ಆಧಾರ್ ಕಾರ್ಡ್ ಬಗ್ಗೆ ನಿಮಗೆಲ್ಲರಿಗೂ ತಿಳಿದಿರಬಹುದು 10 ವರ್ಷಕ್ಕಿಂತ ಹಳೆಯದಾಗಿರುವಂತಹ ಆಧಾರ್ ಕಾರ್ಡ್ ಅನ್ನು (Aadhaar Card) ಅಪ್ಡೇಟ್ ಮಾಡಿಸಿಕೊಳ್ಳಬೇಕು ಎನ್ನುವುದಾಗಿ ಆಧಾರ್ ಕಾರ್ಡ್ ನಿರ್ಮಾಣ ಮಾಡಿರುವಂತಹ ಸಂಸ್ಥೆಯಾಗಿರುವ UIDAI ಅಧಿಕೃತವಾಗಿ ಘೋಷಣೆ ಮಾಡಿದೆ. ಹೀಗಾಗಿ ಬೇರೆ ಬೇರೆ ಸಾಕಷ್ಟು ಕೆಲಸಗಳನ್ನು ಮಾಡುವುದಕ್ಕೆ ಯಾವ ರೀತಿಯಲ್ಲಿ ಸೆಪ್ಟೆಂಬರ್ ತಿಂಗಳು ಅತ್ಯಂತ ಪ್ರಮುಖ ತಿಂಗಳಾಗಿ ಕಾಣಿಸಿಕೊಳ್ಳುತ್ತೋ, ಅದೇ ರೀತಿಯಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡೋದಕ್ಕು ಕೂಡ ಇದು ಪ್ರಮುಖವಾದ ತಿಂಗಳಾಗಿದೆ.
ಈಗಾಗಲೇ ಆಧಾರ್ ಕಾರ್ಡ್ (Aadhaar Card) ಅನ್ನು ಉಚಿತವಾಗಿ ಅಪ್ಡೇಟ್ ಮಾಡುವಂತಹ ದಿನಾಂಕಗಳು ಸಾಕಷ್ಟು ಬಾರಿ ಮುಂದೂಡಿಕೆಯಾಗಿವೆ ಹಾಗೂ ಈ ಬಾರಿ ಸೆಪ್ಟೆಂಬರ್ 14 ಕೊನೆಯ ದಿನಾಂಕ ಎಂಬುದನ್ನ ಸಂಸ್ಥೆ ಅಧಿಕೃತವಾಗಿ ಘೋಷಣೆ ಮಾಡಿದೆ. UIDAI ನ ಅಧಿಕೃತ ವೆಬ್ ಸೈಟ್ ನಲ್ಲಿ ನೀವು ಉಚಿತವಾಗಿ ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡುವಂತಹ ಅವಕಾಶವನ್ನು ನೀಡಲಾಗಿದೆ.
ಸೆಪ್ಟೆಂಬರ್ 14ನೇ ದಿನಾಂಕದಿಂದ ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಅಪ್ಡೇಟ್ ಮಾಡಬೇಕು ಎನ್ನುವಂತಹ ಅಗತ್ಯತೆ ನಿಮಗಿದ್ರೆ 50 ರೂಪಾಯಿಗಳ ಶುಲ್ಕವನ್ನು ನೀವು ಪಾವತಿ ಮಾಡಬೇಕಾಗಿರುತ್ತದೆ ಅನ್ನುವುದನ್ನ ನೀವು ಈ ಸಂದರ್ಭದಲ್ಲಿ ತಿಳಿದುಕೊಳ್ಳಬೇಕಾಗಿದೆ.
ಈ ರೀತಿ ವೇಗವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು:
- https://uidai.gov.in/ ಇದು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿದ್ದು ಇದರ ಹೋಂ ಪೇಜ್ ಗೆ ನೀವು ಹೋಗಬೇಕಾಗಿರುತ್ತದೆ. ನಿಮ್ಮ ಆಧಾರ್ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಅನ್ನು ಸಬ್ಮಿಟ್ ಮಾಡುವ ಮೂಲಕ ಓಟಿಪಿ ಪಡೆದು ಅದನ್ನು ಸಬ್ಮಿಟ್ ಮಾಡಿ.
- ಡೀಟೇಲ್ಸ್ ಚೆಕ್ ಮಾಡಿ ಸರಿಯಾಗಿರುವಂತಹ ಡೀಟೇಲ್ಸ್ ಮೇಲೆ ಸರಿಯಾದ ರೀತಿಯಲ್ಲಿ ಕ್ಲಿಕ್ ಮಾಡಬೇಕಾಗಿರುತ್ತದೆ.
- ಇನ್ನು ಡೆಮೋಗ್ರಾಫಿಕ್ ತಪ್ಪುಗಳು ಸಿಕ್ಕಿದ್ರೆ ಅದರ ಮೇಲೆ ಗುರುತು ಮಾಡಿ ಸರಿಯಾದ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಬೇಕಾಗಿರುತ್ತದೆ.
- ಇನ್ನು ಈ ಸಂದರ್ಭದಲ್ಲಿ ನೀವು ನಿಮ್ಮ ಡಾಕ್ಯುಮೆಂಟ್ ಗಳನ್ನು JPEG, PNG ಹಾಗೂ ಪಿಡಿಎಫ್ ಫೈಲ್ ಅಲ್ಲಿ ಕೂಡ ಅಪ್ಲೋಡ್ ಮಾಡಬಹುದಾಗಿದೆ.