ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತದ ಪ್ರತಿಯೊಂದು ಹಣಕಾಸಿನ ಸಂಬಂಧ ಪಟ್ಟಂತಹ ನಿಯಮಗಳನ್ನು ಕಂಟ್ರೋಲ್ ಮಾಡುವಂತಹ ಹಾಗೂ ಭಾರತದ ಅರ್ಥ ವ್ಯವಸ್ಥೆಯನ್ನು ಸರಿಯಾದ ದಿಕ್ಕಿನ ಕಡೆಗೆ ಕೊಂಡೊಯ್ಯುವಂತಹ ಅಧಿಕಾರ ಹಾಗೂ ಸಾಮರ್ಥ್ಯವನ್ನು ಹೊಂದಿರುವಂತಹ ಏಕೈಕ ಸಂಸ್ಥೆ. ಭಾರತದ ಪ್ರತಿಯೊಂದು ಬ್ಯಾಂಕಿಂಗ್ ನಿಯಮಗಳನ್ನ ಜಾರಿಗೆ ತರುವ ಹಾಗೂ ಬದಲಾವಣೆ ಮಾಡುವಂತಹ ಅಧಿಕಾರ ಕೂಡ ಇರೋದು ಇದೇ ಸಂಸ್ಥೆಯ ಬಳಿ.
ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈಗ ಸದ್ದು ಮಾಡುತ್ತಿರುವುದು ಭಾರತದ ಪ್ರೈವೇಟ್ ಸೆಕ್ಟರ್ ನ ಅತ್ಯಂತ ದೊಡ್ಡ ಬ್ಯಾಂಕುಗಳಲ್ಲಿ ಕಾಣಿಸಿಕೊಳ್ಳುವಂತಹ ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಹಾಗೂ ಆಕ್ಸಿಸ್ ಬ್ಯಾಂಕ್ (Axis Bank) ಗಳ ಮೇಲೆ ವಿಧಿಸಿರುವ ಅಂತಹ ದಂಡಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (Reserve Bank of India) ಎರಡು ಬ್ಯಾಂಕುಗಳ ಮೇಲೆ ಒಟ್ಟಾರೆ 2.91 ಕೋಟಿ ರೂಪಾಯಿಗಳ ಭರ್ಜರಿ ತಂಡವನ್ನು ವಿಧಿಸಿದೆ ಎಂಬುದಾಗಿ ತಿಳಿದುಬಂದಿದ್ದು ಇದಕ್ಕಿರುವಂತಹ ಕಾರಣಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ದಂಡ ವಿಧಿಸುವುದಕ್ಕೆ ಕಾರಣ ಏನು?
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿರುವ ಮಾಹಿತಿಯ ಪ್ರಕಾರ ಆಕ್ಸಿಸ್ ಬ್ಯಾಂಕ್ (Axis Bank) ನ ಮೇಲೆ 1.91 ಕೋಟಿ ರೂಪಾಯಿಗಳ ದಂಡವನ್ನು ಕೆವೈಸಿ ಪ್ರಕ್ರಿಯೆ, ಗ್ಯಾರಂಟಿ ರಹಿತ ಕೃಷಿ ಲೋನ್, ಡೆಪಾಸಿಟ್ ಮೇಲಿನ ಇಂಟರೆಸ್ಟ್ ರೇಟ್ (Interest Rate) ಬಗ್ಗೆ ಇರುವಂತಹ ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕಾಗಿ ದಂಡ ವಿಧಿಸಿದೆ ಎಂಬುದಾಗಿ ಹೇಳಿದೆ.
- ಹೆಚ್ ಡಿ ಎಫ್ ಸಿ ಬ್ಯಾಂಕ್ನ (HDFC Bank) ಮೇಲೆ ಒಂದು ಕೋಟಿ ರೂಪಾಯಿ ದಂಡವನ್ನು ಡೆಪಾಸಿಟ್ ಮೇಲಿನ ಬಡ್ಡಿದರ, ಬ್ಯಾಂಕಿನಲ್ಲಿರುವಂತಹ ಕಸ್ಟಮರ್ ಸರ್ವಿಸ್ ಹಾಗೂ ರಿಕವರಿ ಏಜೆಂಟ್ ಗಳ ವಿಚಾರದಲ್ಲಿ ನಿಯಮ ಉಲ್ಲಂಘಿಸಿರುವ ಕಾರಣಕ್ಕಾಗಿ ವಿಧಿಸಿದೆ.