ಇಂದು ಚಿನ್ನ ಬೆಳ್ಳಿಅತೀ ಅಮೂಲ್ಯ ವಾದ ವಸ್ತುವಾಗಿದೆ. ಅದರಲ್ಲೂ ಮದುವೆ ಶುಭ ಸಮಾರಂಭ, ಪೂಜೆ ಪುನಸ್ಕಾರ ಇತ್ಯಾದಿಗಳಿಗೆ ಚಿನ್ನ ಬೆಳ್ಳಿ ಅತೀ ಅಗತ್ಯ ಇರಲಿದೆ. ಜನರು ಚಿನ್ನ ಬೆಳ್ಳಿ ತೊಡುವ ಉದ್ದೇಶ ಮಾತ್ರವಲ್ಲದೆ ಹೂಡಿಕೆಯ ಭಾಗವಾಗಿಯು ಖರೀದಿ ಮಾಡುತ್ತಾರೆ. ಆದರೆ ಚಿನ್ನ ಬೆಳ್ಳಿ ದರ ಏರಿಳಿತ ಆಗುತ್ತಲೇ ಇದ್ದು ಇಂದು ಚಿನ್ನ ಬೆಳ್ಳಿ ದರ (Gold–Silver Rate) ಡಬಲ್ ಏರಿಕೆ ಯಾಗಿದೆ.
ಚಿನ್ನ ದರ:
ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ ಚಿನ್ನದ ದರವು 68,800 ರೂ ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಇದರ ಬೆಲೆಯೂ 68,800, ರೂ. 68,800, ರೂ. 68,800 ಆಗಿದೆ. ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (Gold Rate) 10 ಗ್ರಾಂ 68,950 ರೂಪಾಯಿ ತಲುಪಿದೆ. 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂ 75,150 ರೂಪಾಯಿ ಕಂಡು ಬಂದಿದೆ.
ಚಿನ್ನದ ದರ ಇಷ್ಟು ತಲುಪಿದೆ:
ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ (Gold Rate) ವು 150 ರೂ ಹೆಚ್ಚಾಗಿದೆ. ಅಂದರೆ ಇಂದಿನ ದರ 68,800 ರೂ ಆಗಿದೆ. 100 ಗ್ರಾಂ 22 ಕ್ಯಾರೆಟ್ ಹಳದಿ ಲೋಹದ ಬೆಲೆ ಇಂದು ರೂ 1500 ರಷ್ಟು ಏರಿಕೆಯಾಗಿ 6,88,000 ಮೊತ್ತ ಆಗಿದೆ. ಇನ್ನು 100 ಗ್ರಾಂ 18 ಕ್ಯಾರೆಟ್ ಚಿನ್ನದ ಬೆಲೆ ಇಂದು 1200 ರೂ. ಏರಿಕೆ ಕಂಡು 5,62,900 ರೂ. ಆಗಿದೆ.
ಬೆಳ್ಳಿ ದರ?
ಇಂದು ಬೆಳ್ಳಿ ದರ (Silver Rate) ವಂತು ಡಬಲ್ ಆಗಿದ್ದು ಹದಿನೈದು ದಿನಗಳ ಹಿಂದೆ 70 ಸಾವಿರದಲ್ಲಿದ್ದ ಒಂದು ಕೆಜಿ ಬೆಳ್ಳಿ ದರವು ಇದೀಗ 90 ಸಾವಿರಕ್ಕಿಂತ ಹೆಚ್ಚಾಗಿದೆ. ಇಂದು ಕೆಜಿ ಬೆಳ್ಳಿ ದರ ರೂ. 93,000 ಆಗಿದೆ. ಬೆಂಗಳೂರು ನಗರದಲ್ಲಿ ಇಂದು ಪ್ರತಿ 10gm, 100gm, 1000gm ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 930, ರೂ. 9,300 ಹಾಗೂ ರೂ. 93,000 ಆಗಿದೆ.ಹಾಗಾಗಿ ಬೆಳ್ಳಿ ಖರೀದಿ ದಾರರಿಗೂ ಈ ಸುದ್ದಿ ಶಾಕ್ ನೀಡಿದೆ. ಇನ್ಮುಂದೆ ಬೆಳ್ಳಿ ದರವೂ ಮತ್ತಷ್ಟು ದುಬಾರಿ ಎನಿಸಲಿದೆ.
ಇತರ ಕಡೆ ಬೆಳ್ಳಿ ದರ:
ಚೆನ್ನೈನಲ್ಲಿ ಇಂದು ಒಂದು ಕೆಜಿ ಬೆಳ್ಳಿ ದರ ರೂ. 98,000 ಆಗಿದು ದೆಹಲಿಯಲ್ಲಿ ರೂ. 93,000, ಮುಂಬೈನಲ್ಲಿ ರೂ. 93,000 ಹಾಗೂ ಕೊಲ್ಕತ್ತದಲ್ಲೂ ರೂ. 93,000 ಮೊತ್ತ ಆಗಿದ್ದು ಇದಕ್ಕಿಂತಲೂ ಮುಂದೆ ಏರಿಕೆಯಾಗಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.