Ration Card: ಹೊಸ APL-BPL ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ ನಲ್ಲೇ ಅವಕಾಶ

Join WhatsApp

ಇಂದು ರೇಷನ್ ಕಾರ್ಡ್ (Ration Card) ಎಂಬುದು ಬಹಳ ಅಗತ್ಯವಾಗಿ ಬೇಕು. ಸರಕಾರದ ಯಾವುದೇ ಸೌಲಭ್ಯ ಸಿಗಬೇಕಾದ್ರೂ ಈ ಕಾರ್ಡ್ ಇದೆಯಾ ಎಂದು ಕೇಳುತ್ತಾರೆ. ಹಾಗೆಯೇ ಕಾಂಗ್ರೆಸ್ ಸರಕಾರ ನೀಡುವ ಗ್ಯಾರಂಟಿ ಯೋಜನೆಗಳ ಸೌಲಭ್ಯ ಗೃಹಲಕ್ಷ್ಮಿ (Gruha Lakshmi), ಅನ್ನಭಾಗ್ಯ, (Anna Bhagya) ಯುವನಿಧಿ (Yuva Nidhi) ಇತ್ಯಾದಿ ಈ ಯೋಜನೆಗಳಿಗೂ ರೇಷನ್ ಕಾರ್ಡ್ (Ration Card) ಅಗತ್ಯವಾಗಿದೆ. ಹೆಚ್ಚಿನ ಜನರ ಬಳಿ ಈ ರೇಷನ್ ಕಾರ್ಡ್ ಇಲ್ಲದೆ ಈ ಸೌಲಭ್ಯ ಗಳಿಂದ ವಂಚಿತ ರಾದವರು ಇದ್ದಾರೆ. ಹಾಗಾಗಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಹಾಕಲು ಹೆಚ್ಚಿನ ಜನರು ಕಾಯ್ತಾ ಇದ್ದಾರೆ.

ಇದೀಗ ಹೊಸ ಕಾರ್ಡ್ ಗೆ ಅರ್ಜಿ ಹಾಕಲು ಸರಕಾರ ಗುಡ್ ನ್ಯೂಸ್ ಮಾಹಿತಿ ಯೊಂದನ್ನು ನೀಡಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ. ಈಗಾಗಲೇ ಅನರ್ಹ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಆಹಾರ ಇಲಾಖೆ ಮುಂದಾಗಿದ್ದು ಅರ್ಹರಿಗೆ ಮಾತ್ರ ಬಿಪಿಎಲ್ ‌ಕಾರ್ಡ್ (BPL Card) ಒದಗಿಸಲು ಮುಂದಾಗಿದೆ. ಅಕ್ರಮವಾಗಿ ಪಡಿತರ ಸೌಲಭ್ಯ ಪಡೆಯುತ್ತಿದ್ದವರ ಕಾರ್ಡ್ ರದ್ದು ಮಾಡಲಿದೆ. ಅಂದರೆ ಅನರ್ಹರಾಗಿದ್ದರೂ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿದ್ದರೆ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ.

 

Image Credit: Star of Mysore

ಮತ್ತೆ ಅವಕಾಶ?

ಹಾಗೆಯೇ ಅನರ್ಹ ಕಾರ್ಡ್ ಅನ್ನು ರದ್ದು ಮಾಡಿ ಹೊಸ ರೇಷನ್ ಕಾರ್ಡ್ (Ration Card) ವಿತರಣೆ ಮಾಡುವ ಬಗ್ಗೆ ಸಚಿವರು ಗುಡ್ ನ್ಯೂಸ್ ನೀಡಿದ್ದು ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ್ದ ದಾಖಲೆಗಳನ್ನು ಪರಿಶೀಲನೆ ಮಾಡಿ ಹೊಸ ರೇಷನ್ ಕಾರ್ಡ್ ಗಳ ವಿತರಣೆಯನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಮಾಡಲಾಗುತ್ತದೆ. ಆ ಕಾರ್ಡ್ ಗಳ ಅರ್ಜಿಯನ್ನು ವಿತರಣೆಯಾದ ನಂತರ ಹೊಸ ರೇಷನ್ ಕಾರ್ಡ್ (Ration Card) ಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗುವುದು.‌ ಅಂದರೆ ಸೆಪ್ಟೆಂಬರ್ 15 ರಿಂದ 30ನೇ ತಾರೀಕಿನೊಳಗೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ದಾಖಲೆ ಬೇಕು:

 

Image Credit: informalnewz
  • ಗುರುತೀನ ಚೀಟಿ
  • ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಡ್ರೈವಿಂಗ್ ಲೈಸೆನ್ಸ್
  • ಪೋಟೋ
  • ಮೊಬೈಲ್ ಸಂಖ್ಯೆ

ಅರ್ಜಿ ಹಾಕಲು ವ್ಯಕ್ತಿಯು ‌ ಕರ್ನಾಟಕದ ಖಾಯಂ ನಿವಾಸಿಯಾಗಬೇಕಿದ್ದು, ಕರ್ನಾಟಕದಲ್ಲಿ ವಾಸಿಸುತ್ತಿದ್ದರೆ ಮಾತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಲು ಅವಕಾಶ ಇರಲಿದೆ. ಅದೇ ರೀತಿ‌ ಪಡಿತರ ಚೀಟಿ ಹೊಂದಿಲ್ಲದವರು, ಹೊಸದಾಗಿ ವಿವಾಹವಾದ ದಂಪತಿ, ಹೊಸ ಮನೆ ಮಾಡಿದವರು ಅರ್ಜಿ ಸಲ್ಲಿಸಲು ಅವಕಾಶ ಇದೆ.

ಅರ್ಜಿ ಸಲ್ಲಿಕೆ ಮಾಡಲು ​ ಆಹಾರ ಇಲಾಖೆಯ ಈ ಲಿಂಕ್ ahara.kar.nic.in ಇಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಇರಲಿದೆ

Leave a Comment

Your email address will not be published. Required fields are marked *

Scroll to Top