ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿತ್ತು. ಅದೇ ರೀತಿಯಲ್ಲಿ ರೈತರಿಗೆ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಯನ್ನು ಕೂಡ ಜಾರಿಗೆ ತಂದಿದ್ದು ಈ ವಿಚಾರದ ಕುರಿತಂತೆ ರೈತರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡುವಂತಹ ಕೆಲಸವನ್ನು ಮಾಡಿದೆ. ಅದೇನು ಎಂಬುದನ್ನ ತಿಳಿದುಕೊಳ್ಳೋಣ ಬನ್ನಿ.
ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಯೋಜನೆಯನ್ನು ಪಡೆದುಕೊಳ್ಳುವಂತಹ ಗಂಗಾ ಯೋಜನೆ (Ganga Kalyana Scheme) ಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆಯನ್ನು ಸಪ್ಟೆಂಬರ್ 15ಕ್ಕೆ ರಾಜ್ಯ ಸರ್ಕಾರ ವಿಸ್ತರಿಸಿದೆ ಎನ್ನುವಂತಹ ಗುಡ್ ನ್ಯೂಸ್ ಸರ್ಕಾರದಿಂದ ರೈತರಿಗೆ ಈ ಸಂದರ್ಭದಲ್ಲಿ ಸಿಕ್ಕಿದೆ.
ಹಿಂದುಳಿದ ವರ್ಗಗಳ ಸಣ್ಣ ಹಾಗೂ ಅತಿ ಸಣ್ಣ ವರ್ಗದ ರೈತರಿಗೆ ಗಂಗಾ ಕಲ್ಯಾಣ ಯೋಜನೆ (Ganga Kalyana Scheme) ಅಡಿಯಲ್ಲಿ ನೀರಾವರಿ ಸೌಲಭ್ಯವನ್ನು ಪಡೆದುಕೊಳ್ಳುವಂತಹ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅವಕಾಶವನ್ನು ನೀಡಲಾಗಿದ್ದು ಅರ್ಹ ರೈತರು ಈ ಯೋಜನೆಯಲ್ಲಿ ಸೆಪ್ಟೆಂಬರ್ 15ರ ವರೆಗೆ ಕೂಡ ಅರ್ಜಿ ಸಲ್ಲಿಸುವಂತಹ ಅವಕಾಶ ಇದ್ದು ಇದರ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಈ ಯೋಜನೆ ಪಡೆಯಲು ಇರಬೇಕಾಗಿರುವ ಅರ್ಹತೆಗಳು:
- ಮೊದಲಿಗೆ ವಯೋ ಮಾನ್ಯತೆ 18 ವರ್ಷದಿಂದ 60 ವರ್ಷದ ಒಳಗೆ ಇರಬೇಕು.
- ಕುಟುಂಬದ ವಾರ್ಷಿಕ ಆದಾಯದ ಬಗ್ಗೆ ಮಾತನಾಡುವುದಾದರೆ ಹಳ್ಳಿಯಲ್ಲಿ 98 ಸಾವಿರ ಹಾಗೂ ಪಟ್ಟಣದಲ್ಲಿ 1.20 ಲಕ್ಷ ರೂಪಾಯಿಗಳ ಒಳಗೆ ಇರಬೇಕು.
- ಈಗ ಇರುವಂತಹ ಜಮೀನುಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರಬೇಕು.
- ಕರ್ನಾಟಕ ರಾಜ್ಯದ ಖಾಯಂ ನಿವಾಸಿ ರೈತರಿಗೆ ಮಾತ್ರ ಈ ಯೋಜನೆ ಲಭ್ಯ ಇದೆ.
- ಇವೆಲ್ಲ ಇದ್ದರೆ ಮಾತ್ರ 4 ಲಕ್ಷಗಳವರೆಗೆ ಸಬ್ಸಿಡಿ ಸಹಿತ ಸಾಲ ಸೌಲಭ್ಯವನ್ನು ಈ ಮೇಲಿನ ವರ್ಗದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿಗಾಗಿ ಬೋರ್ವೆಲ್ ತೋಡಿಸಿಕೊಳ್ಳಲು ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.