iPhone 16 ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅಧಿಕೃತವಾಗಿ ಜಾಗತಿಕವಾಗಿ ಮಾರುಕಟ್ಟೆಯಲ್ಲಿ ಲಾಂಚ್ ಆಗಿದೆ. ಸಮಯ ಎಷ್ಟೇ ಉರುಳಿ ಹೋಗದೆ ಆದರೆ ಐಫೋನ್ ಮೇಲೆ ಇರುವಂತಹ ವ್ಯಾಮೋಹ ಜನರಿಗೆ ಕಡಿಮೆ ಆಗುವುದಿಲ್ಲ ಅನ್ನೋದನ್ನ ನಾವು ಯಾವುದೇ ಅನುಮಾನವಿಲ್ಲದೆ ಒಪ್ಪಿಕೊಳ್ಳ ಬೇಕಾಗುತ್ತದೆ.
ಇನ್ನು ಸಮಯ ಕಳೆದಂತೆ ಹೊಸ ಹೊಸ ವರ್ಷನ್ ಬಿಡುಗಡೆ ಆಗ್ತಾ ಇದ್ದಂಗೆ ಫೋನಿನ ಬೆಲೆ ಕೂಡ ಹೆಚ್ಚಾಗುತ್ತಿದೆ. ಇನ್ನು ಇತ್ತೀಚಿಗಷ್ಟೇ ಜಾಗತಿಕವಾಗಿ ಲಾಂಚ್ ಆಗಿರುವಂತಹ ಪ್ರತಿಷ್ಠಿತ iPhone 16 Pro 128GB ಸ್ಪೆಸಿಫಿಕೇಶನ್ ಹೊಂದಿರುವಂತಹ ಫೋನಿನ ಬೆಲೆ ಭಾರತ ಸೇರಿದಂತೆ ಜಗತ್ತಿನ ಬೇರೆ ಬೇರೆ ಪ್ರಮುಖ ದೇಶಗಳಲ್ಲಿ ಯಾವ ರೀತಿಯಲ್ಲಿ ಇದೆ ಎನ್ನುವಂತಹ ಕಂಪ್ಯಾರಿಸನ್ ಮಾಡೋದಕ್ಕೆ ಹೊರಟಿದ್ದೇವೆ.
ಹಾಗಿದ್ರೆ ಬನ್ನಿ ಯಾವೆಲ್ಲ ದೇಶದ ಬೆಲೆ ಯಾವ ರೀತಿಯಲ್ಲಿ ಕಡಿಮೆ ಆಗಿದೆ ಅಥವಾ ಹೆಚ್ಚಾಗಿದೆ ಅನ್ನೋದನ್ನ ತಿಳಿಯೋಣ. ಒಂದು ವೇಳೆ ನೀವು ಕೂಡ ಬೇರೆ ದೇಶಗಳಿಗೆ ಹೋಗಿ iPhone 16 Pro ಫೋನ್ ಅನ್ನು ಖರೀದಿಸುವಂತಹ ಯೋಚನೆ ಮಾಡ್ತಾ ಇದ್ರೆ ಅದಕ್ಕೂ ಕೂಡ ಈ ಮಾಹಿತಿ ಸಹಾಯಕಾರಿಯಾಗಲಿದೆ.
- ವಿಯೆಟ್ನಾಮ್ ನಲ್ಲಿ ಇದರ ಬೆಲೆ 98,700 ರೂಪಾಯಿ.
- ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಇದರ ಬೆಲೆ 98200 ರೂಪಾಯಿ.
- ಜಪಾನ್ ನಲ್ಲಿ ಇದರ ಬೆಲೆ 93,700 ರೂಪಾಯಿ.
- ಚೈನಾ ದೇಶದಲ್ಲಿ ಇದರ ಬೆಲೆ 92,600 ರೂಪಾಯಿ.
- ವಿಶ್ವದ ದೊಡ್ಡಣ್ಣ ಆಗಿರುವಂತಹ ಅಮೆರಿಕ ದೇಶದಲ್ಲಿ ಇದರ ಬೆಲೆ 83,900 ರೂಪಾಯಿ ಆಗಿರುತ್ತದೆ.
- ಇನ್ನು ನಮ್ಮ ಭಾರತ ದೇಶದಲ್ಲಿ ಇದರ ಬೆಲೆ ಎಲ್ಲಕ್ಕಿಂತ ಹೆಚ್ಚು 1,19,900 ರೂಪಾಯಿ ಆಗಿದೆ.
ಹೀಗಾಗಿ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ಭಾರತ ದೇಶದಲ್ಲಿ ಈ ಫೋನಿನ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ ಎಂದು ಹೇಳಬಹುದು.