ಇಂದು ವ್ಯಕ್ತಿಯ ಕೆಲವೊಂದು ದಾಖಲೆಗಳು ಅಗತ್ಯವಾಗಿ ಬೇಕಿದ್ದು ಯಾವುದೇ ಸರಕಾರದ ಸೌಲಭ್ಯ ಪಡೆಯಲು ಎಲ್ಲ ಅವಶ್ಯಕ ದಾಖಲಾತಿಗಳು ಬೇಕಾಗುತ್ತದೆ. ಹಾಗೆಯೇ ಶಿಕ್ಷಣ, ಸರ್ಕಾರೀ ಯೋಜನೆ ಗಳ ಸೌಲಭ್ಯ ಪಡೆಯಲು ಆದಾಯ ಪ್ರಮಾಣ ಪತ್ರ (Income Certificate) ಎಂಬುದು ಕಡ್ಡಾಯ ವಾಗಿ ಬೇಕಾಗುತ್ತದೆ. ಇದರಿಂದ ನಿಮ್ಮ ಆದಾಯ ಎಷ್ಟು? ಇತರ ಸೌಲಭ್ಯ ಪಡೆದು ಕೊಳ್ಳಲು ನೀವು ಅರ್ಹರೇ ಇತ್ಯಾದಿ ಈ ದಾಖಲೆ ಮೂಲಕ ನಿಗದಿ ಮಾಡಲಾಗುತ್ತದೆ.
ಇಂದು ಈ ದಾಖಲೆ ಅಗತ್ಯವಾಗಿ ಬೇಕಿದ್ದು ನೀವು ಈ ದಾಖಲೆಯನ್ನು ಸುಲಭ ವಾಗಿ ಮಾಡಿಸಬಹುದು. ಹಾಗೂ ಈ ದಾಖಲೆ ಮಾಡಿಸಿ ಕೊಳ್ಳಲು ಯಾವೆಲ್ಲ ಮುಖ್ಯ ದಾಖಲೆಗಳು ಬೇಕು ಎನ್ನುವ ಮಾಹಿತಿ ಇಲ್ಲಿದೆ. ಈ ಹಿಂದೆ ಆದಾಯ ಮತ್ತು ಜಾತಿ ಪ್ರಮಾಣ (Income and Caste Certificate) ಪತ್ರವನ್ನು ಪಡೆಯಲು ನಾಡ ಕಚೇರಿಗೆ ತೆರಳಿ ಅರ್ಜಿ ಹಾಕಬೇಕಿತ್ತು. ಆದರೆ ಇಂದು ಹಾಗಿಲ್ಲ, ಮನೆಯಲ್ಲಿಯೇ ಕುಳಿತು ಕೊಂಡು ಆನ್ಲೈನ್ ಮೂಲಕ ಆದಾಯ ಹಾಗೂ ಜಾತಿ ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಹಾಕಲು ಅವಕಾಶ ಇರಲಿದೆ.
ಈ ದಾಖಲೆಗಳು ಬೇಕು:
- ವಿಳಾಸ ಪ್ರಮಾಣ ಪತ್ರ
- ಬ್ಯಾಂಕ್ ವ್ಯವಹಾರದ ದಾಖಲೆ
- ರೇಷನ್ ಕಾರ್ಡ್
- ಸ್ಯಾಲರಿ ಸರ್ಟಿಫಿಕೇಟ್ ದೃಢೀಕರಣ ಪತ್ರ
- ಮತದಾರರ ಗುರುತಿನ ಚೀಟಿ
- ಆಧಾರ್ ಕಾರ್ಡ್
- ಪೋಟೋ ಇತ್ಯಾದಿ
- ಮೊದಲಿಗೆ ನಾಡಕಚೇರಿಯ ಅಧಿಕೃತ ಜಾಲತಾಣಕ್ಕೆ https://sevasindhuservices.karnataka.gov.in/loginWindow. ಇಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹೊಂದಿಸಿ ಓಟಿಪಿಯನ್ನು ಪಡೆದುಕೊಳ್ಳುವ ಆಯ್ಕೆಯನ್ನು ಮಾಡಿ.
- ನಂತರ ಓಟಿಪಿಯನ್ನು ನೋಂದಣಿ ಮಾಡಿದ ನಂತರ ಲಾಗಿನ್ ಮೇಲೆ ಕ್ಲಿಕ್ ಮಾಡಿ.ಇಲ್ಲಿ New Request ಮೇಲೆ ಕ್ಲಿಕ್ ಮಾಡಿ, ಆದಾಯ ಪ್ರಮಾಣ ಪತ್ರದ ಆಯ್ಕೆಯನ್ನು ಮಾಡಿಕೊಳ್ಳಿ.
- ಬಳಿಕ ಆಧಾರ್ ಕಾರ್ಡ್, ಜಿಲ್ಲೆ ತಾಲೂಕು, ಹೋಬಳಿ, ಗ್ರಾಮ, ಜಾತಿ, ಆದಾಯ, ಕೆಟಗರಿ, ನಿಮ್ಮ ಹೆಸರು ಹಾಗೂ ತಂದೆಯ ಹೆಸರನ್ನು ಭರ್ತಿ ಮಾಡಿದ ಮೇಲೆ ಸರ್ಚ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
- ನಂತರ ವೈಯಕ್ತಿಕ ವಿಷಯಗಳು ಸರಿ ಇದೆಯೇ ಎಂದು ನೋಡಿ, ಶುಲ್ಕವನ್ನು ಭರಿಸಿ ಪ್ರಿಂಟ್ ತೆಗೆದುಕೊಳ್ಳಬಹುದು.