ಇಂದು ರೇಷನ್ ಕಾರ್ಡ್ (Ration Card) ಬಹಳಷ್ಟು ಅಗತ್ಯವಾಗಿದ್ದು ಇದರ ಮೂಲಕ ಸರಕಾರದಿಂದ ಹಲವು ರೀತಿಯ ಸೌಲಭ್ಯ ಗಳು ಸಿಗ್ತಾ ಇದೆ. ಅದರಲ್ಲೂ ಬಿಪಿಎಲ್ ಕಾರ್ಡ್ (BPL Card) ಬಳಕೆ ಇಂದು ಹೆಚ್ಚಾಗಿದ್ದು ರಾಜ್ಯದಲ್ಲಿ ಶೇ 80% ಬಿಪಿಎಲ್ ಪಡಿತರ ದಾರರು ಇದ್ದಾರೆ. ಆದರೆ ಇದೀಗ ಅನರ್ಹ ಬಿಪಿಎಲ್ ಕಾರ್ಡ್ (BPL Card) ಗಳನ್ನು ಸರಕಾರ ಪತ್ತೆ ಹೆಚ್ಚಿದ್ದು ಇಂತಹ ಕಾರ್ಡ್ ಗಳನ್ನು ಸರಕಾರ ರದ್ದು ಮಾಡಲು ಮುಂದಾಗಿದೆ.
ಇಂದು ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿ ದಾರರು, ಹೆಚ್ಚಿನ ಕೃಷಿ ಭೂಮಿ ಹೊಂದಿದ್ದವರು ಕೂಡ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದು ಇಂತಹ ಅನರ್ಹರ ಕಾರ್ಡ್ ರದ್ದು ಆಗಲಿದೆ. ಇಂದು ಬಡವರ್ಗದ ಜನರಿಗಿಂತ ಅನರ್ಹರೇ ಹೆಚ್ಚಾಗಿ ಬಿಪಿಎಲ್ ಕಾರ್ಡ್ (BPL Card) ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದು ಸರಕಾರ ಸೂಕ್ತವಾಗಿ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡ್ತಾ ಇದೆ. ನಕಲಿ ದಾಖಲೆ ಪಡೆದುಕೊಂಡಿದ್ದರೆ ಇಂತಹ ಕಾರ್ಡ್‌ಗಳನ್ನು ಸರಕಾರ ರದ್ದು ಮಾಡಲಿದೆ.
ಇಷ್ಟು ಕಾರ್ಡ್ ರದ್ದು:
ಈಗಾಗಲೇ ರಾಜ್ಯದಲ್ಲಿ ಒಟ್ಟು 20,00,000ಕ್ಕೂ ಹೆಚ್ಚು ನಕಲಿ ದಾಖಲೆ ನೀಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡಿದ್ದು ಇಂತಹ ಅನರ್ಹ ಕಾರ್ಡ್‌ಗಳನ್ನು ರದ್ದುಪಡಿಸಲು ಸರ್ಕಾರ ಮುಂದಾಗಿದೆ. ಬಡತನ ರೇಖೆಗಿಂತ ಮೇಲಿದ್ದವರು ಸರಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು, ವೈಟ್ ಬೋರ್ಡ್ ಕಾರು ಹೊಂದಿರುವವರು, ಸ್ವಂತ ಕೃಷಿ ಉಪಕರಣ ಹೊಂದಿರುವವರು, ಸ್ವಂತ ಜಮೀನು, ಹಲವು ಪ್ಲ್ಯಾಟ್ ಹೊಂದಿದವರ ಮೇಲೆ ಅಧಿಕಾರಿಗಳು ಕಣ್ಣಿಟ್ಟಿದ್ದು ದಾಖಲೆ ಪರಿಶೀಲನೆ ಮಾಡಿ ಅನರ್ಹ ಕಾರ್ಡ್ ಇದ್ದರೆ ರದ್ದು ಪಡಿಸಲಾಗುತ್ತದೆ.
ಬಿಪಿಎಲ್ ಕಾರ್ಡ್ (BPL Card) ಗಳನ್ನು ಅರ್ಹತೆಯಿಲ್ಲದವರೂ ಪಡೆದು, ಅನ್ನಭಾಗ್ಯ, ಗೃಹಲಕ್ಷ್ಮಿ ಸೇರಿದಂತೆ ಸರಕಾರದ ನಾನಾ ಸೌಲಭ್ಯಗಳನ್ನು ಪಡೆಯುತ್ತಿದ್ದು ಇಂತಹ ಕಾರ್ಡ್ ರದ್ದು ಪಡಿಸಿ ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿ ಕರೆಯಲಾಗುತ್ತದೆ. ಹಾಗಾಗಿ ಸರಕಾರ ಇದೀಗ ಖಡಕ್ ಸೂಚನೆ ನೀಡಿದ್ದು ಅನರ್ಹರ ಕಾರ್ಡ್ ರದ್ದು ಪಡಿಸಲು ಮುಂದಾಗಿದೆ.
ಇದೀಗ ರಾಜ್ಯದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮೂಲಕ ರಾಜ್ಯದಲ್ಲಿ 1.03 ಕೋಟಿ ಬಿಪಿಎಲ್ ಕಾರ್ಡ್ ಪ್ರಸ್ತುತ ಇರಬೇಕು. ಆದರೆ ಈಗ 1.16 ಕೋಟಿಗೂ ಹೆಚ್ಚು ಬಿಪಿಎಲ್ ಕಾರ್ಡ್ ಇರಲಿದ್ದು 14 ಲಕ್ಷ ಹೆಚ್ಚುವರಿ ಕಾರ್ಡ್‌ಗಳು ಇರಲಿದೆ.ಹಾಗಾಗಿ ಇದೀಗ ಮತ್ತೆ ಕಟ್ಟುನಿಟ್ಟಾಗಿ ಈ ನಿಯಮ ಪಾಲಿಸಲು ನಿರ್ಧರಿಸಲಾಗಿದೆ.