ವಾಹನ ಸವಾರರ ಹಿತ ದೃಷ್ಟಿಯಿಂದ ಸಾರಿಗೆ ಇಲಾಖೆಯು ಈಗಾಗಲೇ ಹಲವು ರೀತಿಯ ನಿಯಮ ಗಳನ್ನು ಜಾರಿ ಮಾಡಿದೆ. ಈಗಾಗಲೇ ವಾಹನ ಸವಾರರಿಗೆ ಟ್ರಾಫಿಕ್ ನಿಯಮ ಗಳನ್ನು (Traffic Rules) ಬಿಗಿ ಗೊಳಿಸಿದ್ದು ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಟ್ರಾಫಿಕ್ ಪೊಲೀಸರು ದಂಡ ಕೂಡ ವಿಧಿಸಲಿದ್ದಾರೆ. ಹಾಗೆಯೇ 2019ರ ಏಪ್ರಿಲ್ 1ರ ಮೊದಲು ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ ಪಿ (HSRP) ಕಡ್ಡಾಯ ವಾಗಿದ್ದು ಇನ್ನುಹೆಚ್ಚಿನ ವಾಹನ ಸವಾರರು ಅಳವಡಿಕೆ ಮಾಡಿಲ್ಲ.
ಈ ನಿಯಮವು ಏಪ್ರಿಲ್ 2019 ಕ್ಕಿಂತ ಮೊದಲು ನೋಂದಣಿ ಇರುವಂತಹ ದ್ವಿಚಕ್ರ ವಾಹನ, ತ್ರಿಚಕ್ರ ವಾಹನ, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್, ಪ್ರಯಾಣಿಕರ ಕಾರು ಸೇರಿ ಎಲ್ಲ ಹಳೆಯ ವಾಹನಗಳಿಗೆ ಈ ನಿಯಮ ಇರಲಿದೆ.ಒಂದು ವೇಳೆ ನೀಡಿರುವ ಅವಧಿ ಒಳಗೆ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಸದಿದ್ದರೆ 500 ರೂ.ನಿಂದ 1,000 ರೂ.ವರೆಗೆ ದಂಡ ತೆರೆಬೇಕಾಗುತ್ತದೆ.
ಕೊನೆಯ ದಿನ ವಾಗಿದೆ:
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ (HSRP Number Plate) ಅಳವಡಿಕೆ ಕೂಡ ಕಡ್ಡಾಯ ಮಾಡಿದ್ದು ಈಗಾಗಲೇ ಹಲವಷ್ಟು ಭಾರಿ ಸಮಯ ವಿಸ್ತರಣೆ ಮಾಡಲಾಗಿದೆ.ಇದೀಗ ಅಳವಡಿಸಲು ಸೆಪ್ಟೆಂಬರ್ 15ರವರೆಗೆ ಅವಕಾಶ ನೀಡಲಾಗಿದ್ದು HSRP ಇಲ್ಲದ ವಾಹನ ಮಾಲೀಕರು ಸೆ.16 ರಿಂದ ದಂಡವನ್ನು ಪಾವತಿಸಬೇಕಾಗುತ್ತದೆ. ಹಾಗಾಗಿ ಆದಷ್ಟು ಬೇಗ ನೀವು ನಿಮ್ಮ ವಾಹನದ ನಂಬರ್ ಪ್ಲೇಟ್ ಹಾಕಿಕೊಳ್ಳಿ. ಇದರಿಂದ ದಂಡ ಬೀಳೋದು ತಪ್ಪೋದಷ್ಟೇ ಅಲ್ಲ, ನಿಮ್ಮ ವಾಹನ ಕಳ್ಳತನ ಕೂಡ ತಡೆಯಬಹುದು.
ಯಾಕೆ ಅಗತ್ಯ?
ಈ ನೋಂದಣಿ ಯಲ್ಲಿ ನಿಮ್ಮ ವಾಹನದ ನೋಂದಣಿ ಸಂಖ್ಯೆ, ಛಾಸಿ ಸಂಖ್ಯೆ, ಎಂಜಿನ್ ಸಂಖ್ಯೆ ಇರಲಿದ್ದು ಈ ಮಾಹಿತಿಯು ನಿಮ್ಮ ವಾಹನದ ರಿಜಿಸ್ಟ್ರೇಷನ್ ಸರ್ಟಿಫಿಕೆಟ್‌ನಲ್ಲಿ (Vehicle RC) ಲಭ್ಯ ಇರುತ್ತವೆ.ಎಲ್ಲಾ ಮಾಹಿತಿಗಳೂ ಕೇಂದ್ರೀಯ ಡೆಟಾಬೇಸ್‌ನಲ್ಲಿ ಸಂಗ್ರಹ ಇರಲಿದ್ದು ನಿಮ್ಮ ವಾಹನ ಕಳ್ಳತನವಾದ್ರೆ ಈ ಮಾಹಿತಿಯನ್ನ ಬಳಸಿಕೊಂಡು ಯಾರ ಬಳಿ ಇದೆ ಎಂದು ಪತ್ತೆ ಹಚ್ಚ ಬಹುದು. ಇನ್ನು ಪ್ಲೇಟ್‌ನಲ್ಲಿ ಇರುವ ಮಾಹಿತಿಯನ್ನ ತಿದ್ದಲು ಕೂಡಾ ಸಾಧ್ಯವಿಲ್ಲ. ಒಂದು ವೇಳೆ ವಾಹನದ ಬದಲು ಕೇವಲ ಪ್ಲೇಟ್ ಕಳ್ಳತನ ಮಾಡಿದರೆ, ಅದನ್ನು ಮರುಬಳಕೆ ಮಾಡೋದಕ್ಕೂ ಆಗೋದಿಲ್ಲ.
ನಂಬರ್ ಪ್ಲೇಟ್ ಹಾಕಿಸಲು https://transport.karnataka.gov.in ಅಥವಾ www.siam.in ಭೇಟಿ ನೀಡಿ ಮತ್ತು Book HSRP ನ್ನು ಕ್ಲಿಕ್ ಮಾಡಿ ನೊಂದಣಿ ಮಾಡಬಹುದಾಗಿದೆ.ಇಲ್ಲದಿದ್ದಲ್ಲಿ
ನೀವು ನಿಮ್ಮ ವಾಹನ ಖರೀದಿ ಮಾಡಿದ ಶೋ ರೂಂ ಅಥವಾ ಡೀಲರ್ ಬಳಿಗೆ ಹೋಗಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಬಹುದು.