ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ಸರ್ಕಾರ ಸರ್ಕಾರದಿಂದ ಸಿಗುವಂತಹ ಯೋಜನೆಗಳು ಸೇರಿದಂತೆ ಉಚಿತ ಆಹಾರಧಾನ್ಯಗಳನ್ನು ಪಡೆದುಕೊಳ್ಳುವುದಕ್ಕಾಗಿ ರೇಷನ್ ಕಾರ್ಡ್ (Ration Card) ಅನ್ನು ಜಾರಿಗೆ ತಂದಿದೆ. ಇನ್ನು ರೇಷನ್ ಕಾರ್ಡ್ ಅನ್ನು ಬಯೋಮೆಟ್ರಿಕ್ (Biometrics) ಸಿಸ್ಟಮ್ ಮೂಲಕ ಆಧಾರ್ ಕಾರ್ಡ್ (Aadhaar Card) ಜೊತೆಗೆ ಕೂಡ ಲಿಂಕ್ ಮಾಡಲಾಗುತ್ತದೆ.
ಒಂದು ವೇಳೆ ನಿಮಗೆ ಸರಿಯಾದ ರೀತಿಯಲ್ಲಿ ರೇಶನ್ ಸಿಕ್ತಾ ಇಲ್ಲ ಅಂದ್ರೆ ಅಥವಾ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ನೀವು ಈ ಬಗ್ಗೆ ದೂರನ್ನು ಸಲ್ಲಿಸ ಬಹುದಾಗಿದೆ.
ಈ ರೀತಿ ಮಾಡಿ:
- nfsa.gov.in ಇದು ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗಿ ನೀವು ನಿಮ್ಮ ದೂರನ್ನು ದಾಖಲಿಸಬಹುದಾಗಿದೆ. ಇದರಲ್ಲಿ ದೂರು ಸಲ್ಲಿಸುವಂತಹ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ರಾಜ್ಯ ಜಿಲ್ಲೆ ನಿಮ್ಮ ಹೆಸರು ಹಾಗೂ ಆಧಾರ್ ಕಾರ್ಡ್ (Aadhaar Card) ನಂಬರನ್ನು ಕೂಡ ಅಲ್ಲಿ ಕೇಳಿದ ರೀತಿಯಲ್ಲಿ ಫಿಲಪ್ ಮಾಡಬೇಕು.
- ಇದಾದ ನಂತರ ನಿಮ್ಮ ನ್ಯಾಯಬೆಲೆ ಅಂಗಡಿಯ ಆಯ್ಕೆನೂ ಕೂಡ ಮಾಡಿ ನಂತರ ನಿಮ್ಮ ದೂರನ್ನು ಅಲ್ಲಿ ಸಲ್ಲಿಸಬೇಕಾಗಿರುತ್ತದೆ. ನಿಮ್ಮ ದೂರು ಸಲ್ಲಿಕೆ ಆಗುತ್ತಿದ್ದಂತೆ ಸಂಬಂಧ ಪಟ್ಟಂತಹ ಅಧಿಕಾರಿಗಳು ಆ ಬಗ್ಗೆ ಕಾರ್ಯನಿರ್ವಹಿಸುತ್ತಾರೆ.
- ಇದೇ ವೆಬ್ಸೈಟ್ನಲ್ಲಿ ಟೋಲ್ ಫ್ರೀ ನಂಬರ್ ಅನ್ನು ಕೂಡ ನೀಡಿರುತ್ತಾರೆ. ಅದಕ್ಕೆ ಕರೆ ಮಾಡುವ ಮೂಲಕ ನೀವು ನಿಮ್ಮ ದೂರನ್ನು ಸಲ್ಲಿಸಬಹುದಾಗಿದೆ ಹಾಗೂ ಅಲ್ಲಿ ಸಂಬಂಧಪಟ್ಟಂತಹ ಅಧಿಕಾರಿಗಳು ಈ ವಿಚಾರದ ಬಗ್ಗೆ ಪರಿಹಾರವನ್ನು ಒದಗಿಸುವಂತಹ ಕೆಲಸವನ್ನು ಮಾಡುತ್ತಾರೆ.