ಇಂದು ರೇಷನ್ ಕಾರ್ಡ್ ಎಂಬುದು ಬಹು ಅಗತ್ಯವಾದ ದಾಖಲೆಯಾಗಿದ್ದು ಸರಕಾರದ ಯಾವುದೇ ಸೌಲಭ್ಯ ಪಡೆಯಬೇಕಾದರೂ ಈ ರೇಷನ್ ಕಾರ್ಡ್ (Ration Card) ಎಂಬುದು ಬಹಳ ಅಗತ್ಯ ವಾಗಿ ಬೇಕಿದೆ. ಹಾಗೆಯೇ ಅದರಲ್ಲಿ ಮುಖ್ಯವಾಗಿ ಬಿಪಿಎಲ್ ಕಾರ್ಡ್ ಗಳ ಸಂಖ್ಯೆ ಇಂದು ಹೆಚ್ಚಾಗಿದ್ದು ವಿವಿಧ ಜಿಲ್ಲೆಯಲ್ಲಿ ನಿಗದಿ ಪಡಿಸಿದ ಲೆಕ್ಕಕ್ಕಿಂತ ಹೆಚ್ಚಾಗಿ ಬಿಪಿಎಲ್ ಕಾರ್ಡ್ (BPL Card) ಮಾಡಿಸಿ ಕೊಂಡಿದ್ದಾರೆ. ಹಾಗಾಗಿ ಸರಕಾರವು ಇದನ್ನು ಸೂಕ್ತವಾಗಿ ಪರಿಶೀಲನೆ ಮಾಡ್ತಾ ಇದೆ. ಹಾಗಾಗಿ ಅನರ್ಹರ ರೇಷನ್ ಕಾರ್ಡ್ (Ration Card) ರದ್ದು ಮಾಡುವ ಜೊತೆಗೆ ಆರು ತಿಂಗಳಿನಿಂದ ರೇಷನ್ ಪಡೆಯಾದ ಫಲಾನುಭವಿಗಳ ಕಾರ್ಡ್ ಅನ್ನು ರದ್ದು ಮಾಡಿ ಎಪಿಎಲ್ ಆಗಿ ಪರಿವರ್ತನೆ ಮಾಡಲು ಮುಂದಾಗಿದೆ.
ಪಡಿತರ ಪಡೆಯದಿದ್ದರೆ ಕಾರ್ಡ್ ರದ್ದು:
ಈಗಾಗಲೇ ಅಕ್ರಮ ಪಡಿತರ ಚೀಟಿಗೆ ಕಡಿವಾಣ ಹಾಕಲು ಸರ್ಕಾರ ಕ್ರಮ ಕೈಗೊಂಡಿದ್ದು ಕೆಲವು ಜಿಲ್ಲೆಯಲ್ಲಿ ಕಳೆದ 6 ತಿಂಗಳಿನಿಂದ ರೇಷನ್ (Ration) ಪಡೆಯದೇ ಇರುವ BPL ಕಾರ್ಡ್‌ಗಳನ್ನು APL ಕಾರ್ಡ್‌ಗಳಾಗಿ ಈಗಾಗಲೇ ಪರಿವರ್ತಿಸಲಾಗಿದೆ. ಸುಮಾರು 8000ಕ್ಕೂ ಹೆಚ್ಚು ರೇಷನ್ ಕಾರ್ಡ್‌ಗಳನ್ನು ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಕೆಲವು ಫಲಾನುಭವಿಗಳಿಗೆ ಅಂತ್ಯೋದಯ, ಬಿಪಿಎಲ್ ಕಾರ್ಡ್ (BPL Card) ಇದ್ದರೂ ಇದರ ಉಪಯೋಗ ಮಾಡಿ ಕೊಳ್ಳುತ್ತಿಲ್ಲ. ಸದ್ಯ ಆರು ತಿಂಗಳಿಂದ 3.26 ಲಕ್ಷ ಜನ ಪಡಿತರ ಪಡೆದುಕೊಂಡಿಲ್ಲ. ಹಾಗಾಗಿ ಆಹಾರ ಇಲಾಖೆ ಯು ಆರು ತಿಂಗಳಿನಿಂದ ಪಡಿತರ ಪಡೆಯದ ಡೇಟಾ ಸಂಗ್ರಹಿಸಿ ಕಾರ್ಡ್ ಎಪಿಎಲ್ ಆಗಿ ಪರಿವರ್ತಿಸಲು ಮುಂದಾಗಿದೆ.
ಸಿಎಂ ಸೂಚನೆ:
ಅನರ್ಹ ಬಿಪಿಎಲ್ ಕಾರ್ಡ್ (BPL Card) ರದ್ದು ಮಾಡಲು ಸರಕಾರ ಇದೀಗ ಮುಂದಾಗಿದ್ದು ಕಾರ್ಯಾಚರಣೆ ಆರಂಭಿಸಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಕೂಡ ನೀಡಿದ್ದು ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಗೊಳಿಸಿ, ಅವರ ಕಾರ್ಡ್ ಅನ್ನು ಎಪಿಎಲ್ ಕಾರ್ಡ್ (APL Card) ಆಗಿ ಪರಿವರ್ತಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದ್ದಾರೆ.
ಆದಾಯ ತೆರಿಗೆ ಪಾವತಿ ಮಾಡುವವರು, ವಾರ್ಷಿಕ ಆದಾಯ 1,20,000 ರೂ.ಗಳಿಗಿಂತ ಹೆಚ್ಚು ಇದ್ದರೆ, ನಾಲ್ಕು ಚಕ್ರದ ಸ್ವಂತ ವಾಹನ ಇದ್ದರೆ,ಸರಕಾರಿ ಉದ್ಯೋಗ ,ಹೆಚ್ಚಿನ ಕೃಷಿ ಭೂಮಿ ಇದ್ದರೆ ಬಿಪಿಎಲ್ ಕಾರ್ಡ್ ಮಾಡಿಸುವಂತಿಲ್ಲ. ಆದರೆ ಇದೀಗ ಅನರ್ಹರು ಸರ್ಕಾರಿ ನೌಕರರು ಸಹ ಬಿಪಿಎಲ್ ಕಾರ್ಡ್ ಹೊಂದಿದ್ದು ಇವರ ಕಾರ್ಡ್ ರದ್ದು ಆಗಲಿದೆ.