ಕ್ರೆಡಿಟ್ ಕಾರ್ಡ್ ಬ್ಯುಸಿನೆಸ್ ಗೆ ಇನ್ನಷ್ಟು ಪ್ರೋತ್ಸಾಹ ಸಿಗಲಿ ಎನ್ನುವ ಕಾರಣಕ್ಕಾಗಿ ಜನರ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಸಬ್ಸಿಡಿರಿ ಮಾಡೋದಕ್ಕೆ ಎನ್‌ಬಿಎಫ್‍ಸಿ ಲೈಸೆನ್ಸ್ ಕೇಳಿತ್ತು. ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರಿಜೆಕ್ಟ್ ಮಾಡಿದೆ ಎಂಬುದಾಗಿ ತಿಳಿದು ಬಂದು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಈಗಾಗಲೇ ತಮ್ಮದೇ ಆಗಿರುವಂತಹ ಕ್ರೆಡಿಟ್ ಕಾರ್ಡ್ ಅನ್ನು ನಿರ್ಮಾಣ ಮಾಡುವಂತಹ ಅಧಿಕಾರವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಹಾಗೂ ಬ್ಯಾಂಕ್ ಆಫ್ ಬರೋಡ (Bank of Baroda) ಬ್ಯಾಂಕುಗಳು ಹೊಂದಿವೆ. ಇದೇ ಅಧಿಕಾರವನ್ನು ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾದ ಬಳಿ ಕೆನರಾ ಬ್ಯಾಂಕ್ ಕೇಳಿದಾಗ ಈಗಾಗಲೇ ರಿಜೆಕ್ಟ್ ಮಾಡಿರುವಂತಹ ಸುದ್ದಿ ಕೇಳಿ ಬಂದಿದೆ.
ಕೆನರಾ ಬ್ಯಾಂಕ್ (Canara Bank) ಕ್ರೆಡಿಟ್ ಕಾರ್ಡ್ ಬಿಸಿನೆಸ್ (Credit Card Business) ಅನ್ನು ಇನ್ನಷ್ಟು ದೊಡ್ಡ ಮಟ್ಟದಲ್ಲಿ ವಿಸ್ತರಿಸುವಂತಹ ಉದ್ದೇಶದಲ್ಲಿ ಇಟ್ಟು ಹಾಗೂ ಗ್ರಾಹಕರು ಕೂಡ ದೊಡ್ಡ ಮಟ್ಟದಲ್ಲಿದ್ದರು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗ ರಿಜೆಕ್ಟ್ ಮಾಡಿರುವ ಕಾರಣದಿಂದಾಗಿ ತನ್ನದೇ ಆಗಿರುವಂತಹ ವಿಧಾನದ ಮೂಲಕ ಕ್ರೆಡಿಟ್ ಕಾರ್ಡ್ ಬಿಜಿನೆಸ್ ಅನ್ನು ಮಾಡುವಂತಹ ಕೆಲಸವನ್ನು ಕೆನರಾ ಬ್ಯಾಂಕ್ ಮಾಡಬೇಕಾಗಿದೆ.
ಜೂನ್ ಅಂತ್ಯದವರೆಗೂ ಕೂಡ ಕೆನರಾ ಬ್ಯಾಂಕಿನ (Canara Bank) 9 ಲಕ್ಷ ಕ್ರೆಡಿಟ್ ಕಾರ್ಡ್ ಚಲನೆಯಲ್ಲಿತ್ತು ಇದು ಕಳೆದ ವರ್ಷಕ್ಕೆ ಹೋಲಿಸಿದರೆ 37% ಏರಿಕೆಯಲ್ಲಿದೆ. ಕೆನರಾ ಬ್ಯಾಂಕ್ ತನ್ನದೇ ಆಗಿರುವಂತಹ ಐಟಿಯ ಸಬ್ಸಿಡೈರಿ ಹಾಗೂ ಕೆನರಾ ಬ್ಯಾಂಕ್ ಕಂಪ್ಯೂಟರ್ ಸರ್ವಿಸಸ್ ಅನ್ನು ಕ್ರೆಡಿಟ್ ಕಾರ್ಡ್ ಯೂನಿಟ್ ನಲ್ಲಿ ಬದಲಾಯಿಸುವಂತಹ ಪ್ರಸ್ತಾವನೆ ಇಟ್ಟಿದ್ದು ಆದರೆ ಅದು ಈಗ ರಿಜೆಕ್ಟ್ ಆಗಿದೆ.