ಭಾರತದ ರೈಲ್ವೆ ನೆಟ್ವರ್ಕ್ ಅನ್ನೋದು ಜಗತ್ತಿನ ಅತ್ಯಂತ ದೊಡ್ಡ ರೈಲ್ವೆ ನೆಟ್ವರ್ಕ್ ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ. ಪ್ರತಿದಿನ ಇಲ್ಲಿ ಲಕ್ಷಾಂತರ ಕೋಟ್ಯಂತರ ಪ್ರಯಾಣಿಕರು ರೈಲ್ವೆ ಪ್ರಯಾಣವನ್ನು ಅವಲಂಬಿಸಿರುತ್ತಾರೆ. ಅದರಲ್ಲೂ ವಿಶೇಷವಾಗಿ ಹೆಚ್ಚಾಗಿ ದೂರ ಪ್ರಯಾಣದಲ್ಲಿ ಪ್ರತಿಯೊಬ್ಬರು ರೈಲ್ವೆ ಪ್ರಯಾಣವನ್ನೇ ಆಯ್ಕೆ ಮಾಡುತ್ತಾರೆ. ಹೀಗಾಗಿ ರೈಲ್ವೆ ಇಲಾಖೆಯ ಕೆಲವೊಂದು ನಿಯಮಗಳ ಬಗ್ಗೆ ನೀವು ಮಾಹಿತಿಯನ್ನು ಹೊಂದಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಹೀಗಾಗಿ ಕೆಲವೊಂದು ವಿಚಾರಗಳನ್ನು ಇವತ್ತಿನ ಈ ಲೇಖನದ ಮೂಲಕ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.
ರೈಲ್ವೆ ಪ್ರಯಾಣದಲ್ಲಿ ಮಕ್ಕಳ ಟಿಕೆಟ್ ಬಗ್ಗೆ ಇಲ್ಲಿದೆ ನೋಡಿ ನಿಯಮ:
ಪ್ರಯಾಣಿಕರಿಗೆ ರೈಲ್ವೆ ಪ್ರಯಾಣ ಸುಗಮ ಆಗಲಿ ಎನ್ನುವ ಕಾರಣಕ್ಕಾಗಿ ರೈಲ್ವೆ ಇಲಾಖೆ ಪ್ರತಿಯೊಂದು ನಿಯಮಗಳನ್ನು ಕೂಡ ಸರಿಯಾದ ರೀತಿಯಲ್ಲಿ ಜಾರಿಗೆ ತರುವಂತ ಕೆಲಸವನ್ನು ಮಾಡಿದ್ದು ಚಿಕ್ಕ ಮಕ್ಕಳಿಗೂ ಕೂಡ ಯಾವ ವಯಸ್ಸಿನಲ್ಲಿ ಟಿಕೆಟ್ (Railway Ticket) ಪಡೆದುಕೊಳ್ಳಬೇಕು ಎನ್ನುವುದರ ಬಗ್ಗೆ ಕೂಡ ನಿಯಮಗಳನ್ನ ಜಾರಿಗೆ ತರಲಾಗಿದೆ. ನಾಲ್ಕು ವರ್ಷ ವಯಸ್ಸಿನವರೆಗೂ ಕೂಡ ಯಾವುದೇ ಮಕ್ಕಳಿಗೆ ಟಿಕೆಟ್ ಮಾಡಬೇಕಾದ ಅಗತ್ಯವಿಲ್ಲ ಎನ್ನುವುದಾಗಿ ರೈಲ್ವೆ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ.
ಐದರಿಂದ 12ನೇ ವಯಸ್ಸಿನ ಮಕ್ಕಳಿಗೆ ಟಿಕೆಟ್ ಮಾಡಬೇಕಾಗಿರುತ್ತದೆ ಒಂದು ವೇಳೆ ಅವರು ಸೀಟಿನಲ್ಲಿ ಕುಳಿತುಕೊಳ್ಳುವುದಾದರೆ ಮಾತ್ರ ಇಲ್ಲವಾದಲ್ಲಿ ಅವರಿಗೆ ಹಾಫ್ ಟಿಕೇಟ್ ಅನ್ನು ಕೂಡ ಮಾಡುವಂತಹ ಅವಕಾಶವನ್ನು ನಿಯಮಗಳಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಅವರಿಗೆ ಯಾವುದೇ ರೀತಿಯ ಸೀಟ್ ಟಿಕೆಟ್ ಬುಕ್ ಮಾಡುವುದಾದರೆ ಪೂರ್ಣ ಪ್ರಮಾಣದಲ್ಲಿ ನೀವು ಹಣವನ್ನು ಪಾವತಿ ಮಾಡಿ ಟಿಕೆಟ್ ಖರೀದಿ ಮಾಡಬೇಕಾಗಿರುತ್ತದೆ. ಒಂದರಿಂದ ನಾಲ್ಕು ವರ್ಷಗಳ ವಯಸ್ಸಿನ ಮಕ್ಕಳ ಡೀಟೇಲ್ಸ್ ಅನ್ನು ನೀವು ಸರಿಯಾದ ರೀತಿಯಲ್ಲಿ ಪೂರ್ತಿ ಗೊಳಿಸಿದರೆ ಅವರಿಗೆ ಯಾವುದೇ ರೀತಿಯ ಟಿಕೆಟ್ ಬುಕ್ ಮಾಡಬೇಕಾದ ಅಗತ್ಯವಿಲ್ಲ.