UPI: UPI ಮೂಲಕ ಪೇ ಮಾಡುವವರಿಗೆ ಗುಡ್ ನ್ಯೂಸ್

Join WhatsApp

ಇಂದು ಡಿಜಿಟಲ್ ಯುಗ ವಾಗಿರುವುದರಿಂದ ಹಣದ ವಹಿವಾಟುಗಳು (Money Transactions) ಕೂಡ ಡಿಜಿಟಲ್ ಮೂಲಕವೇ ನಡೆಯುತ್ತಿದೆ. ಬ್ಯಾಂಕ್ ಗೆ ತೆರಳಿ ಹಣ ಪಡೆಯುದು,ಹಣ ಜಮೆ ಮಾಡುವುದು ಇತ್ಯಾದಿ ಕಡಿಮೆ ಯಾಗಿದ್ದು ಅನ್ ಲೈನ್ ಮೂಲಕವೇ ಪಾವತಿ ಮಾಡುವ ಸಂಖ್ಯೆ ಹೆಚ್ಚಾಗಿದೆ. ಹಾಗೆಯೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಯುಪಿಐ ಲೈಟ್ (UPI Lite) ಫೀಚರ್ ಅನ್ನು ಜಾರಿ ಮಾಡಿದ್ದು ಗೊತ್ತೆ ಇದೆ. ಈ ಫೀಚರ್ ಮೂಲಕ ನಾವು ಯುಪಿಐ (UPI) ಆಪ್‌ನಲ್ಲಿ ಕನಿಷ್ಟ ಮೊತ್ತವನ್ನು ಯಾವುದೇ ಯುಪಿಐ ಪಿನ್ ಇಲ್ಲದೆಯೇ ವಹಿವಾಟು ನಡೆಸಲು ಸಾಧ್ಯತೆ ಇದೆ.

UPI ಲೈಟ್ ಸೇವೆಯು ಪ್ರಸ್ತುತ ಬಳಕೆದಾರರಿಗೆ ತಮ್ಮ ವ್ಯಾಲೆಟ್‌ನಲ್ಲಿ ರೂ 2,000 ವರೆಗೆ ಲೋಡ್ ಮಾಡಲು ಮತ್ತು 500 ವರೆಗೆ ಪಾವತಿ ಮಾಡಲು ಸಹಾಯ ಮಾಡಲಿದೆ. ಈ ಯುಪಿಐ ಲೈಟ್ (UPI Lite) ಒಂದು ರೀತಿಯಲ್ಲಿ ವ್ಯಾಲಟ್​ನಂತೆ ಕಾರ್ಯ ನಿರ್ವಹಿಸಲಿದ್ದು ಫೋನ್ ಪೇನಲ್ಲಿ ವ್ಯಾಲಟ್​ಗಳಿದ್ದು ಅಲ್ಲಿಗೆ ನೀವು ಎಷ್ಟು ಬೇಕಾದರೂ ಹಣ ಹಾಕಬಹುದು. ಯುಪಿಐ ಸ್ಕ್ಯಾನ್ ಮಾಡಿದಾಗ ಹಣದ ಪಾವತಿಗೆ ಇದೇ ವ್ಯಾಲಟ್ ಅನ್ನು ಬಳಸಬಹುದಾಗಿದೆ

ಇದೀಗ ಯುಪಿಐ ಲೈಟ್ ಬಳಕೆದಾರರಿಗೆ ಗುಡ್ ನ್ಯೂಸ್ ಮಾಹಿತಿ ಬಂದಿದ್ದು ನೀವು ಸಣ್ಣ ಮೊತ್ತದ ವಹಿವಾಟು ಗಳಿಗಾಗಿ UPI ಲೈಟ್ ಅನ್ನು ಬಳಸುತ್ತಿದ್ದರೆ ಬಳಕೆ ಮತ್ತಷ್ಟು ಸುಲಭ ವಾಗಲಿದೆ.ಹೌದು ಅಕ್ಟೋಬರ್ 31 ರಿಂದ, ನಿಮ್ಮ UPI ಲೈಟ್ ಖಾತೆಗೆ ನಿಮ್ಮ ಆಯ್ಕೆಯ ಮೊತ್ತವನ್ನು ಮರುಲೋಡ್ ಮಾಡಲು ಸ್ವಯಂ ಟಾಪ್ ಅಪ್ ಆಯ್ಕೆಯನ್ನು ನೀಡಲಿದೆ.

