ಇಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ಯಂತು ಅಧಿಕ ವಾಗಿದ್ದು ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ದಂಡವು ಬೀಳಲಿದೆ. ಹಾಗೆಯೇ ಇಂದು ವಾಹನಗಳಿಗೆ ಎಚ್ ಎಸ್ ಅರ್ ಪಿ ಅಳವಡಿಕೆ ಮಾಡುವುದು ಕೂಡ ಕಡ್ಡಾಯ ವಾಗಿದೆ. ಈಗಾಗಲೇ ಹೆಚ್ಚಿನ ವಾಹನ ಸವಾರರು ಅಳವಡಿಸಿದ್ದು ಇನ್ನು ಹೆಚ್ಚಿನ ವಾಹನ ಮಾಲೀಕರು HSRP ಅಳವಡಿಕೆ ಮಾಡಲು ಬಾಕಿ ಇರಲಿದೆ.
ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಅನ್ವಯವಾಗಲಿದ್ದು ವಾಹನಗಳ ಸುರಕ್ಷತೆ ದೃಷ್ಟಿಯಿಂದ ಮತ್ತು ಅಪರಾಧ ತಡೆಗೆ ಈ ನಿಯಮ ಜಾರಿಗೆ ತಂದಿದ್ದು 2019 ಮೊದಲು ಖರೀದಿ ಮಾಡಿದ ವಾಹನಗಳಿಗೆ ಎಚ್ ಎಸ್ ಅರ್ ಪಿ ಕಡ್ಡಾಯ ವಾಗಿದೆ. ಈಗಾಗಲೇ ಹಲವು ಭಾರಿ ದಿನಾಂಕ ವಿಸ್ತರಣೆ ಮಾಡಿರುವ ಸರ್ಕಾರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಕಡ್ಡಾಯ ಮಾಡಿದೆ.
ಈಗಾಗಲೇ ವಾಹನಗಳಿಗೆ HSRP ಅಳವಡಿಸುವುದಕ್ಕೆ ಸೆ. 15 ಕೊನೆಯ ದಿನಾಂಕವಗಿದ್ದು ಆದರೆ ಇದೀಗ ಸೆ 18 ರ ವರೆಗೆ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ವಿವಿಧ ಮೂಲಗಳಿಂದ ಕೇಳಿ ಬರ್ತಾ ಇದೆ. ಯಾಕಂದ್ರೆ ನಂಬರ್ ಪ್ಲೇಟ್ ಅಳವಡಿಕೆ ಕುರಿತಾಗಿ ಇರುವ ಅರ್ಜಿ ವಿಚಾರಣೆ ಹೈ ಕೋರ್ಟ್‌ನಲ್ಲಿ ಸೆ.18ಕ್ಕೆ ನಡೆಯಲಿದ್ದು ಹೀಗಾಗಿ ದಂಡ ವಿಧಿಸುವ ಬಗ್ಗೆ ಸಾರಿಗೆ ಇಲಾಖೆ ಇನ್ನು ತೀರ್ಮಾನ ಮಾಡಿಲ್ಲ. ಹಾಗಾಗಿ ಈ ತೀರ್ಪು ಆದ ಬಳಿಕ ದಂಡ ವಿಧಿಸಲಿದೆ.
ಈ ತೀರ್ಪು ಬಳಿಕ ಹೊಸ ನಾಮ ಫಲಕ ಇಲ್ಲದ ವಾಹನಗಳಿಗೆ ಮೊದಲ ಬಾರಿಗೆ 500 ರೂ ದಂಡ ವಿಧಿಸಲಾಗುವುದು. ನಂತರದಲ್ಲಿ ಪ್ರತಿ ಬಾರಿಯೂ 1000 ರೂಪಾಯಿ ದಂಡ ವಿಧಿಸಬೇಕಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 2019ರ ಏಪ್ರಿಲ್ 1ಕ್ಕೂ ಮೊದಲು ನೋಂದಣಿಯಾಗಿರುವ 2 ಕೋಟಿ ವಾಹನಗಳಲ್ಲಿ ಕೇವಲ 53 ಲಕ್ಷ ವಾಹನಗಳು ಮಾತ್ರ ಈ ಕೆಲಸ ಮಾಡಿದ್ದು ಇನ್ನೂ 1.48 ಕೋಟಿ ವಾಹನಗಳು ಎಚ್ ಎಸ್ ಆರ್ ಪಿ ಫಲಕವನ್ನು ಅಳವಡಿಸಿಕೊಳ್ಳಲು ಬಾಕಿ ಇರಲಿದೆ. ವಾಹನ ಸವಾರರು HSRP Number Plate ಪಡೆಯಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೂಡ ಅವಕಾಶ ಇರಲಿದೆ.