ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಈಗಾಗಲೇ ಬಹಳಷ್ಟು ಸದ್ದು ಮಾಡ್ತಾ ಇದೆ. ಅದರಲ್ಲಿ ಮುಖ್ಯವಾದ ಯೋಜನೆ ಗೃಹಲಕ್ಷ್ಮಿ ಕೂಡ ಒಂದಾಗಿದ್ದು ಮಹಿಳೆಯರು ತಿಂಗಳಿಗೆ ಎರಡು ಸಾವಿರ ಮೊತ್ತವನ್ನು ಪಡೆಯುತ್ತಿದ್ದಾರೆ. ಆದರೆ ಈ ಗೃಹಲಕ್ಷ್ಮೀ ಹಣ (Gruha Lakshmi Money) ಎರಡು ಮೂರು ತಿಂಗಳಿ ನಿಂದ ಬಂದಿಲ್ಲ ಅಂತ ಮಾತು ಕತೆಗಳು ಜೋರಾಗಿದೆ. ಆದರೆ ಎರಡು ಮೂರು ತಿಂಗಳಿನಿಂದ ಈ ಗೃಹಲಕ್ಷ್ಮಿ ಹಣ ಯಾಕೆ ಬಂದಿಲ್ಲ ಅಂತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆ ಯನ್ನು ಕೂಡ ನೀಡಿದ್ದಾರೆ.
ಹಾಗೆಯೇ ಕೆಲವು ಅನರ್ಹ ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಿಂದ ಹೊರಗಿಟ್ಟಿದ್ದು ಐಟಿ ಜಿಎಸ್ಟಿ ಪಾವತಿ ಮಾಡುತ್ತಿದ್ದರೆ ನಿಮ್ಮ ಹೆಸರು ಈ ಯೋಜನೆಯಿಂದಲೇ ಕ್ಯಾನ್ಸಲ್ ಮಾಡಲಾಗಿದೆ. ಇದನ್ನು ನೀವು ಖಚಿತ ಪಡಿಸಿಕೊಳ್ಳಬೇಕಾದರೆ ನೀವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ತಿಳಿದುಕೊಳ್ಳಬಹುದು.
ಈಗಾಗಲೇ ರಾಜ್ಯದಲ್ಲಿ 1.28 ಕೋಟಿ ಗೃಹಲಕ್ಷ್ಮೀ (Gruha Lakshmi) ಫಲಾನುಭವಿಗಳು ಇದ್ದು ಇದರಲ್ಲಿ ಸುಮಾರು 2 ಲಕ್ಷ ಮಹಿಳೆಯರನ್ನು IT, GST ಪಾವತಿ ಕಾರಣದಿಂದ ಗೃಹಲಕ್ಷ್ಮೀ ಯೋಜನೆ ಯಿಂದ ಹೆಸರು ಕ್ಯಾನ್ಸಲ್ ಮಾಡಲಾಗಿದೆ.
ಗೃಹಲಕ್ಷ್ಮಿ ಹಣ ಪಡೆಯಲು ಕೆಲವೊಂದು ಮಾನದಂಡಗಳನ್ನು ನಿರ್ಧಾರ ಮಾಡಿದ್ದು ಆದಾಯ ತೆರಿಗೆ ಪಾವತಿದಾರಿಗೆ ಈ ಹಣ ಇಲ್ಲ. ಹಾಗಾಗಿ ಆದಾಯ ತೆರಿಗೆ ಪಾವತಿದಾರರ ಮನೆಯ ಯಜಮಾನಿಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲಾಗಿದೆ. ಆದರೂ, ಆದಾಯ ತೆರಿಗೆ ಪಾವತಿ ಮಾಡುತ್ತಿರುವ ಲಕ್ಷಾಂತರ ಮಂದಿ ಅನರ್ಹರು ಇದರ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಇಂತಹ ಮಹಿಳೆಯರನ್ನು ಪತ್ತೆ ಕೂಡ ಮಾಡಲಾಗಿದೆ. ಹಾಗಾಗಿ ಇಂತಹ ಮಹಿಳೆಯರಿಗೆ ಇನ್ಮುಂದೆ ಗೃಹಲಕ್ಷ್ಮಿ ಹಣ ಬರಲ್ಲ.
ಹಣ ಯಾವಾಗ ಬರಲಿದೆ?
ಈಗಾಗಲೇ ಜೂನ್ ತಿಂಗಳ ಹಣ ಕೆಲವು ಮಹಿಳೆಯರಿಗೆ ಜಮೆ ಯಾಗಿದ್ದು ತಾಂತ್ರಿಕ ದೋಷ ಆದಾಗ ಹೆಚ್ಚು ಕಡಿಮೆ ಆಗುತ್ತೆ. ಇನ್ನು ಎರಡು ತಿಂಗಳ ಹಣ ಸದ್ಯದಲ್ಲೇ ಬಿಡುಗಡೆ ಮಾಡುತ್ತೇವೆ ಎಂದು ಸಚಿವೆ ತಿಳಿಸಿದ್ದಾರೆ. ಫಲಾನುಭವಿಗಳು ನೀಡಿರುವ ಬ್ಯಾಂಕ್ ಖಾತೆಗಳು, ಆಧಾರ್ ಕೆವೈಸಿ ದಾಖಲೆ ಸರಿ ಇದ್ದರೆ ನಿಗಧಿತ ಸಮಯಕ್ಕೆ ಫಲಾನುಭವಿಗಳ ಖಾತೆಗೆ ಹಣ ತಲುಪಲು ಸಾಧ್ಯ ಆಗಲಿದೆ. ಹಾಗಾಗಿ ಮಹಿಳೆಯರು ಈ ಕೆಲಸವನ್ನು ಮೊದಲು ಮಾಡಬೇಕಿದೆ.