ಕೃಷಿ ಹಾಗೂ ಕೃಷಿ ಸಂಬಂಧಪಟ್ಟಂತಹ ಪಶುಸಂಗೋಪನೆಯ ವಿಚಾರದಲ್ಲಿ ಕೇಂದ್ರ ಸರ್ಕಾರ ಈಗಾಗಲೇ ಜನರಿಗೆ ಆರ್ಥಿಕವಾಗಿ ಬೇರೆ ಬೇರೆ ರೀತಿಯಲ್ಲಿ ಸಹಾಯ ಮಾಡುವಂತಹ ಕೆಲಸವನ್ನು ಬೇರೆ ಬೇರೆ ಯೋಜನೆಗಳ ರೂಪದಲ್ಲಿ ಮಾಡಿಕೊಂಡು ಬರ್ತಾ ಇದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳುವುದಕ್ಕೆ ಹೊರಟಿರುವುದು ಕೋಳಿ ಸಾಕಾಣಿಕೆ ಅಂದರೆ ಪೌಲ್ಟ್ರಿ ಫಾರ್ಮ್ (Poultry Farm) ಮಾಡೋದಕ್ಕೆ ಸರ್ಕಾರದಿಂದ ಯಾವ ರೀತಿಯಲ್ಲಿ ಸಬ್ಸಿಡಿ ದರದಲ್ಲಿ ಲೋನ್ (Loan) ಸೌಲಭ್ಯ ಸಿಗುತ್ತೆ ಎನ್ನುವುದರ ಬಗ್ಗೆ. ಇಲ್ಲಿ ಸಬ್ಸಿಡಿ 30 ರಿಂದ 60 ಪ್ರತಿಶತದ ವರೆಗೆ ಕೂಡ ಸಿಗುತ್ತದೆ. ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.
ಸರ್ಕಾರದ ಈ ಯೋಜನೆ ಅಡಿಯಲ್ಲಿ 9 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ಸಹಿತ ಸಾಲವನ್ನು ಪಡೆದುಕೊಳ್ಳಬಹುದಾಗಿದ್ದು, ಹತ್ತರಿಂದ ಹದಿನಾರು ಪ್ರತಿಶತ ಬಡ್ಡಿ ಇರುತ್ತೆ. ಜನರಲ್ ಕ್ಯಾಟಗರಿ ಅವರಿಗೆ 25 ಪ್ರತಿಶತ ಹಾಗೂ SC, ST ಅವರಿಗೆ 33 ಪ್ರತಿಶತ ಸಬ್ಸಿಡಿ ನೀಡಲಾಗುತ್ತದೆ. ಲೋನ್ (Loan) ಪಡೆದುಕೊಂಡ ಮೂರರಿಂದ ಐದು ವರ್ಷಗಳವರೆಗೆ ಮರುಪಾವತಿ ಮಾಡಬೇಕಾಗಿರುವಂತಹ ಸಮಯಾವಧಿಯನ್ನು ನೀಡಲಾಗುತ್ತದೆ.
ಬೇಕಾಗಿರುವ ಡಾಕ್ಯುಮೆಂಟ್ಸ್:
- ಆಧಾರ್ ಕಾರ್ಡ್
- ರೆಸಿಡೆನ್ಸಿ ಸರ್ಟಿಫಿಕೇಟ್
- ಇನ್ಕಮ್ ಸರ್ಟಿಫಿಕೇಟ್
- ಜಾತಿ ಸರ್ಟಿಫಿಕೇಟ್
- ಪೌಲ್ಟ್ರಿ ಫಾರ್ಮ್ ಓಪನ್ ಮಾಡುವುದಕ್ಕೆ ಅನುಮತಿ ಪತ್ರ
- ನೀವು ಸಾಕುವಂತಹ ಪಕ್ಷಿಯ ಮಾಹಿತಿ
- ನಿಮ್ಮ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಜೊತೆಗೆ ಪಾಸ್ಪೋರ್ಟ್ ಸೈಜ್ ಫೋಟೋ.
ಪೌಲ್ಟ್ರಿ ಫಾರ್ಮ್ (Poultry Farm) ಲೋನ್ ಗೆ ಅರ್ಜಿ ಸಲ್ಲಿಸುವ ವಿಧಾನ:
- ನೀವು ನಿಮ್ಮ ಹತ್ತಿರದ ಬ್ಯಾಂಕಿನ ಬ್ರಾಂಚ್ ಗೆ ಹೋಗಿ ಪೌಲ್ಟ್ರಿ ಫಾರ್ಮ್ ಲೋನ್ ಯೋಜನೆ (Poultry Farm Loan Scheme) ಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಅದರ ಅರ್ಜಿ ಫಾರ್ಮ್ ಅನ್ನು ತೆಗೆದುಕೊಂಡು ಬಂದು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು.
- ಅದರ ಜೊತೆಗೆ ಬೇಕಾಗಿರುವಂತಹ ಪ್ರತಿಯೊಂದು ಡಾಕ್ಯುಮೆಂಟ್ಸ್ ಗಳ ಜೆರಾಕ್ಸ್ ಪ್ರತಿಯನ್ನು ಅಟ್ಯಾಚ್ ಮಾಡಬೇಕು.
- ಇದಾದ ನಂತರ ಬ್ಯಾಂಕಿಗೆ ನೀಡಿದ ನಂತರ ಪ್ರತಿಯೊಂದು ಮಾಹಿತಿಗಳನ್ನು ನೋಡುವಂತಹ ಅಧಿಕಾರಿಗಳು ನೀವು ಇದನ್ನು ಮಾಡಬೇಕೆಂದಿರುವಂತಹ ಜಾಗವನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡುತ್ತಾರೆ.
- ಇದೆಲ್ಲಾ ಆದ ನಂತರ ನಿಮ್ಮ ಖಾತೆಗೆ ಲೋನ್ ಹಣವನ್ನು ವರ್ಗಾವಣೆ ಮಾಡುತ್ತಾರೆ.