BPL Card: BPL ಕಾರ್ಡ್ ಗೆ ಹೊಸ 6 ರೂಲ್ಸ್, ಇಂತಹವರು ಕೂಡಲೇ ಕಾರ್ಡ್ ಹಿಂತಿರುಗಿಸಿ

Join WhatsApp

ಇಂದು ಬಿಪಿಎಲ್ ಕಾರ್ಡ್ ಅನ್ನು‌ಸುಳ್ಳು ದಾಖಲೆಗಳನ್ನು‌ ನೀಡಿ ಮಾಡಿಸಿಕೊಂಡಿರುವ ಸಂಖ್ಯೆ ಬಹಳಷ್ಟು ಹೆಚ್ಚಾಗಿದೆ. ಸರಕಾರದ ವಿವಿಧ ಯೋಜನೆಗಳನ್ನು ಗ್ಯಾರಂಟಿ ಸೌಲಭ್ಯ ಗಳನ್ನು ಪಡೆದು ಕೊಳ್ಳಲು ಅನರ್ಹರು ಕೂಡ ಬಿಪಿಎಲ್ ರೇಷನ್ ಕಾರ್ಡ್ ಅನ್ನು ಮಾಡಿಸಿಕೊಂಡಿದ್ದು ಸರಕಾರಕ್ಕೆ ಇದೀಗ ಹೊರೆ ಯಾಗಿದೆ. ಬಿಪಿಎಲ್ ಕಾರ್ಡ್ (BPL Card) ಮೂಲಕ ದುಬಾರಿ ವೆಚ್ಚದ ಆರೋಗ್ಯ ಸೇವೆ, ಕೃಷಿ ಉದ್ದೇಶಿತ ಸೌಲಭ್ಯಗಳು, ನಾನಾ ಸರಕಾರಿ ಸೌಲಭ್ಯಗಳ ಬಳಕೆಗಾಗಿ ಬಿಪಿಎಲ್‌ ಕಾರ್ಡ್‌ಗಳು ಹೆಚ್ಚಾಗಿದೆ.

ಹಾಗಾಗಿ ವಿವಿಧ ಜಿಲ್ಲೆಗಳಲ್ಲಿ ಅನರ್ಹರು ಬಿಪಿಎಲ್ ರೇಷನ್ ಕಾರ್ಡ್ (BPL Card) ಮಾಡಿಸಿಕೊಂಡಿದ್ದರೆ ಅದನ್ನು ಹಿಂದಿರುಗಿಸಲು ವಿವಿಧ ಜಿಲ್ಲೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಸರ್ಕಾರ ನಿಗಧಿಪಡಿಸಿರುವ ಮಾನದಂಡಗಳಿಗೆ ವಿರುದ್ಧವಾಗಿ ಅಂತ್ಯೋದಯ ಕಾರ್ಡ್ (Antyodaya Card) ಬಿ.ಪಿ.ಎಲ್ ಕಾರ್ಡ್ ಮಾಡಿಸಿಕೊಂಡಿದ್ದರೆ ತಕ್ಷಣವೇ ತಾಲೂಕಿನ ತಹಶೀಲ್ದಾರ ಕಛೇರಿಗೆ ಪಡಿತರ ಚೀಟಿಯನ್ನು ಒಪ್ಪಿಸಿ ಎ.ಪಿ.ಎಲ್ ಪಡಿತರ ಚೀಟಿ (APL Ration Card) ಪಡೆಯಲು ಸೂಚನೆ ನೀಡಲಾಗಿದೆ.

