BSNL 4G ಸದ್ಯದ ಮಟ್ಟಿಗೆ ಭಾರತದ ಟೆಲಿಕಾಂ ಇಂಡಸ್ಟ್ರಿಯಲ್ಲಿ ಕ್ರಾಂತಿಯನ್ನು ಸೃಷ್ಟಿಸಿರುವಂತಹ ನೆಟ್ವರ್ಕ್ ಆಗಿದೆ. ಏರ್ಟೆಲ್ ಹಾಗೂ ಜಿಯೋ ಸಂಸ್ಥೆಗಳು ತಮ್ಮ ರಿಚಾರ್ಜ್ ಬೆಲೆಯನ್ನು ಹೆಚ್ಚು ಮಾಡಿರುವ ಬೆನ್ನಲ್ಲೆ BSNL 4G ಬೇಡಿಕೆ ಕೂಡ ಮಾರುಕಟ್ಟೆಯಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ.
ಸದ್ಯದ ಮಟ್ಟಿಗೆ ಟೆಲಿಕಾಂ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ರಿಚಾರ್ಜ್ ಸೇವೆಗಳನ್ನು ನೀಡುತ್ತಿರುವಂತಹ ಸಂಸ್ಥೆ ಎಂದರೆ ಅದು BSNL ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳ ಗ್ರಾಹಕರು ಕೂಡ ಬಿಎಸ್ಎನ್ಎಲ್ ಗೆ ಪೋರ್ಟ್ ಆಗುತ್ತಿದ್ದಾರೆ. ಒಂದು ವೇಳೆ ನೀವು ಇನ್ನು ಮುಂದೆ BSNL ಗ್ರಾಹಕರಾಗುವುದಿದ್ದರೆ ಅಥವಾ ಈಗಾಗಲೇ ಆಗಿದ್ರೆ ಖಂಡಿತವಾಗಿ ಈ ಲೇಖನ ಅನ್ನೋದು ನಿಮಗೆ ಸಾಕಷ್ಟು ಲಾಭದಾಯಕವಾಗಿ ಸಾಬೀತಾಗಲಿದೆ.
- BSNL ಸಿಮ್ ಖರೀದಿ ಮಾಡುವುದಕ್ಕಿಂತ ಮುಂಚೆ ನಿಮ್ಮ ಪ್ರದೇಶದಲ್ಲಿ ನೆಟ್ವರ್ಕ್ ಹೇಗಿದೆ ಅನ್ನೋದನ್ನ ಚೆಕ್ ಮಾಡಿಕೊಳ್ಳುವುದು ಪ್ರಮುಖವಾಗಿರುತ್ತದೆ ಅನ್ನೋದು ನೆನಪಿರಲಿ.
- OpenSignal ಅಪ್ಲಿಕೇಶನ್ ಅನ್ನು ನೀವು ಇದಕ್ಕಿಂತ ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ.
- ಇನ್ಸ್ಟಾಲ್ ಮಾಡಿದ ನಂತರ ಮೊದಲಿಗೆ ನೀವು ಇದನ್ನು ಓಪನ್ ಮಾಡಿ ನಿಮ್ಮ ನೆಟ್ವರ್ಕ್ ಅನ್ನು ಸೆಲೆಕ್ಟ್ ಮಾಡಬೇಕಾಗಿರುತ್ತದೆ.
- BSNL 4G ನೆಟ್ವರ್ಕ್ ಇದ್ರೆ ಗ್ರೀನ್ ಸಿಗ್ನಲ್ ಬರುತ್ತದೆ ಹಾಗೂ ಟವರ್ ನ ಸಿಂಬಲ್ ಕೂಡ ಕಾಣಿಸಿಕೊಳ್ಳುತ್ತದೆ. ಈ ಅಪ್ಲಿಕೇಶನ್ ಮೂಲಕವೇ ನಿಮ್ಮ ನೆಟ್ವರ್ಕ್ ಸ್ಟ್ರೆಂಗ್ತ್ ಅನ್ನು ನೀವು ಕಾಣಬಹುದಾಗಿದೆ.
- ಈ ಮೂಲಕ ಬಿಎಸ್ಎನ್ಎಲ್ ಗ್ರಾಹಕರು ತಮ್ಮ ಏರಿಯಾದಲ್ಲಿ ಸ್ಪೀಡ್ ನೆಟ್ವರ್ಕ್ ಇದಿಯೋ ಇಲ್ವೋ ಅನ್ನೋದನ್ನ ಮೊದಲೇ ಚೆಕ್ ಮಾಡಿಕೊಳ್ಳಬಹುದು.