ಇಂದು ರೇಷನ್ ಕಾರ್ಡ್ (Ration Card) ಎಂಬುದು ಬಹಳ ಅಗತ್ಯವಾಗಿದ್ದು ಸರಕಾರದ ಹಲವು ರೀತಿಯ ಸೌಲಭ್ಯ ಗಳನ್ನು ಪಡೆದು ಕೊಳ್ಳಲು ಸಾಧ್ಯವಿದೆ, ಈಗಾಗಲೇ ಜಾರಿಯಲ್ಲಿರುವ ಗ್ಯಾರಂಟಿ ಯೋಜನೆಗಳಿಗೂ ಈ ರೇಷನ್ ಕಾರ್ಡ್ ಬಹಳ ಅಗತ್ಯವಿದೆ. ಈಗಾಗಲೇ ಹೆಚ್ಚಿನ ಜನರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದು ಕಾರ್ಡ್ ತಿದ್ದುಪಡಿ ಮಾಡಲು ಸಹ ಅರ್ಜಿ ಹಾಕಿದ್ದಾರೆ. ಇದೀಗ ತಿದ್ದುಪಡಿ ಮಾಡಿರುವ ಅರ್ಜಿ ಯನ್ನು ಸರಕಾರ ಬಿಡುಗಡೆ ಮಾಡಿದ್ದು ನಿಮ್ಮಹೆಸರು ಇದೆಯೇ ಎಂದು ಚೆಕ್ ಮಾಡಬಹುದಾಗಿದೆ.
ಈಗಾಗಲೇ ಸರಕಾರವು ಅನರ್ಹ ರೇಷನ್ ಕಾರ್ಡ್ (Ration Card) ಗಳನ್ನು ರದ್ದು ಮಾಡಲು ಮುಂದಾಗಿದ್ದು ಪ್ರತಿಯೊಂದು ರೇಷನ್ ಕಾರ್ಡ್ ಗಳ ಪರಿಶೀಲನೆ ಮಾಡುತ್ತಿದೆ. ಈಗಾಗಲೇ ಇರುವ ಅನರ್ಹ ಕಾರ್ಡ್ ರದ್ದು ಮಾಡಿ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಸರಕಾರ ಅವಕಾಶ ನೀಡಲಿದೆ.
ಹಾಗೆಯೇ ಈಗಾಗಲೇ ಇದ್ದ ರೇಷನ್ ಕಾರ್ಡ್ (Ration Card) ನಲ್ಲಿ ಮಾಹಿತಿ ಬದಲಾವಣೆ ಮಾಡಲು ಇದ್ದರೆ ಅಂದರೆ ಕುಟುಂಬ ಸದಸ್ಯರ ಹೆಸರು ತಿದ್ದುಪಡಿ, ಮನೆ ಯಜಮಾನರ ಬದಲಾವಣೆ,ಹೊಸ ಸದಸ್ಯರ ಸೇರ್ಪಡೆ, ವಿಳಾಸ ಬದಲಾವಣೆ, ಫೋಟೋ ಮತ್ತು ಬಯೋ ಮೆಟ್ರಿಲ್ ಅಪ್ಡೇಟ್ ಇತ್ಯಾದಿ ಗೂ ಆಹಾರ ಇಲಾಖೆ ಅವಕಾಶ ನೀಡಿತ್ತು.
ಪಡಿತರ ಚೀಟಿಯಲ್ಲಿ ಏನಾದರೂ ಬದಲಾವಣೆ ಇದ್ದಲ್ಲಿ ತಿದ್ದುಪಡಿಗಾಗಿ ಆಹಾರ ಇಲಾಖೆಯು ಅವಕಾಶ ನೀಡಿತ್ತು. ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆಗೆ ಅರ್ಜಿ ಸಲ್ಲಿಸಿದ್ದವರ ಪಟ್ಟಿ ಇದೀಗ ಬಿಡುಗಡೆಯಾಗಿದ್ದು, ಅರ್ಜಿ ಸಲ್ಲಿಸಿದವರು ಹೆಸರು ಸೆರ್ಪಡೆ ಯಾದಬಗ್ಗೆ ನಿಮ್ಮ ಹೆಸರನ್ನು ಪರಿಶೀಲನೆ ಮಾಡಿಕೊಳ್ಳಬಹುದು.
- ಮೊದಲಿಗೆ ಫಲಾನುಭವಿಗಳು https://ahara.kar.nic.in ಈ ಲಿಂಕ್ ಗೆ ಭೇಟಿ ನೀಡಿ, e-Services ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಬಳಿಕ e-Ration card ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. Village List ಆಪ್ಚನ್ ಆಯ್ದು ಕೊಳ್ಳಿ, ಬಳಿಕ ನಿಮ್ಮಜಿಲ್ಲೆ, ತಾಲ್ಲೂಕು,ಗ್ರಾಮ ಪಂಚಾಯತ್ ಆಯ್ದು ಕೊಂಡು ಗೋ ಬಟನ್ ಕ್ಲಿಕ್ ಮಾಡಿದರೆ ಆಯಿತು.
- ಅರ್ಜಿ ಸಲ್ಲಿಸಿರುವ ವೇಳೆ ನೀವು ನೀಡಿರುವಂತಹ ಎಲ್ಲ ದಾಖಲೆಗಳನ್ನು ಆಹಾರ ಇಲಾಖೆಯಿಂದ ಸರಿಯಾಗಿದೆ ಎಂದು ಪರಿಶೀಲನೆ ಮಾಡಿ ಅಪ್ ಡೇಟ್ ಆಗಿರುವ ಹೊಸ ಪಡಿತರ ಚೀಟಿ ನೀಡಲಾಗುತ್ತದೆ.