ಸ್ವಂತ ಮನೆ ಹೊಂದುವಂತಹ ಕನಸು ಖಂಡಿತವಾಗಿ ಪ್ರತಿಯೊಬ್ಬರಿಗೂ ಕೂಡ ಇದ್ದೇ ಇರುತ್ತೆ. ಆದರೆ ಈಗ ಈ ದುಬಾರಿ ಕಾಲದಲ್ಲಿ ಸ್ವಂತ ಮನೆ ಹೊಂದೋದು ಅಷ್ಟೊಂದು ಸುಲಭದ ಮಾತಲ್ಲ, ಆದರೆ ಭಾರತ ಸರ್ಕಾರ ನಿಮ್ಮ ಈ ಕನಸನ್ನ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) – ನಗರ ದ ಮೂಲಕ ನನಸು ಮಾಡುವಂತಹ ಯೋಜನೆ ಹಾಕಿಕೊಂಡಿದೆ. ಅದು ಈ ಬಾರಿ 2.0 ಆವೃತ್ತಿಯ ಮೂಲಕ ನಗರ ಭಾಗದಲ್ಲಿರುವಂತಹ ಬಡವ ಹಾಗೂ ಮಧ್ಯಮ ವರ್ಗದ ಕುಟುಂಬಕ್ಕೆ ಮನೆ ಮಾಡುವಂತಹ ಕನಸನ್ನ ನನಸು ಮಾಡಲು ಸಿದ್ಧವಾಗಿದೆ.
ಈ ಯೋಜನೆಯ 2018ರಲ್ಲಿ ಪ್ರಾರಂಭ ಮಾಡಿದ್ದು. ಈಗಾಗಲೇ 85.5 ಲಕ್ಷಕ್ಕೂ ಹೆಚ್ಚಿನ ಮನೆಗಳನ್ನು ಕಟ್ಟಿ ಕೊಡಲಾಗಿದೆ. 2023ರ ಆಗಸ್ಟ್ 15ನೇ ದಿನಾಂಕದಂದು ಈ ಯೋಜನೆಯನ್ನು ಮತ್ತೊಂದು ರೂಪದಲ್ಲಿ ಲಾಂಚ್ ಮಾಡುವ ಅಧಿಕೃತ ಘೋಷಣೆಯನ್ನು ಮಾಡಿದ್ರು. ಆರ್ಥಿಕವಾಗಿ ಸಂಪೂರ್ಣವಾಗಿ ಹಿಂದುಳಿದಿರುವ ಹಾಗೂ ಮಾಧ್ಯಮ ವರ್ಗದ ಆರ್ಥಿಕ ಸ್ಥಿತಿಯನ್ನು ಹೊಂದಿರುವಂತಹ ಕುಟುಂಬಗಳಿಗೆ ಈ ಯೋಜನೆಯನ್ನು ಘೋಷಿಸಲಾಗಿದೆ.
ಇದರಲ್ಲಿ ಕೂಡ ಮೂರು ವರ್ಗ ಮಾಡಿದ್ದು, EWS ಮಾರ್ಗದಲ್ಲಿ ವಾರ್ಷಿಕ 3 ವರ್ಷಗಳ ಆದಾಯ ಇರುವವರು, ಮೂರರಿಂದ ಆರು ಲಕ್ಷ ರೂಪಾಯಿಗಳ ವಾರ್ಷಿಕ ಆದಾಯವನ್ನು ಕುಟುಂಬವನ್ನು ಎಲ್‌ಐಜಿ ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ಆರರಿಂದ ಒಂಬತ್ತು ಲಕ್ಷ ರೂಪಾಯಿಗಳ ವಾರ್ಷಿಕ ಆದಾಯವನ್ನು ಹೊಂದಿರುವಂತಹ ಕುಟುಂಬ ಎಂಐಜಿ ಎಂಬುದಾಗಿ ಪರಿಗಣಿಸಲಾಗುತ್ತದೆ.
1.80 ಲಕ್ಷ ರೂಪಾಯಿಗಳ ಸಬ್ಸಿಡಿ:
ಈ ಲೇಖನದಲ್ಲಿ ನಾವು ನಿಮಗೆ ಹೇಳುತ್ತಿರುವುದು ಬಡ್ಡಿ ಸಬ್ಸಿಡಿ (Interest Subsidy) ಹೋಂ ಲೋನ್ (Home Loan) ಬಗ್ಗೆ. ಈ ಮೂರು ವರ್ಗದ ಕುಟುಂಬದವರಿಗೂ ಕೂಡ ಈ ಯೋಜನೆ ಅಡಿಯಲ್ಲಿ 25 ಲಕ್ಷಗಳ ವರೆಗೆ ಸಾಲವನ್ನು ನೀಡಲಾಗುತ್ತದೆ. 12 ವರ್ಷದ ಅವಧಿಯಲ್ಲಿ ಮೊದಲ ಎಂಟು ವರ್ಷ ಕೇವಲ ನಾಲ್ಕು ಪ್ರತಿಶತ ಬಡ್ಡಿ ದರದ ಸಬ್ಸಿಡಿಗೆ ಅರ್ಹತೆಯನ್ನು ಹೊಂದಿರುತ್ತಾರೆ. 35 ಲಕ್ಷ ರೂಪಾಯಿಗಳ ಲೋನ್ (Loan) ಪಡೆದುಕೊಳ್ಳುವವರಿಗೆ ಅರ್ಹ ಅಭ್ಯರ್ಥಿಗಳಿಗೆ ಐದು ವರ್ಷದ ಮರುಪಾವತಿಯಲ್ಲಿ 1.80 ಸಬ್ಸಿಡಿಯನ್ನು ಜಾರಿಗೊಳಿಸಲಾಗುತ್ತಿದೆ.