ಚಿನ್ನ ಅತೀ ಅಮೂಲ್ಯ ವಾದ ವಸ್ತುವಾಗಿದ್ದು ಇದರ ಬೇಡಿಕೆ ಮಾತ್ರ ಹೆಚ್ಚಾಗುತ್ತಲೇ ಇದೆ. ಅದರ ಜೊತೆ ಬೆಲೆಯು ಕೂಡ ಏರಿಳಿತ ಕಂಡು ಬರ್ತಾ ಇದೆ. ಇನ್ನೇನು ಮದುವೆ ಶುಭ ಸಮಾರಂಭಗಳು ಇರುವುದರಿಂದ ಚಿನ್ನದ ಬೆಲೆ (Gold Rate) ಇದೀಗ ಧಿಡೀರ್ ಏರಿಕೆ ಯಾಗಿದ್ದು ಚಿನ್ನ ಪ್ರಿಯರಿಗೆ ಇದೀಗ ನಿರಾಸೆ ಮೂಡಿದೆ.
ಇಂದು ಚಿನ್ನದ ಬೆಲೆಯು ಗ್ರಾಮ್ಗೆ 30 ರೂನಷ್ಟು ಏರಿಕೆ ಕಂಡು ಬಂದಿದ್ದು ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ (Gold Rate) 68,650 ರುಪಾಯಿ ಆಗಿದ್ದು ಇಂದು 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 74,890 ರುಪಾಯಿ ಆಗಿದೆ.ಇಂದು 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯು ಕೂಡ ಪ್ರತಿ 10 ಗ್ರಾಂಗೆ 440 ರೂ. ಏರಿಕೆಯಾಗಿದ್ದು ಇಂದು ದೆಹಲಿಯಲ್ಲಿ 22ಕ್ಯಾರೆಟ್ ಚಿನ್ನದ ಬೆಲೆ 400 ರೂ. ಏರಿಕೆಯಾಗಿದ್ದು ಅಂದರೆ 68,800 ರೂ. ಇದೆ. 24 ಕ್ಯಾರೆಟ್ ಚಿನ್ನದ ದರ ಪ್ರತಿ 10 ಗ್ರಾಂಗೆ 440 ರೂ. ಏರಿಕೆಯಾಗಿದೆ.
ಇತರ ಕಡೆ ಎಷ್ಟು ಇದೆ?
ಇಂದು 22 ಕ್ಯಾರಟ್ ಚಿನ್ನದ ಬೆಲೆ (Gold Rate) ಯು ಬೆಂಗಳೂರಿನಲ್ಲಿ 68,650 ರೂ ಆಗಿದ್ದು ಚೆನ್ನೈ ನಲ್ಲಿ 68,650 ಹಾಗೂ ಮುಂಬೈ ನಲ್ಲಿ 68,650 ರೂ,ದೆಹಲಿಯಲ್ಲಿ 68,800 ರೂ ಹಾಗೂ ಕೋಲ್ಕತಾ ದಲ್ಲಿ 68,650 ರೂ ಆಗಿದೆ. ದೇಶೀಯ ಮಾರುಕಟ್ಟೆಯಲ್ಲಿಯು ಚಿನ್ನದ ಬೆಲೆ ಮತ್ತೆ ಭಾರೀ ಏರಿಕೆ ಆಗಿದ್ದು ಗ್ರಾಹಕರಿಗೆ ನಿರಾಸೆ ಆಗಿದೆ.
ಬೆಳ್ಳಿದರ:
ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಸಹ ದುಬಾರಿ ಆಗ್ತಾ ಇದ್ದು ಬೆಳ್ಳಿಯು ಅತೀ ಅಗತ್ಯ ವಾದ ವಸ್ತು ಎನಿಸಿದೆ. ಹಾಗಾಗಿ ಇದರ ಖರೀದಿ ಗೂ ಹೆಚ್ಚಿನ ಜನರು ಆಸಕ್ತಿ ವಹಿಸುತ್ತಾರೆ. ಬೆಳ್ಳಿ ಬೆಲೆ (Silver Price) ಪ್ರತಿ ಕೆಜಿಗೆ 3500 ರೂ. ಏರಿಕೆಯಾಗಿದ್ದು. ಬೆಳ್ಳಿ ಬೆಲೆ ಒಟ್ಟು 5500 ರೂ. ಏರಿಕೆ ಆಗಿದೆ. ಪ್ರಸ್ತುತ ಬೆಂಗಳೂರಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 97,000 ರೂ. ಆಗಿದೆ.
ಯುಎಸ್ ಫೆಡ್ ಬಡ್ಡಿ ದರ ಕಡಿತದ ಸಾಧ್ಯತೆ ಇರುವುದರಿಂದ ಯುಎಸ್ ಡಾಲರ್ ಮೇಲೆ ಒತ್ತಡಕ್ಕೆ ಕಾರಣ ವಾಗಿದ್ದು, ಚಿನ್ನದ ಬೆಲೆ ಏರಿಕೆ ಕಂಡು ಬಂದಿದೆ ಎನ್ನಲಾಗಿದೆ.ಇನ್ನು ಜಾಗತಿಕ ಮಾರುಕಟ್ಟೆಯಲ್ಲಿ ಆದ ಬದಲಾ ವಣೆಯೇ ಚಿನ್ನದ ಬೆಲೆಯಲ್ಲಿ ಬದಲಾವಣೆ ಕಂಡು ಬರಲಿದ್ದು ಏರಿಕೆ ಇಳಿಕೆ ಆಗುತ್ತಲೇ ಇರುತ್ತದೆ