ಆಟೊ ಟಾಪ್ ಅಪ್ ಆಯ್ಕೆ:

 

Image Credit: Mindgate Solutions

ಅಂದರೆ ಆಟೊಮ್ಯಾಟಿಕ್ ಆಗಿ ಹಣ ವರ್ಗಾವಣೆ (Money Transactions) ಆಗಲಿದೆ. ಯುಪಿಐ ಲೈಟ್ (UPI Lite) ಅಕೌಂಟ್​ನಲ್ಲಿ 2,000 ರೂವರೆಗೆ ಹಣ ಹಾಕಬಹುದಾಗಿದ್ದು ಆಟೊ ಟಾಪ್ ಅಪ್ ಅವಕಾಶ ಇದ್ದರೆ ಯುಪಿಐ ಲೈಟ್ ಅಕೌಂಟ್​ನಲ್ಲಿ ಹಣ ಖಾಲಿಯಾದರೆ ಬ್ಯಾಂಕ್ ಅಕೌಂಟ್​ನಿಂದ ನೀವು ನಿರ್ದಿಷ್ಟಪಡಿಸಿದ ಮೊತ್ತದಷ್ಟು ಹಣ ವರ್ಗಾವಣೆ ಆಗುತ್ತದೆ. ಇದರಲ್ಲಿ 500 ರೂ ಒಳಗಿನ ಹಣ ಪಾವತಿಗೆ ಯುಪಿಐ ಲೈಟ್ ಬಳಸಬಹುದು. 2,000 ರೂ ಒಳಗಿನ ಹಣವನ್ನು ಆಟೊ ಟಾಪ್ ಅಪ್ ಆಗಿ ಮ್ಯಾಂಡೇಟ್ ಕೊಡಲು ಅವಕಾಶ ಇದೆ.

ಆಯ್ಕೆ ಸುಲಭ:

 

Image Credit: Business Today

ಇಂದು ಹೆಚ್ಚಿನ ಜನರು ಅನ್ ಲೈನ್ ಮೂಲಕ ವಹಿವಾಟು ನಡೆಸುತ್ತಾರೆ. ಈ ಸಂದರ್ಭದಲ್ಲಿ ಬ್ಯಾಂಕ್ ಸರ್ವರ್​ ಸಮಸ್ಯೆ ಬರಬಹುದು.‌ ಯುಪಿಐ ಲೈಟ್ ಫೀಚರ್​ನಲ್ಲಿ ಸಣ್ಣ ಮೌಲ್ಯದ ವಹಿವಾಟುಗಳನ್ನು ಯಾವುದೇ ಪಿನ್ ಹಾಕದೇ ನಡೆಸಬಹುದು. ಲೈಟ್ ಫೀಚರ್​ನಲ್ಲಿ ನೀವು ಯಾವುದೇ ಪ್ಲಾಟ್​ಫಾರ್ಮ್​ನ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಡೆಯಬಹುದು.

ಈ ಬದಲಾವಣೆ ಮಾಡಿದೆ:

  • ಬ್ಯಾಂಕ್‌ಗಳು UPI ಲೈಟ್‌ನಲ್ಲಿ ಸ್ವಯಂ ಟಾಪ್-ಅಪ್ ಆಪ್ಚನ್ ನೀಡಬೇಕು ಎಂದು NPCI ನಿರ್ದೇಶಿಸಿದೆ, ಇದರಲ್ಲಿ ಬ್ಯಾಂಕ್‌ ಗಳು UPI ಲೈಟ್ ರಚಿಸಲು ಮತ್ತು ಪಿಎಸ್‌ಪಿ ಅಪ್ಲಿಕೇಶನ್‌ನಿಂದ ವಿನಂತಿಯು ಬಂದಾಗ ಡೆಬಿಟ್ ಆಯ್ಕೆ ನೀಡಬೇಕು.
  • ‌ಆದರೆ ಪ್ರತಿ UPI ಲೈಟ್ ಖಾತೆಗೆ ಸ್ವಯಂ ವಹಿ ವಾಟುಗಳ ಸಂಖ್ಯೆ ಯು ಒಂದು ದಿನದಲ್ಲಿ ಐದಕ್ಕೆ ಸೀಮಿತವಾಗಿರುತ್ತದೆ.

Leave a Comment

Your email address will not be published. Required fields are marked *

Scroll to Top