ಸದ್ಯಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಏರ್ಟೆಲ್ ಹಾಗೂ ಜಿಯೋ ಸಂಸ್ಥೆಗಳು ತಮ್ಮ ರಿಚಾರ್ಜ್ ಬೆಲೆಯನ್ನು ಹೆಚ್ಚು ಮಾಡಿರುವ ಕಾರಣದಿಂದಾಗಿ BSNL 4ಜಿ ಗೆ ಬಹುತೇಕ ಎಲ್ಲಾ ಗ್ರಾಹಕರು ಕೂಡ ಪೋರ್ಟ್ ಮಾಡಿಕೊಂಡಿದ್ದಾರೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು BSNL ಸಂಸ್ಥೆ ಲೇಟೆಸ್ಟ್ ಆಗಿ ಲಾಂಚ್ ಮಾಡಿರುವಂತಹ 82 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ.
BSNL ಲಾಂಚ್ ಮಾಡಿದೆ ಹೊಸ ರಿಚಾರ್ಜ್ ಪ್ಲಾನ್:
82 ದಿನದ ವ್ಯಾಲಿಡಿಟಿಯನ್ನು ಹೊಂದಿರುವಂತಹ ಈ ರಿಚಾರ್ಜ್ ಪ್ಲಾನಿನ ಬೆಲೆ 485 ರೂಪಾಯಿ ಆಗಿದೆ. 82 ದಿನಗಳ ವ್ಯಾಲಿಡಿಟಿಯನ್ನು ಲೆಕ್ಕಾಚಾರ ಮಾಡಿದ್ರೆ ದಿನಕ್ಕೆ ಕೇವಲ 5.91 ರೂಪಾಯಿ ಮೌಲ್ಯದ ರಿಚಾರ್ಜ್ ಪ್ಲಾನ್ ಆಗಿದೆ ಅಂದ್ರೆ ಚಾಕ್ಲೇಟ್ ಗಿಂತ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್.
82 ದಿನಗಳ ವರೆಗೆ ನಿಮಗೆ 100 Free SMS ಅನ್ನು ಪ್ರತಿದಿನ ನೀಡಲಾಗುತ್ತದೆ. ಯಾವ ನೆಟ್ವರ್ಕ್ ಗೆ ಬೇಕಾದ್ರೂ ಕೂಡ ಉಚಿತವಾಗಿ ಅನಿಯಮಿತ ಕರೆಗಳನ್ನು ನೀವು ಮಾಡಬಹುದಾಗಿದೆ. ಇನ್ನು ಇಂಟರ್ನೆಟ್ ಪ್ರಿಯರಿಗೂ ಕೂಡ ಈ ರಿಚಾರ್ಜ್ ಪ್ಲಾನ್ ನಲ್ಲಿ ಉತ್ತಮ ರೀತಿಯ ಅವಕಾಶ ಇದೆ.
ಪ್ರತಿದಿನ 1.5 ಜಿಬಿ ಇಂಟರ್ನೆಟ್ ಡೇಟಾ ಅನ್ನು ನೀವು ಈ ರಿಚಾರ್ಜ್ ಪ್ಲಾನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಗ್ರಾಹಕರಿಗೆ ನೀಡುವುದಕ್ಕೆ BSNL ಸಂಸ್ಥೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬೇರೆ ಎಲ್ಲಾ ಟೆಲಿಕಾಂ ಕಂಪನಿಗಳಿಗಿಂತಲೂ ಕೂಡ ಬಂದಿದೆ.
ಆದರೆ ಮುಂದಿನ ದಿನಗಳಲ್ಲಿ ಬೇರೆ ಕಂಪನಿಗಳ ಜೊತೆಗೆ ಕಾಂಪೀಟ್ ಮಾಡುವುದಕ್ಕೆ 5G ಸರ್ವಿಸ್ ಅನ್ನು ಜಾರಿಗೆ ತರಬೇಕಾಗಿರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ. ಇದೇ ಕಾರಣಕ್ಕಾಗಿ BSNL ಸಂಸ್ಥೆ 5ಜಿ ನೆಟ್ವರ್ಕ್ ಗಳನ್ನು ಕೂಡ ಭವಿಷ್ಯದಲ್ಲಿ ಗ್ರಾಹಕರಿಗೆ ನೀಡಬೇಕು ಎನ್ನುವ ಕಾರಣಕ್ಕಾಗಿ ತಯಾರಿಯನ್ನು ಈಗಾಗಲೇ ಆರಂಭಿಸಿದೆ.