ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬ ವ್ಯಕ್ತಿ ಗೂ ಬಹಳ ಮುಖ್ಯವಾಗಲಿದೆ. ಅದರಲ್ಲೂ ಇಂದು ಎಷ್ಟೇ ಶಿಕ್ಷಣ ವಂತರು ಆಗಿದ್ದರೂ ಉದ್ಯೋಗ ಸಿಗುವುದು ಕಷ್ಟವೇ ಆಗಿದೆ. ಹಾಗಾಗಿ ಸರಕಾರ ಕೂಡ ಸ್ವ ಉದ್ಯಮಕ್ಕೆ ಪ್ರೋತ್ಸಾಹ ನೀಡ್ತಾ ಇದೆ. ಅದರ ಜೊತೆಗೆ ವಿವಿಧ ತರಬೇತಿ ಗಳನ್ನು ಆಯೋಜನೆ ಮಾಡುವ ಮೂಲಕ ಉದ್ಯೋಗ (Job) ಪಡೆಯಲು ಹೆಚ್ಚು ಪ್ರೋತ್ಸಾಹ ವನ್ನು ನೀಡ್ತಾ ಇದೆ.
ಉದ್ಯೋಗ ಮೇಳ:
ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳವನ್ನು ಆಯೋಜನೆ ಮಾಡುವ ಮೂಲಕ ಉದ್ಯೋಗ ಪಡೆಯಲು ಸರಕಾರ ಬೆಂಬಲಿಸುತ್ತಿದೆ. ಹಾಗೆಯೇ ರಾಜ್ಯ ಸರ್ಕಾರ ಯುವಕರ ಉನ್ನತಿಗಾಗಿ ಉದಮ್ಯ ಕೈಗೊಳ್ಳಲು 100 ಕೋಟಿ ರೂ. ಅನುದಾನವನ್ನು ಮೀಸಲು ಇಟ್ಟಿದೆ.
ಪ್ರತಿ ಕುಟುಂಬಕ್ಕೂ ಉದ್ಯೋಗ:
ವಿವಿಧ ಜಿಲ್ಲೆಯಲ್ಲಿ ಕಾಲಕಾಲಕ್ಕೆ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳುವ ಮೂಲಕ 2025 ರ ಅಕ್ಟೋಬರ್02 ರೊಳಗೆ ಜಿಲ್ಲೆಯ ಪ್ರತಿಯೊಂದು ಕುಟುಂಬದ ಒಬ್ಬರಿಗೆ ಉದ್ಯೋಗ ಸಿಗುವಂತೆ ಮಾಡುವುದು ನನ್ನ ಮುಖ್ಯ ಗುರಿ ಯಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಸಚಿವರು ಕೆ.ಎಚ್ ಮುನಿಯಪ್ಪ (KH Muniyappa) ಅವರು ಹೇಳಿಕೆ ನೀಡಿದ್ದಾರೆ. ಅವರು ದೇವನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇಂದು ನಿರುದ್ಯೋಗ ಸಮಸ್ಯೆ ಹೆಚ್ಚಾಗ್ತ ಇದ್ದು ಈ ಸಮಸ್ಯೆ ನಿವಾರಣೆ ಮಾಡಲು ಉದ್ಯೋಗ ಮೇಳವನ್ನು ಹಮ್ಮಿಕೊಳ್ತಾ ಇದ್ದೇವೆ. ಈ ಉದ್ಯೋಗ ಮೇಳವು ಹೆಚ್ಚಿನ ವಿದ್ಯಾರ್ಥಿಗಳಿಗೆ ಭವಿಷ್ಯ ನಿರ್ಮಿಸಿ ಕೊಡ್ತಾ ಇದೆ. ಹಾಗಾಗಿ ಉದ್ಯೋಗ ಮೇಳ ಮೂಲಕ ಪ್ರತಿ ಕುಟುಂಬದ ಒಬ್ಬರಿಗೆ ಉದ್ಯೋಗ ಕಲ್ಪಿಸಿಕೊಡುವ ಗುರಿ ಇಟ್ಟುಕೊಂಡಿದ್ದು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಉದ್ಯೋಗ ಮೇಳ ಆಯೋಜಿಸಿ ಮನೆ ಮನೆಗೆ ಉದ್ಯೋಗ ಕಲ್ಪಿಸಿ ಕೊಡಲಾಗುವುದು ಎಂದು ಹೇಳಿದರು.
ಯುವಕ ಯುವತಿಯರಿಗೆ ಕೌಶಲ್ಯ ಆಧಾರಿತ ತರಬೇತಿ ನೀಡುವ ಮೂಲಕ ಕಂಪನಿಗಳು ಮಾಹಿತಿಯನ್ನು ಸಂಬಂಧಪಟ್ಟ ಜಿಲ್ಲಾಡಳಿತಕ್ಕೆ ನೀಡಿದರೆ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ಸಂಬಂಧಪಟ್ಟ ಇಲಾಖೆಯಿಂದ ಕೌಶಲ್ಯ ತರಬೇತಿ ಕಲ್ಪಿಸಿಕೊಡಲಾಗುತ್ತದೆ ಎಂದು ಯುವಕ ಯುವತಿಯರಿಗೆ ಗುಡ್ ನ್ಯೂಸ್ ನೀಡಿದ್ದಾರೆ.