 

Image Credit: Kannada News

ಉಡುಪಿ ಜಿಲ್ಲೆಯಲ್ಲೂ ಅನರ್ಹ ಬಿಪಿಎಲ್‌ ಕಾರ್ಡ್‌ಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭ ವಾಗಿದ್ದು ಸಾರ್ವಜನಿಕರು ಸ್ವಯಂ ಇಚ್ಚೆಯಿಂದ ಹಿಂತಿರಿಗಿಸಬಹುದು. ಬಿಪಿಎಲ್‌ ಕಾರ್ಡ್‌ ಅರ್ಹತೆಗಿಂತ ಅಧಿಕ ಆದಾಯ ಇದ್ದಲ್ಲಿ ಕಾರ್ಡ್‌ ವಾಪಸ್‌ ಸಲ್ಲಿಸಲು ಅವಕಾಶವಿದೆ. ಸರಕಾರಿ ಅಧಿಕಾರಿ, ನೌಕರರು ದಂಡ ಪಾವತಿಸಬೇಕಾಗುತ್ತದೆ. ಎಂದು ಜಿಲ್ಲಾಧಿಕಾರಿ ಡಾ, ವಿದ್ಯಾಕುಮಾರಿ ತಿಳಿಸಿದ್ದಾರೆ.

ಈ ಕಾರ್ಡ್ ರದ್ದು:

ಜಿಲ್ಲೆಯಲ್ಲಿ ಈಗಾಗಲೇ ಆರು ತಿಂಗಳಿಂದ ಆಹಾರ ಪದಾರ್ಥವನ್ನು ಪಡೆಯದಿರುವ ಪಡಿತರ ಚೀಟಿಗಳನ್ನು ಅಮಾನತುಗೊಳಿಸಲಾಗಿದ್ದು, ಸರ್ಕಾರಿ ನೌಕರರು ಹೊಂದಿರುವ ಬಿಪಿಎಲ್‌ ಕಾರ್ಡ್‌ಗಳ (BPL Card) ಪಡಿತರ ಚೀಟಿಗಳನ್ನು ಈಗಾಗಲೇ ರದ್ದುಪಡಿಸಲಾಗಿದೆ. ಹಾಗೆಯೇ ಅಕ್ರಮವಾಗಿ ಪಡಿತರ ಸೌಲಭ್ಯ ಪಡೆಯುತ್ತಿದ್ದವರಿಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸರಕಾರ ಇದೀಗ ಮುಂದಾಗಿದೆ. ಹೆಚ್ಚಿನ ಆದಾಯ ಹೊಂದಿದಿದ್ದರು ಅನರ್ಹರಾಗಿದ್ದರೂ ಬಿಪಿಎಲ್‌ ಕಾರ್ಡ್‌ಗಳನ್ನು ಹೊಂದಿರುವವರನ್ನು ಜಿಲ್ಲಾದ್ಯಂತ ಪತ್ತೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇವರು ಬಿಪಿಎಲ್ ಕಾರ್ಡ್ ಪಡೆಯುವಂತಿಲ್ಲ:

 

Image Credit: DNA India
  • ಕುಟುಂಬದ ವಾರ್ಷಿಕ ಆದಾಯ 1.20 ಲಕ್ಷಕ್ಕಿಂತಲೂ ಹೆಚ್ಚಿದ್ದರೆ ಬಿಪಿಎಲ್ ಕಾರ್ಡ್ ಇಲ್ಲ.
  • ವೈಟ್‌ ಬೋರ್ಡ್‌ನ ನಾಲ್ಕು ಚಕ್ರದ ವಾಹನ ಇದ್ದವರಿಗೆ
  • ಐಟಿ ರಿಟರ್ನ್ ಪಾವತಿಸುವವರು
  • 3 ಹೆಕ್ಟೇರ್‌ ಒಣಭೂಮಿ, ತತ್ಸಮಾನ ನೀರಾವರಿ ಭೂಮಿ ಹೊಂದಿರುವವರು
  • ನಗರ ಪ್ರದೇಶಗಳಲ್ಲಿ1000 ಚದರ ಅಡಿ ವಿಸ್ತೀರ್ಣದ ಸ್ವಂತ ಮನೆ ಹೊಂದಿದ್ದರೆ ಇಲ್ಲ.
  • ಸರಕಾರಿ, ಅರೆಸರಕಾರಿ ಉದ್ಯೋಗದಲ್ಲಿರುವವರು

Leave a Comment

Your email address will not be published. Required fields are marked *

Scroll to Top