ಚಿನ್ನ ಬಹು ಬೇಡಿಕೆಯ ವಸ್ತುವಾಗಿದ್ದು ಇದರ ಖರೀದಿಗೆ ಹೆಚ್ಚಿನ ಜನರು ಆಸಕ್ತಿ ಯನ್ನು ವಹಿಸುತ್ತಾರೆ. ಇಂದಿಗೂ ಇದರ ಬೇಡಿಕೆ ಕಡಿಮೆ ಯಾಗಿಲ್ಲ. ಚಿನ್ನವನ್ನು ಆಪತ್ಕಾಲದ ನಿಧಿ ಎಂದೂ ಹೇಳಬಹುದು. ಕಷ್ಟ ಅಂತ ಬಂದಾಗ ಚಿನ್ನವನ್ನು ಅಡವಿಡುವ ಮೂಲಕ ವಾದರೂ ಹಣ ಪಡೆಯಬಹುದು. ಹಾಗಾಗಿ ಚಿನ್ನ ತೊಡುವ ಉದ್ದೇಶ ಮಾತ್ರವಲ್ಲದೆ ಹೂಡಿಕೆಯ ಭಾಗವಾಗಿಯು ಖರೀದಿ ಮಾಡುತ್ತಾರೆ. ಭಾರತದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಚಿನ್ನದ ಬೆಲೆ (Gold Rate) ದಿನೇ ದಿನೆ ಬದಲಾಗುತ್ತಲೇ ಇರುತ್ತದೆ.
ಇಂದು ಚಿನ್ನದ ದರ ಇಳಿಕೆ:
ಇಂದು ಚಿನ್ನದ ದರ (Gold Rate) ಇಳಿಕೆಯಾಗಿದ್ದು ಚಿನ್ನ ಖರೀದಿ ದಾರರಿಗೆ ಖುಷಿಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಮೊತ್ತವು 6,676 ರೂಪಾಯಿ ಆಗಿದ್ದು 24 ಕ್ಯಾರೆಟ್ ಚಿನ್ನದ ದರ 7,283 ರೂಪಾಯಿ ಆಗಿದೆ.ಹಾಗೆಯೇ 10 ಗ್ರಾಂ ಚಿನ್ನದ ಮೊತ್ತವು 66,760 ರೂಪಾಯಿ ಆಗಿದ್ದು 24 ಕ್ಯಾರೆಟ್ ಬಂಗಾರದ ದರ 72,830 ರೂಪಾಯಿ ಆಗಿದೆ.
ಎಷ್ಟು ಕಡಿಮೆ ಯಾಗಿದೆ?
ಇಂದು 18 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Rate) ಇಂದು ರೂ 80 ರಷ್ಟು ಕಡಿಮೆಯಾಗಿ ರೂ 54,860 ಇರಲಿದೆ. 1 ಗ್ರಾಂ ಚಿನ್ನದ ದರ ಇಂದು 22 ಕ್ಯಾರೆಟ್ ಚಿನ್ನದ ಬೆಲೆ 10 ರೂಪಾಯಿ ಇಳಿಕೆಯಾಗಿ 6,705 ರೂಪಾಯಿಗಳಿಗೆ ತಲುಪಿದೆ.ಇಂದು ವಿದೇಶದಲ್ಲಿ ಚಿನ್ನದ ದರ ತೀವ್ರ ಏರಿಕೆ ಆದರೂ ಭಾರತದಲ್ಲಿ ಚಿನ್ನ, ಬೆಳ್ಳಿ ಬೆಲೆ ಇಂದಿನ ದಿನ ಇಳಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 67,040 ಮೊತ್ತ ಆಗಿದ್ದು 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 73,140 ರುಪಾಯಿ ಆಗಿದೆ.
ಈ ಮೊದಲು 22 ಕ್ಯಾರಟ್ ಹತ್ತು ಗ್ರಾಂ ಚಿನ್ನಕ್ಕೆ ಬುಧವಾರ 67150 ರೂಪಾಯಿ ಮಾರಾಟ ಆಗಿತ್ತು. ಗುರುವಾರ ಸೆಪ್ಟಂಬರ್ 12ಕ್ಕೆ 67050ಕ್ಕೆ ಇಳಿಕೆ ಆಗಿದೆ. ಇನ್ನೂ 24 ಕ್ಯಾರಟ್ ಹತ್ತು ಗ್ರಾಂ ಚಿನ್ನದ ಬೆಲೆ ನೆನ್ನೆ 73250 ರೂಪಾಯಿ ಇದ್ದದ್ದು, ಇಂದು 73150 ರೂಪಾಯಿಗೆ ಇಳಿಕೆ ಕಂಡುಬಂದಿದೆ.
ಬೆಳ್ಳಿ ದರ:
ಇಂದು ಬೆಳ್ಳಿಯು ಅತೀ ಅಗತ್ಯ ವಾದ ವಸ್ತುವಾಗಿದ್ದು ಇದರ ಬೇಡಿಕೆಯು ಕೂಡ ಹೆಚ್ಚಾಗಿ ಕಂಡುಬಂದಿದೆ. ಬೆಳ್ಳಿ ಬೆಲೆ (Silver Price) ಹಾಗೆಯೇ ಇರಲಿದ್ದು ತಟಸ್ಥವಾಗಿದೆ. ಇಂದು 1 ಕೆಜಿ ಬೆಳ್ಳಿ ಬೆಲೆ 86,500 ರೂ. ಆಗಿದ್ದು ಇಂದು 100 ಗ್ರಾಂ ಬೆಳ್ಳಿಯ ಬೆಲೆ 8,650 ರೂ. ಆಗಿದೆ.
ಇತರಕಡೆ ಎಷ್ಟಿದೆ?
ಹಾಗೆಯೇ ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನದ ದರವು 6705 ಆಗಿದ್ದು ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರದಲ್ಲಿ ಬೆಲೆಯು ರೂ. 6705, ರೂ. 6705, ರೂ. 6705 ಆಗಿದೆ.