ಭಾರತದ ಅತ್ಯಂತ ದೊಡ್ಡ ಮಟ್ಟದ ಟ್ರಾನ್ಸ್ಪೋರ್ಟ್ ಮಾಧ್ಯಮದಲ್ಲಿ ರೈಲ್ವೆ ಇಲಾಖೆ ಅತ್ಯಂತ ಪ್ರಮುಖ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಇನ್ನು ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಆಗಾಗ ಒಳ್ಳೊಳ್ಳೆ ಯೋಜನೆಗಳನ್ನು ಜಾರಿಗೆ ತರುತ್ತದೆ. ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದ ಟಿಕೆಟ್ ದರ (Indian Railways Ticket Price) ದ ಮೇಲೆ ರಿಯಾಯಿತಿಯನ್ನು ಕೂಡ ನೀಡುವಂತಹ ಕೆಲಸವನ್ನು ಮಾಡಿತ್ತು. ಆದರೆ ಲಾಕ್ಡೌನ್ ನಂತರದಿಂದ ಈ ಯೋಜನೆಯನ್ನು ರದ್ದುಗೊಳಿಸಿತ್ತು. ಆದರೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಈಗ ಮತ್ತೆ ಈ ಯೋಜನೆಯ ಚಾಲ್ತಿಗೆ ತರಲಾಗುತ್ತಿದೆ. ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.
ಲಾಕ್ಡೌನ್ ಗಿಂತ ಮುಂಚೆ ಹಿರಿಯ ನಾಗರಿಕರಿಗೆ ಅದರಲ್ಲೂ ವಿಶೇಷವಾಗಿ ಮಹಿಳಾ ಹಿರಿಯ ನಾಗರಿಕರಿಗೆ ಟಿಕೆಟ್ ದರದ (Indian Railways Ticket Price) ಮೇಲೆ 50 ಪ್ರತಿಶತ ರಿಯಾಯಿತಿ ಹಾಗೂ ಪುರುಷ ಹಿರಿಯ ನಾಗರಿಕರ ಟಿಕೆಟ್ ದರದ ಮೇಲೆ 40 ಪ್ರತಿಶತ ರಿಯಾಯಿತಿಯನ್ನು ನೀಡಲಾಗುತ್ತಿತ್ತು.
60 ವರ್ಷದ ಮೇಲಿನ ಪುರುಷರನ ಹಿರಿಯ ಪುರುಷನಾಗರಿಕರು ಹಾಗೂ 58 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರನ್ನ ಮಹಿಳಾ ಹಿರಿಯ ನಾಗರಿಕರು ಎಂಬುದಾಗಿ ಪರಿಗಣಿಸಲಾಗುತ್ತದೆ. ಇದಕ್ಕಾಗಿ ಟಿಕೆಟ್ ಬುಕ್ ಮಾಡುವ ಸಂದರ್ಭದಲ್ಲಿಯೇ ನಿಮ್ಮ ವಯಸ್ಸಿನ ಆಧಾರದ ಮೇಲೆ ಟಿಕೆಟ್ ದರದಲ್ಲಿ ರಿಯಾಯಿತಿ ಪಡೆದುಕೊಳ್ಳುವಂತಹ ಫಾರ್ಮ್ ಅನ್ನು ತುಂಬಿಸಬೇಕಾಗುತ್ತದೆ. ರೈಲ್ವೆ ಇಲಾಖೆ ಕಡೆಯಿಂದ ಸ್ಲೀಪರ್ ಕೋಚ್ ಮೇಲೆ ರಿಯಾಯಿತಿಯನ್ನು ನೀಡಬಹುದಾಗಿದೆ.
ಹೀಗಾಗಿ ಹಿರಿಯ ನಾಗರಿಕರು ಟಿಕೆಟ್ ಬುಕ್ ಮಾಡುವುದಕ್ಕಿಂತ ಮುಂಚೆ ಈ ನಿಯಮಗಳನ್ನು ತಿಳಿದುಕೊಂಡು ಈ ನಿರ್ದಿಷ್ಟ ಸೀಟ್ ನಲ್ಲಿ ಮಾತ್ರ ಈ ರಿಯಾಯಿತಿ ದರವನ್ನು ಪಡೆದುಕೊಳ್ಳಬಹುದಾಗಿದೆ.