ಇಂದು ಉದ್ಯೋಗ ಅನ್ನೋದು ಪ್ರತಿಯೊಬ್ಬ ವ್ಯಕ್ತಿಗೂ ಬಹಳ ಅಗತ್ಯವಾಗಿ ಬೇಕಿರಲಿದೆ. ಅದರಲ್ಲೂ ಸರಕಾರಿ ಉದ್ಯೋಗ (Govt Job) ಪಡೆಯಲು ಇಂದು ಹೆಚ್ಚಿನ ಜನರು ಕಾಯ್ತಾ ಇದ್ದಾರೆ. ಈ ಸರಕಾರಿ ಉದ್ಯೋಗವು ಅವರ ಆರ್ಹತೆ ಆಧಾರದ ಮೇಲೆ ಅಲ್ಲದೆ ಕೆಲವೊಮ್ಮೆ ಅನುಕಂಪದ ಆಧಾರದ ಮೇಲೆಯು ನೀಡಲಾಗುತ್ತದೆ. ಇದೀಗ ಅನುಕಂಪದ ಆಧಾರದ ಮೇಲೆ ನೀಡುವ ಉದ್ಯೋಗದ ಬಗ್ಗೆ ಕೋರ್ಟ್ ಮಹತ್ವದ ತಿರ್ಪು ನೀಡಿದೆ.
ಹೌದು ಅನುಕಂಪದ ಆಧಾರದ ಮೇಲೆ ನೀಡುವ ನೇಮಕಾತಿಯ ಮೇರೆಗೆ ಸೊಸೆಯನ್ನು ಕುಟುಂಬದ ಸದಸ್ಯರಾಗಿ ಪರಿಗಣಿಸಲು ಸಾಧ್ಯ ಇಲ್ಲ ಎಂದು ಇದೀಗ ಕರ್ನಾಟಕ ಹೈಕೋರ್ಟ್ (High Court) ಮಹತ್ವದ ತೀರ್ಪು ನೀಡಿದೆ.
ರಾಜ್ಯ ಸರ್ಕಾರದ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆಯಲ್ಲಿ ಉದ್ಯೋಗ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ಅತ್ತೆ ಮೃತಪಟ್ಟಿದ್ದ ಕಾರಣಕ್ಕೆ ತನಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಮೃತ ಉದ್ಯೋಗಿಯ ಸೊಸೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠವು ಸೊಸೆಯನ್ನು ಕುಟುಂಬದ ಸದಸ್ಯರಾಗಿ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.
ಸೊಸೆಯನ್ನು ಉಲ್ಲೇಖ ಮಾಡಿಲ್ಲ:
ಕುಟುಂಬದ ವ್ಯಾಖ್ಯಾನದಲ್ಲಿ ನಿರ್ದಿಷ್ಟ ಇದ್ದ ಸಂಬಂಧಿಗಳನ್ನು ಮಾತ್ರ ಸೇರ್ಪಡೆ ಮಾಡಲಾಗಿದ್ದು ಆದರೆ, ಸೊಸೆಯನ್ನು ಉಲ್ಲೇಖಿಸಿಲ್ಲ. ಹಾಗಾಗಿ, ಸೊಸೆಗೆ ಅನುಕಂಪದ ಆಧಾರದ ಮೇಲೆ ಹುದ್ದೆ ನೀಡಲು ಆಗದು ಎಂದು ಹೈಕೋರ್ಟ್ (High Court) ಆದೇಶಿಸಿದೆ.
ಈ ಪ್ರಕರಣ ಇರಲಿದೆ:
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಗೌರಮ್ಮ ಆರ್.ಹಲಮಣಿ ಎನ್ನುವವರು ಉದ್ಯೋಗ ದಲ್ಲಿದ್ದರು. ಕೊರೊನಾ ಸಂದರ್ಭದಲ್ಲಿ ಅವರು ಮೃತ್ತಪಟ್ಟಿದ್ದರು. ಮೃತರಿಗೆ ಇಬ್ಬರು ಮಕ್ಕಳಿದ್ದರು. ಅದರಲ್ಲಿ ಅವರ ಮಗ ಸಹ 2021ರ ಮೇ 2ರಂದೇ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದರು. ಇದರಿಂದ ಮೃತರ ಕಾನೂನುಬದ್ಧ ವಾರಸುದಾರರು ಸಿವಿಲ್ ಕೋರ್ಟ್‌ಗೆ 2022ರಲ್ಲಿ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿ ಸಂಬಂಧ ಮೃತರ ಕಾನೂನುಬದ್ಧ ವಾರಸುದಾರರ ಮಧ್ಯೆ ಒಪ್ಪಂದ ಉಂಟಾಗಿತ್ತು.ಹಾಗಾಗಿ ಸೊಸೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಕೋರಿ ಸರ್ಕಾರಕ್ಕೆ 2021ರ ಜೂನ್ 22ರಂದು ಅರ್ಜಿ ಸಲ್ಲಿಸಿದ್ದರು.