ಶಿಕ್ಷಣ ಅನ್ನೋದು ಇಂದು ಪ್ರತಿಯೊಂದು ಮಕ್ಕಳಿಗೂ ಬಹಳ ಮುಖ್ಯ ವಾಗಲಿದ್ದು ಕಡ್ಡಾಯ ಶಿಕ್ಷಣ ವನ್ನು ಸರಕಾರ ಜಾರಿ ಮಾಡಿದೆ, ಅದರಲ್ಲಿ ಮುಖ್ಯವಾಗಿ ಎಸ್ ಎಸ್ ಎಲ್ ಸಿ (SSLC) ಹಂತ ಅನ್ನುವುದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ಓದಿನ ಹಂತ ವಾಗಿದೆ. ಎಸ್ ಎಸ್ ಎಲ್ ಸಿ ಓದಿನಲ್ಲಿ ಉತ್ತಮ ಅಂಕ ಗಳನ್ನು ಪಡೆದು ಕೊಂಡರೆ ಮುಂದಿನ ಓದಿಗೆ ಸಹಕಾರ ಯಾಗಲಿದೆ. ಹಾಗಾಗಿ ಈ ಹಂತದ ಶಿಕ್ಷಣ ಕ್ಕೆ ಶಾಲೆ, ಸರಕಾರ ಹೆಚ್ಚಿನ ಒತ್ತು ನೀಡಲಿದೆ.
ಇದೀಗ ಎಸ್ ಎಸ್ ಎಲ್ ಎಲ್ ಪರೀಕ್ಷೆ (SSLC Exam) ವಿಚಾರವಾಗಿ ಸರಕಾರ ಹೊಸದಾದ ರೂಲ್ಸ್ ಒಂದನ್ನು ಜಾರಿ ಮಾಡಿದ್ದು ವಿದ್ಯಾರ್ಥಿಗಳು ಈ ಬಗ್ಗೆ ಗಮನ ಹರಿಸ ಬೇಕಿದೆ. ಇನ್ಮುಂದೆ ಮುಖ್ಯ ಪರೀಕ್ಷೆಯಂತೆ ಮಧ್ಯವಾರ್ಷಿಕ ಪರೀಕ್ಷೆಗೂ ಕೂಡ ವಿದ್ಯಾರ್ಥಿಗಳು ಹೆಚ್ಚು ತಯಾರು ಮಾಡಬೇಕಿದೆ. ಈ ಪರೀಕ್ಷೆ ಯು ಇನ್ಮುಂದೆ ಮುಖ್ಯ ಪರೀಕ್ಷೆ ಯಂತೆ ನಡೆಯಲಿದೆ.
ಎಸ್ಎಸ್ಎಲ್ಸಿ (SSLC) ಮಧ್ಯವಾರ್ಷಿಕ ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಶಾಲಾ ಮಂಡಳಿಯೇ ಸಿದ್ದಪಡಿಸುತ್ತಿದ್ದು. ಆದರೆ ಇನ್ಮುಂದೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಯಾರು ಮಾಡಲು ನಿರ್ಧರಿಸಿದೆ. ಈ ಹಿಂದೆ ಪೂರ್ವ ಸಿದ್ಧತಾ ಮತ್ತು ವಾರ್ಷಿಕ ಪರೀಕ್ಷೆಗಳಿಗೆ ಮಾತ್ರ ಮಂಡಳಿ ಪ್ರಶ್ನಿ ಪತ್ರಿಕೆ ಸಿದ್ದಪಡಿಸಿ ಕಳುಹಿಸುತ್ತಿತ್ತು. ಆದರೆ ಇದೀಗ ಮಧ್ಯವಾರ್ಷಿಕ ಪರೀಕ್ಷೆಗೂ ಪ್ರಶ್ನೆ ಪತ್ರಿಕೆ ತಯಾರಿಸಿ ನೀಡಲು ಮುಂದಾಗಿದೆ.
ಇನ್ನೇನು ಮಧ್ಯವಾರ್ಷಿಕ ಪರೀಕ್ಷೆಗಳಿಗೆ ಹೆಚ್ಚಿನ ಸಮಯ ಇಲ್ಲ. ಇದೀಗ ಇಲಾಖೆಯ ಈ ನಿರ್ಧಾರಕ್ಕೆ ಮುಂದಾಗಿರುವುದು ಹಲವರ ವಿರೋಧಕ್ಕೆ ಕೂಡ ಕಾರಣ ವಾಗಿದೆ. ಈ ರೀತಿಯ ಬದಲಾವಣೆಗಳನ್ನು ಜಾರಿ ಮಾಡಬೇಕಾದರೆ ಅದನ್ನು ಆರಂಭಿಕ ಶೈಕ್ಷಣಿಕ ವರ್ಷದಲ್ಲೇ ಮಾಡಬೇಕು. ಅರ್ಧವಾರ್ಷಿಕ ಪರೀಕ್ಷೆಗೆ ಯಾರು ಪ್ರಶ್ನೆ ಪತ್ರಿಕೆ ತಯಾರಿಸಬೇಕು ಎಂಬ ನಿರ್ಧಾರವನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಕೈಗೊಳ್ಳಬೇಕಿತ್ತು.ಇದೀಗ ವಿದ್ಯಾರ್ಥಿ, ಪೋಷ ಕರಿಗೂ, ಶಾಲಾ ಆಡಳಿತ ಮಂಡಳಿಗೂ ಗೊಂದಲ ಉಂಟು ಮಾಡಿದೆ.ಹಾಗಾಗಿ ವಿವಿಧೆಡೆ ವಿರೋಧ ಗಳು ಕೂಡ ಕೇಳಿಬರುತ್ತಿದೆ.
ಇದೀಗ ಈ ವರ್ಷ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಮುಖ್ಯ ಪರೀಕ್ಷೆಯ ಮಾದರಿಯಲ್ಲಿಯೇ ಮಂಡಳಿ ಹಂತದಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿ ಶಾಲೆಗಳಿಗೆ ಲಾಗಿನ್ ನೀಡಲು ಮುಂದಾಗಿರುವಂತದ್ದು, ಆದರೆ ಪ್ರಶ್ನೆ ಪತ್ರಿಕೆ ಮುದ್ರಣಕ್ಕೆ ಯಾವುದೇ ಅನುದಾನವನ್ನೂ ಸರಕಾರ ಶಾಲೆಗಳಿಗೆ ಬಿಡುಗಡೆ ಮಾಡಿಲ್ಲ. ಹಾಗಾಗಿ ಶಾಲಾ ಮಂಡಳಿಗೂ ದೊಡ್ಡ ತಲೆ ನೋವಾಗಿ ಬಿಟ್ಟಿದೆ.