವರ್ಷಗಳ ನಂತರ ಪ್ರತಿ ವರ್ಷ 50,000 ಹಣವನ್ನು ನೀಡಲಾಗುತ್ತದೆ.
Majhi Ladki Bahin Yojana:
ಮಹಾರಾಷ್ಟ್ರ ಸರ್ಕಾರ ಮಹಿಳೆಯರಿಗಾಗಿ ಮಾಜಿ ಲಡ್ಕಿ ಬಾಹಿನ್ ಯೋಜನೆಯ ಜಾರಿಗೆ ತಂದಿದ್ದು ಇದು ಕೂಡ ಮಹಿಳೆಯರನ್ನು ಸಾಮಾಜಿಕವಾಗಿ ಆರ್ಥಿಕ ಪರಿಸ್ಥಿತಿಯ ವಿಚಾರದಲ್ಲಿ ಸದೃಢವಾಗಬೇಕು ಎನ್ನುವ ಕಾರಣಕ್ಕಾಗಿ ಜಾರಿಗೆ ತಂದಿರುವ ಯೋಜನೆಯಾಗಿದೆ.